ಬುಧವಾರ, ಏಪ್ರಿಲ್ 14, 2021
24 °C

ಸಹಜ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥೆನ್ಸ್, ಗ್ರೀಸ್ (ಪಿಟಿಐ): ಭಾರತದ ಸಹಜ್ ಗ್ರೋವರ್ ಇಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಚೆಸ್ ಚಾಂಪಿಯನ್‌ಷಿಪ್‌ನ 11ನೇ ಸುತ್ತಿನ ಪಂದ್ಯದಲ್ಲಿ ಎಸ್ಟೋನಿಯದ ಮಾರ್ಕ್ ಲಾಪಿಡಸ್ ಅವರನ್ನು ಮಣಿಸಿದರು.

ಚಾಂಪಿಯನ್‌ಷಿಪ್‌ನಲ್ಲಿ ಸಹಜ್‌ಗೆ ದೊರೆತ ಆರನೇ ಗೆಲುವು ಇದಾಗಿದೆ. ಇದೀಗ ಅವರು ಒಟ್ಟು 7.5 ಪಾಯಿಂಟ್ ಹೊಂದಿದ್ದಾರೆ. ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿರುವ ಭಾರತದ ಗ್ರ್ಯಾಂಡ್‌ಮಾಸ್ಟರ್ ಎರಡು ಸೋಲು ಕಂಡಿದ್ದಾರೆ.

ಸಹಜ್ 10ನೇ ಸುತ್ತಿನ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ಎದುರು ಸೋಲು ಅನುಭವಿಸಿದ್ದರು. ಈ ಕಾರಣ ಅವರಿಗೆ ಆತ್ಮವಿಶ್ವಾಸ ದೊರೆಯಲು ಗೆಲುವು ಅಗತ್ಯವಾಗಿತ್ತು. 27 ನಡೆಗಳಲ್ಲಿ ಲಾಪಿಡಸ್ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು.ಇನ್ನು ಎರಡು ಸುತ್ತುಗಳ ಪಂದ್ಯಗಳು ಬಾಕಿಯುಳಿದಿದ್ದು, ಸಹಜ್ ಜಂಟಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದರೆ ಅವರಿಗೆ ಐದರೊಳಗಿನ ಸ್ಥಾನ ಪಡೆಯಲು ಸಾಧ್ಯ. 12ನೇ ಸುತ್ತಿನ ಪಂದ್ಯದಲ್ಲಿ ಅವರು ಉಕ್ರೇನ್‌ನ ಯರೊಸ್ಲಾವ್ ಜೆರೆಬುಕ್ ವಿರುದ್ಧ ಪೈಪೋಟಿ ನಡೆಸುವರು.ಟರ್ಕಿಯ ಅಲೆಕ್ಸಾಂಡರ್ ಇಪಟೋವ್ ಮತ್ತು ಹಂಗರಿಯ ರಿಚರ್ಡ್ ರಾಪೊರ್ಟ್ ತಲಾ ಒಂಬತ್ತು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 11ನೇ ಸುತ್ತಿನ ಪಂದ್ಯದಲ್ಲಿ ಇಪಟೋವ್ ಸರ್ಬಿಯದ ಅಲೆಕ್ಸಾಂಡರ್ ಇಂಜಿಕ್ ವಿರುದ್ಧ ಗೆದ್ದರೆ, ರಾಪೊರ್ಟ್ ಸ್ವೀಡನ್‌ನ ನೈಲ್ಸ್ ಗ್ರಾಂಡೆಲಿಯಸ್ ಜೊತೆ ಡ್ರಾ ಸಾಧಿಸಿದರು. 8.5 ಪಾಯಿಂಟ್ ಕಲೆಹಾಕಿರುವ ಅರ್ಮೇನಿಯದ ಟೆರ್ ಸಹಕ್ಯಾನ್ ಮೂರನೇ ಸ್ಥಾನದಲ್ಲಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.