ಶನಿವಾರ, ಮೇ 15, 2021
24 °C

ಸಾಧಕರ ಸೇವೆ ಸ್ಮರಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಗೌರವಿ ಸುವುದರಿಂದ ಇತರರಿಗೂ ಸಾಧನೆ ಮಾಡಲು ಹಾಗೂ ಸೇವಾ ಕಾರ್ಯ ಕೈಗೊಳ್ಳಲು ಸ್ಫೂರ್ತಿ  ಎಂದು ನಗರಸಭಾ ಸದಸ್ಯ ಸೈಯದ್ ಇಕ್ಬಾಲ್ ಹೇಳಿದರು.  ಸ್ನೇಹ ಬಳಗ ಸಂಸ್ಥೆ ಈಚೆಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ಹಲವು ವ್ಯಕ್ತಿಗಳು ಸ್ವಾರ್ಥ ಮನೋಭಾವ ಇಲ್ಲದೆ ಸೇವೆ ಸಲ್ಲಿಸುತ್ತಾ ಇರುತ್ತಾರೆ. ಅಂಥವರಿಗೆ ಯಾವುದೇ ಸನ್ಮಾನ ಅಥವಾ ಪುರಸ್ಕಾರಗಳ ನಿರೀಕ್ಷೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಸಮಾಜ ಅವರ ಸೇವೆ ಸ್ಮರಿಸುವುದು ಅತ್ಯಗತ್ಯ ಎಂದರು.ನಗರಸಭಾ ಸದಸ್ಯ ಅರವಿಂದ್ ಸಿ.ರಾಯ್ಕರ್ ಮಾತನಾಡಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸ ಲಾಯಿತು. ನಾಟಿ ವೈದ್ಯೆ ಭಾಗೀರತಿ ಬಾಪಾಟ್, ಪುರಷೋತ್ತಮ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.ಪುರಸಭಾ ಮಾಜಿ ಸದಸ್ಯ ಕೋರಿ ನಾಗರಾಜ್, ಸದಾನಂದ್‌ಗೌಡ, ದಿನಕರ್, ಶಿವಕುಮಾರ್ ಹಾಜರಿದ್ದರು. ಸುರೇಶ್ ಸ್ವಾಗತಿಸಿದರು. ಎಂ.ಗಣಪತಿ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.