ಶನಿವಾರ, ಮೇ 21, 2022
22 °C

ಸಹಪಠ್ಯ ಚಟುವಟಿಕೆಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಬೋಧನೆಯಲ್ಲಿನ ಏಕತಾನತೆ  ನಿವಾರಿಸಲು, ಸಹಪಠ್ಯ ಚಟುವಟಿಕೆ ನಡೆಸಬೇಕು ಎಂದು ಕ್ಲಸ್ಟರ್ ಸಂಪನ್ಮೂಲಾಧಿಕಾರಿ ಎಂ. ರುದ್ರಯ್ಯ ಕರೆ ನೀಡಿದರು.ತಾಲ್ಲೂಕಿನ ಬೋರನಕುಂಟೆ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜವನಗೊಂಡನಹಳ್ಳಿ ಕ್ಲಸ್ಟರ್‌ಮಟ್ಟದ ಸಹಪಠ್ಯ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಲಿಕಾ ತಂತ್ರದಲ್ಲಿ ಬದಲಾವಣೆ ತರುವುದು, ಹಾಜರಾತಿ ಉತ್ತಮ ಪಡಿಸುವುದು, ನಾಡು-ನುಡಿ, ದೇಶಭಕ್ತಿ ಬಿಂಬಿಸುವುದು ಕೂಡಾ ಸಹಪಠ್ಯ ಚಟುವಟಿಕೆಗಳಲ್ಲಿ ಸೇರಿದೆ. ಶಿಕ್ಷಕರು ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಅವರು ಸಲಹೆ ಮಾಡಿದರು.ಗ್ರಾ.ಪಂ. ಸದಸ್ಯ ಬಿ.ಎನ್. ಜೀವೇಶ್ ಮಾತನಾಡಿ, ಸಹಪಠ್ಯ ಚಟುವಟಿಕೆಗಳಿಂದ ದೈಹಿಕ, ಬೌದ್ಧಿಕ, ಸಾಂಸ್ಕೃತಿಕ, ನೈತಿಕ, ಸಾಮಾಜಿಕ, ಮನೋರಂಜನೆ ಮೊದಲಾದ ಚಟುವಟಿಕೆಗಳನ್ನು ಒಳಗೊಂಡಿರುವ ಕಾರಣ ಸರ್ವತೋಮುಖ ಬೆಳವಣಿಗೆಗೆ, ಚಿಂತನೆಗೆ ಸಹಾಯಕವಾಗುತ್ತದೆ ಎಂದು ತಿಳಿಸಿದರು.ಗ್ರಾಮದ ಮುಖಂಡರಾದ ಸದಾಶಿವಯ್ಯ, ರಂಗಸ್ವಾಮಿ, ದಿವಾಕರ್ ಉಪಸ್ಥಿತರಿದ್ದರು. ಆರ್. ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಎನ್. ನರಸಿಂಹಮೂರ್ತಿ ಸ್ವಾಗತಿಸಿದರು. ಇಮಾಂ ಸಾಬಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.