ಕೋಲ್ಕತ್ತ (ಐಎಎನ್ಎಸ್): ಉಭಯ ದೇಶಗಳೂ ಶಾಂತಿ ಹಾಗೂ ಸ್ಥಿರತೆ ಕಾಪಾಡಲು ಶ್ರಮಿಸುತ್ತಿರುವುದರಿಂದ ಭಾರತ- ಚೀನಾ ನಡುವಿನ ಆರ್ಥಿಕ ಸಹಕಾರ ಮುಂದುವರಿಯಲಿದೆ ಎಂದು ಚೀನಾದ ರಾಯಭಾರಿ ಝಾಂಗ್ ಯಾನ್ ಶುಕ್ರವಾರ ಹೇಳಿದ್ದಾರೆ.

ಭಾರತವು ಅಗ್ನಿ-5 ಖಂಡಾಂತರ ಕ್ಷಿಪಣಿಯ ಪ್ರಯೋಗಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದ ಬೆನ್ನಲ್ಲಿಯೇ ಚೀನಾ ರಾಯಭಾರಿ ಈ ಹೇಳಿಕೆ ನೀಡಿರುವುದು ಮಹತ್ವದ್ದಾಗಿದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಕ್ಷಿಪ್ರಗತಿಯಲ್ಲಿ ಮುನ್ನಡೆಯುತ್ತಿದ್ದು, 2015ರ ಹೊತ್ತಿಗೆ 100 ಶತಕೋಟಿ ಡಾಲರ್ ಗುರಿ ತಲುಪಲಿದೆ ಎಂದು ಝಾಂಗ್ ಹೇಳಿದ್ದಾರೆ.

ರಾಜಕೀಯ ಇಚ್ಛಾಶಕ್ತಿಯ ಸಂಕೇತ: ಕಾಂಗ್ರೆಸ್
ನವದೆಹಲಿ (ಐಎಎನ್ಎಸ್): ಅಗ್ನಿ-5 ಕ್ಷಿಪಣಿಯ ಯಶಸ್ವಿ ಪ್ರಯೋಗವು ಭಾರತದ ತಾಂತ್ರಿಕ ಪರಾಕ್ರಮ ಹಾಗೂ ಸರ್ಕಾರದ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ವಕ್ತಾರ ಮನಿಷ್ ತಿವಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 8 ವರ್ಷಗಳಲ್ಲಿ ಸರ್ಕಾರವು ದೇಶದ ವ್ಯೆಹಾತ್ಮಕ ಸ್ವಾಯತ್ತತೆಯನ್ನು ಗಟ್ಟಿಗೊಳಿಸಲು ವ್ಯವಸ್ಥಿತವಾಗಿ ಹೋರಾಟ ಮಾಡಿದೆ ಎಂದರು.

ಭಾರತ ವಾಣಿಜ್ಯ ಮಂಡಳಿ (ಬಿಸಿಸಿ) ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಈ ವರ್ಷ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಉತ್ತಮವಾಗಿ ನಡೆಯಲಿದೆ~ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಚೀನಾದ ಹಲವು ಪ್ರದೇಶಗಳವರೆಗೆ ದಾಳಿ ಸಾಮರ್ಥ್ಯ ಹೊಂದಿರುವ ಅಗ್ನಿ-5 ಕ್ಷಿಪಣಿ ಪ್ರಯೋಗವು ಎರಡು ದೇಶಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಹೆಚ್ಚಿಸಲಿದೆಯೇ ಎಂಬ ಪ್ರಶ್ನೆಗೆ, `ನಾನು ಕೇವಲ ಆರ್ಥಿಕ ಸಹಕಾರದ ಪ್ರಚಾರಕನಷ್ಟೆ~ ಎಂದರು. `

ಹಣಕಾಸು ಹಾಗೂ ಹೂಡಿಕೆಯಂಥ ಕ್ಷೇತ್ರದಲ್ಲಿ ಉಭಯ ದೇಶಗಳು ಪರಸ್ಪರ ಸಹಕಾರ ವೃದ್ಧಿಸಿಕೊಳ್ಳುವ ಅವಕಾಶವಿದೆ. ಚೀನಾದ ಅನೇಕ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ತುದಿಗಾಲ ಮೇಲೆ ನಿಂತಿವೆ. ಅದೇ ರೀತಿ ಇಲ್ಲಿಯ ಕಂಪನಿಗಳೂ ನಮ್ಮಲ್ಲಿ ಹೂಡಿಕೆಗೆ ಉತ್ಸಾಹ ತೋರಿವೆ~ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.