ಸೋಮವಾರ, ಏಪ್ರಿಲ್ 12, 2021
24 °C

ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಹತ್ತು ಹಲವು ಪ್ರಶಸ್ತಿಗಳಿಸಿರುವ ಈತ   ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದಲ್ಲಿ ಕ್ರೀಡಾಕೂಟದಲ್ಲೂ ಜಿಲ್ಲೆಯನ್ನು ಪ್ರತಿನಿಧಿಸಿ ಸೈ ಎನಿಸಿಕೊಂಡವನು. ಹುಟ್ಟು ಮೂಗನಾದ ಈತ ಕ್ರೀಡಾ ಚಟುವಟಿಕೆಗಳಲ್ಲಿ ಸದಾ ಮುಂದು. ವ್ಯಾಸಂಗದಲ್ಲೂ ಚುರುಕು ಎನಿಸಿಕೊಂಡಿರುವ ಈತ ಶಾಲೆಯ ಕಣ್ಮಣಿ.ಇದು ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಯಲ್ಲಿ ವ್ಯಾಸಂಗ ಮಾಡು ತ್ತಿರುವ, ತಾಲ್ಲೂಕಿನ ವೈ,ಕೆ. ಮೋಳೆ ಗ್ರಾಮದ ಡಿ. ರಾಜೇಂದ್ರನ ಸಾಧನೆ.ಗ್ರಾಮದ ದೊಡ್ಡರಾಜು ಹಾಗೂ ಕುಸುಮಬಾಲೆ ದಂಪತಿಯ ಮಗನಾದ ಈತ ಹುಟ್ಟು ಮೂಗ. ಆದರೆ ಯಾವಾಗಲೂ ಚಟುವಟಿಕೆ ಯಿಂದ ಇರುವ ಈತ ಕ್ರೀಡಾ ಚಟುವಟಿಕೆಗಳಲ್ಲಿ ಸದಾ ಮುಂದೆ ಇರುತ್ತಿದ್ದ. `ಗುಂಡು ಎಸೆತ, ಬರ್ಜಿ ಎಸೆತ, ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಈತನಿಗೆ ಇಷ್ಟ ಎಂಬುದನ್ನು ತನ್ನ ಕೈ ಸನ್ನೆಯಿಂದಲೇ ಹೇಳುತ್ತಾನೆ. ಈ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹತ್ತು ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾನೆ.

ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸ್ವಲ್ಪದರಲ್ಲೇ ಬಹುಮಾನದಿಂದ ವಂಚಿತನಾದ ಈತ, ಇದರಲ್ಲಿ ಭಾಗವಹಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾನೆ~ ಎನ್ನುತ್ತಾರೆ ಶಾಲೆಯ ದೈಹಿಕ ಶಿಕ್ಷಕ ಎಲ್.ಡಿ. ಉಮೇಶ್.ಮುಂದೆಯೂ ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಬೇಕು ಹಾಗೂ ಶಾಲೆಯಲ್ಲಿ ಒಳ್ಳೆ ಅಂಕ ಪಡೆದು ಕೊಳ್ಳಬೇಕು ಎಂಬುದನ್ನು ತನ್ನ ಸ್ನೇಹಿತನಿಗೆ ಸನ್ನೆಯಿಂದಲೇ ಹೇಳುವ ಈತನ ಯಶಸ್ಸಿಗೆ ಪೋಷಕರು ಹಾಗೂ ಶಿಕ್ಷಕರು ಒಳ್ಳೆಯ ಮಾರ್ಗದರ್ಶಕ ರಾಗುವ ಅವಶ್ಯಕತೆ ಇದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.