ಶುಕ್ರವಾರ, ಮೇ 20, 2022
26 °C

ಸಹಕಾರಿ ಸಂಘಗಳು ಮಾದರಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ : ಪಟ್ಟಣದ ಕಾವೇರಿ ಬಡಾವಣೆಯಲ್ಲಿ ನಡೆಸುತ್ತಿದ್ದ  ಹಣ್ಣು ಸಂಸ್ಕರಣಾ ಘಟಕವನ್ನು ರೂ. 50ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಮಾದರಿಯಲ್ಲಿ ಆಧುನೀಕರಣಗೊಳಿಸಿರುವ ರೈತ ಸಮು ದಾಯ ಭವನವನ್ನು ಶುಕ್ರವಾರ ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡಲಾಯಿತು. ರೈತ ಸಮುದಾಯ ಭವನವನ್ನು ಉದ್ಘಾಟಿಸಿದ ಉಸ್ತುವಾರಿ ಸಚಿವ ಕೃಷ್ಣ ಪಾಲೇಮಾರ್ ಮಾತನಾಡಿ,  ಸಂಘದ ವತಿಯಿಂದ ರೈತರ ಉಪಯೋಗಕ್ಕಾಗಿ ಸುಂದರವಾಗಿ ನಿರ್ಮಿಸಿರುವ ರೈತರ ಭವನದ ಮೂಲಕ ರೈತರ ಆಶೋತ್ತರ ಗಳು ಈಡೇರಲಿ. ರೈತರು ಈ ಭವನವನ್ನು ಸದುಪಯೋಗಪಡಿಸಿ ಕೊಳ್ಳಲಿ ಎಂದರು.

ಸರ್ಕಾರವು ಇಡೀ ದೇಶಕ್ಕೆ ಮಾದರಿ ಯಾಗುವಂತೆ ಸಹಕಾರಿ ಸಂಘಗಳ ಮೂಲಕ ರೈತರ ಅನುಕೂಲಕ್ಕಾಗಿ ಶೇ.1ರ ಬಡ್ಡಿದರದಲ್ಲಿ ಕೃಷಿ ಫಸಲಿನ ಸಾಲ ವಿತರಿಸುವ ಮೂಲಕ ರೈತರಿಗೆ ವಿವಿಧ ಸಾಲ ಸೌಲಭ್ಯ ನೀಡುತ್ತಿದೆ ಎಂದರು.

ಸಮಾರಂಭ ಉದ್ಘಾಟಿಸಿದ ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮಾತ ನಾಡಿ, ಜಿಲ್ಲೆಯಲ್ಲಿ ಶರವೇಗದಲ್ಲಿ ಬೆಳೆಯುತ್ತಿರುವ ಕುಶಾಲನಗರ ಪಟ್ಟಣದಲ್ಲಿ ಎಪಿಸಿಎಂಎಸ್ ರೈತರ ಅನುಕೂಲಕ್ಕಾಗಿ ನಿರ್ಮಿಸಿರುವ ರೈತ ಭವನ ಸಹಕಾರಿ ಕ್ಷೇತ್ರಕ್ಕೆ ಮಾದರಿಯಾಗಿದೆ. ಕೊಡಗು ಜಿಲ್ಲೆಯು ಹಿಂದಿನಿಂದಲೂ ಸಹಕಾರಿ ಕ್ಷೇತ್ರದಲ್ಲಿ ರಾಜ್ಯಕ್ಕೆ ಮಾದರಿ ಆಗುವ ಮೂಲಕ ಡಿಸಿಸಿ ಬ್ಯಾಂಕ್ ತನ್ನ ಪ್ರಗತಿಯಿಂದ ಹಲವಾರು ಬಾರಿ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ ಎಂದರು.ಜಿಲ್ಲೆಯಲ್ಲಿ ಹಿರಿಯ ಸಹಕಾರಿಗಳು ಕಟ್ಟಿ ಬೆಳೆಸಿದ ಸಹಕಾರಿ ಸಂಸ್ಥೆಗಳನ್ನು ಮುನ್ನಡೆಸುವ ಹೊಣೆಗಾರಿಕೆ ಯುವಜನಾಂಗದ ಮೇಲಿದೆ ಎಂದರು.ಅತಿಥಿ ಗೃಹ ಉದ್ಘಾಟಿಸಿದ ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಸುಂದರ ರೈತ ಸಮುದಾಯ ಭವನ ನಿರ್ಮಿಸಿದ ಸಂಘದ ಆಡಳಿತ ಮಂಡಳಿಯು ಜನರಿಗೆ ಉಪಯುಕ್ತ ಸೇವೆ ಸಲ್ಲಿಸುವ ಮೂಲಕ ಅಭಿನಂದನೆಗೆ ಅರ್ಹವಾಗಿದೆ. ಇದು ರೈತಪರ ಚಟುವಟಿಕೆಗಳು, ಸಭೆ, ಸಮಾರಂಭಗಳು, ಮದುವೆ ಮತ್ತಿತರ ಉಪಯುಕ್ತ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಸಹಕಾರಿಯಾಗಿದೆ ಎಂದರು.ಸರ್ಕಾರ ಸಹಕಾರಿ ಕ್ಷೇತ್ರದಡಿ ರೈತರ ಅನುಕೂಲಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಿರುವುದು ಗ್ರಾಮೀಣ ಜನರಿಗೆ ಹೆಚ್ಚಿನ ಪ್ರಯೋಜನವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಸಂಘದ ಅಧ್ಯಕ್ಷ ಎಂ.ಎನ್.ಕುಮಾರಪ್ಪ ಅವರ ವಿಶೇಷ ಆಸಕ್ತಿ ಮತ್ತು ಆಡಳಿತ ಮಂಡಳಿಯ ಸದಸ್ಯರ ಸಮನ್ವಯತೆಯಿಂದ ರೂಪುಗೊಂಡ ರೈತ ಭವನವು ಜಿಲ್ಲೆಯ ಸಹಕಾರಿ ಕ್ಷೇತ್ರದ ಅಭ್ಯುದಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮೂರು ದಶಕಗಳಿಂದ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತಿರುವ ಕುಮಾರಪ್ಪ ಅಂತಹವರ ನಿಸ್ವಾರ್ಥ ಸಹಕಾರಿಯನ್ನು ಗುರುತಿಸಿ `ಸಹಕಾರ ಶ್ರೀ~ ಪ್ರಶಸ್ತಿ ನೀಡಿ ಗೌರವಿಸಬೇಕಿದೆ ಎಂದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಾತಂಡ ಎ.ರಮೇಶ್ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯ ಪ್ರತಿಫಲವೇ ಈ ಸಮುದಾಯ ಭವನ ನಿರ್ಮಾಣಗೊಳ್ಳಲು ಕಾರಣವಾಗಿದೆ ಎಂದರು.ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ.ಮೇದಪ್ಪ, ಜಿ.ಪಂ.ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಮಾಜಿ ಉಪಾಧ್ಯಕ್ಷೆ ಕಮಲಾ ಗಣಪತಿ, ಡಿಸಿಸಿ ಉಪಾಧ್ಯಕ್ಷ ಎಸ್.ಬಿ.ಭರತ್‌ಕುಮಾರ್, ನಿರ್ದೇಶಕ ಬಲ್ಲಾರಂಡ ಮಣಿ ಉತ್ತಪ್ಪ, ಜಿ.ಪಂ.ಸದಸ್ಯರಾದ ಬಿ.ಬಿ.ಭಾರತೀಶ್, ಸಿ.ಕೆ.ಇಂದಿರಮ್ಮ, ಸುಲೋಚನಾ, ಶಿವಪ್ಪ, ಎಪಿಸಿಎಂಎಸ್ ಅಧ್ಯಕ್ಷ ಎಂ.ಎನ್.ಕುಮಾರಪ್ಪ, ತಾ.ಪಂ.ಅಧ್ಯಕ್ಷ ವಿ.ಕೆ.ಲೋಕೇಶ್‌ಕುಮಾರ್, ಸದಸ್ಯ ಬಿ.ವಿ.ಸತೀಶ್, ಸಹಕಾರ ಸಂಘಗಳ ಡಿಆರ್ ಷಣ್ಮುಖಸ್ವಾಮಿ, ಎಡಿಆರ್ ಜಿ.ಜಗದೀಶ್ , ಸಂಘದ ಉಪಾಧ್ಯಕ್ಷ ಎಂ.ಕೆ.ಕುಶಾಲಪ್ಪ, ನಿರ್ದೇಶಕರಾದ ಡಿ.ಸಿ.ಶಿವಣ್ಣ, ಎಚ್.ಬಿ.ಚಂದ್ರಪ್ಪ, ಕೆ.ಎಸ್.ರತೀಶ್, ಆರ್. ಕುಮಾರಸ್ವಾಮಿ, ಎಚ್.ಕೆ.ಭೈರ, ಲಲಿತ, ಕೆ.ಕೆ.ಗಿರಿಜ, ಕಾರ್ಯದರ್ಶಿ ಬಿ.ಎಂ.ಪಾರ್ವತಿ,  ಇದ್ದರು. ಉಪನ್ಯಾಸಕ ಎಚ್.ಕೆ.ತಿಲಗಾರ್ ನಿರ್ವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.