ಹಾವೇರಿ: `ಹಬ್ಬ ಹರಿದಿನಗಳು ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿ ಸುವ ಮೂಲಕ ನಮ್ಮ ದೇಶವನ್ನು ವಿಶ್ವ ದಲ್ಲಿಯೇ ವಿಶಿಷ್ಟವಾಗಿ ನಿಲ್ಲುವಂತೆ ಮಾಡಿವೆ~ ಎಂದು ಶಿರಸಿಯ ಸಾಹಿತಿ ಧರಣೇಂದ್ರ ಕುರಕುರಿ ಹೇಳಿದರು.

ತಾಲ್ಲೂಕು ಮತ್ತು ಜಿಲ್ಲಾ ಸಾಹಿತ್ಯ ಪರಿಷತ್, ನಾಡಹಬ್ಬ ಉತ್ಸವ ಸಮಿತಿ, ಗೆಳೆಯರ ಬಳಗ, ಲಯನ್ಸ್ ಕ್ಲಬ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಜಿಲ್ಲಾ ಗುರುಭವನದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ನಾಡಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಂತ್ರಿಕತೆಯ ಓಟದಲ್ಲಿಯೂ ಹರಿದು ಹಂಚಿ ಹೋಗುತ್ತಿರುವ ಕುಟುಂಬ, ಸಮಾಜವನ್ನು ಒಗ್ಗೂಡಿ ಸುವ ಹಾಗೂ ದ್ವೇಷ ಅಸೂಯೆಯನ್ನು ಮರೆತು ಪ್ರತಿಯೊಬ್ಬರನ್ನು ಒಂದಾ ಗಿಸುವ ಶಕ್ತಿ ಈ ಹಬ್ಬಗಳಿಗಿದೆ ಎಂದರು.
ಪ್ರತಿಯೊಂದು ಉತ್ಸವಗಳು ಇಲ್ಲಿನ ಸಂಸ್ಕೃತಿಯ ಸಂಕೇತಗಳಾಗಿವೆ. ಆ ಸಂಕೇತಗಳನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಕೆಲಸ ನಡೆಯ ಬೇಕಿದೆ. ಈ ನಿಟ್ಟನಲ್ಲಿ ಇಲ್ಲಿನ ನಾಡ ಹಬ್ಬದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಮಾತನಾಡಿ, ಪಟ್ಟಣ ಪ್ರದೇಶ ಗಳಲ್ಲಿ ಹಬ್ಬಗಳು ಮಹತ್ವವನ್ನು ಕಳೆದು ಕೊಳ್ಳುತ್ತಿದ್ದು, ಗ್ರಾಮೀಣ ಪ್ರದೇಶದ ಜನರು ಮಾತ್ರ ನಮ್ಮ ಸಂಸ್ಕೃತಿ, ಪರಂಪರೆಯನ್ನು ಎತ್ತಿಹಿಡಿದಿದ್ದಾರೆ. ಮುಂದಿನ ಜನಾಂಗಕ್ಕೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಕೊಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ದೇಶದಲ್ಲಿ ಹತ್ತು ಹಲವು ಸಂಸ್ಕೃತಿ, ಪರಂಪರೆಗಳಿದ್ದರೂ ಅವುಗಳೆಲ್ಲವನ್ನು ಮೈಗೂಡಿಸಿಕೊಂಡೇ ಏಕತೆಯನ್ನು ಸಾರುತ್ತಿರುವ ಏಕೈಕ ದೇಶ ಭಾರತ ವಾಗಿದೆ. ಅದೇ ಕಾರಣಕ್ಕೆ ಜಗತ್ತಿನ ಇತರ ದೇಶಗಳಿಗೆ ಮಾದರಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದ ಸತೀಶ ಕುಲ ಕರ್ಣಿ, ಎನ್.ಎಸ್.ಪಾಟೀಲ, ಚಂದ್ರಪ್ಪ ಗುಡ್ಡಪ್ಪ ಬ್ಯಾಡಗಿ, ಕೆ.ಎಚ್.ಹಂಚಿ ಮನಿ, ಸಿ.ಜಿ.ಗುರುಲಿಂಗದೇವರ ಮಠ ಅವರನ್ನು ನಾಡಹಬ್ಬ ಉತ್ಸವ ಸಮಿತಿಯಿಂದ ಸನ್ಮಾನಿಸಲಾಯಿತು.

ಸಮಾರಂಭದ ಸಾನ್ನಿಧ್ಯವನ್ನು ಹುಕ್ಕೇರಿಮಠದ ಸದಾಶಿವ ಶ್ರೀಗಳು ಹಾಗೂ ಹೊಸಮಠದ ಬಸವಶಾಂತ ಲಿಂಗ ಶ್ರೀಗಳು, ಅಧ್ಯಕ್ಷತೆಯನ್ನು ನಾಡ ಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಶಿವಬಸಪ್ಪ ಎಸ್.ಮುಷ್ಠಿ ವಹಿಸಿದ್ದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಪಿ.ಡಿ.ಶಿರೂರ, ವ್ಯಾಪಾರಸ್ಥ ರಾದ ಶಿವಬಸಪ್ಪ ಹುರಳಿಕೊಪ್ಪ, ಆರ್.ಎಸ್.ಮಾಗನೂರ, ಗೆಳೆಯರ ಬಳಗದ ಅಧ್ಯಕ್ಷ ಕೃಷ್ಣಾ ಮಂಗಳೂರ, ಸಾಹಿತಿ ಸತೀಶ ಕುಲಕರ್ಣಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹಾವೇರಿ ಕಲಾ ತಂಡದ ಸದಸ್ಯರು ನಾಡಗೀತೆ ಹಾಡಿ ದರು. ಕಸಾಪ ತಾಲ್ಲೂಕು ಅಧ್ಯಕ್ಷ ವಿ. ಎಂ.ಪತ್ರಿ ಪ್ರಾಸ್ತಾ ವಿಕವಾಗಿ ಮಾತ ನಾಡಿದರು. ಶೋಭಾ ಜಾಗಟಗೇರಿ, ಜಿ.ಎಂ.ಓಂಕಾರಣ್ಣನವರ ನಿರೂಪಿ ಸಿದರು. ನಂತರ ವಿವಿಧ ಕಲಾ ತಂಡಗಳ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.