ಸಾಧನೆ ನಡುವೆಯೂ ಮಹಿಳೆಗೆ ಸಮಸ್ಯೆ
ಬೆಂಗಳೂರು:‘ಮಹಿಳೆ ರಾಜಕೀಯ ಸೇರಿದಂತೆ ಶಿಕ್ಷಣ, ಸಾಮಾಜಿಕ, ಆರ್ಥಿಕ, ಸೈನ್ಯದಂಥ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡಿದ್ದರೂ, ಸ್ತ್ರೀಭ್ರೂಣ ಹತ್ಯೆಯಂಥ ಸಮಸ್ಯೆಗಳು ಅಸ್ತಿತ್ವದಲ್ಲಿವೆ’ ಎಂದು ಅಖಿಲ ಭಾರತೀಯ ತೇರಾಪಂಥ್ ಮಹಿಳಾ ಮಂಡಳದ ಕಾರ್ಯದರ್ಶಿ ವೀಣಾ ಬೇಡ್ ವಿಷಾದಿಸಿದರು. ನಗರದಲ್ಲಿ ಭಾನುವಾರ ಜೈನ ಶ್ವೇತಾಂಬರ ತೇರಾಪಂಥ್ ಮಹಿಳಾ ಮಂಡಳವು ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಏರ್ಪಡಿಸಿದ್ದ ‘ಎಲಾನ್; ಒಂದು ಧ್ವನಿ, ಹೊಸ ಧ್ವನಿ’ ಎಂಬ ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಹಿಳೆಯರ ಸಬಲೀಕಣಕ್ಕಾಗಿ ಮಂಡಳವು ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ’ ಎಂದರು. ಮಹಿಳಾ ಮಂಡಳದ ಅಧ್ಯಕ್ಷೆ ಕನಕ ಬಾರ್ಮೆಚೊ, ಜೈನ ವಿಶ್ವಭಾರತಿ ಸಂಸ್ಥೆಯ ಉಪಾಧ್ಯಕ್ಷ ಇಂದರ್ಚಂದ್ ದುಡೇರಿಯಾ, ಪತ್ರಕರ್ತ ನಂದಕಿಶೋರ್ ತಿವಾರಿ, ಜೈನ್ ಕೈಗಾರಿಕಾ ಸಮೂಹ (ಜೆಜಿಐ)ದ ಅಧ್ಯಕ್ಷ ಚೈನ್ರಾಜ್ ಚಜ್ಜೇರ್ ಹಾಜರಿದ್ದರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ನಿರ್ದೇಶಕರ ಆಯ್ಕೆ
ಬೆಂಗಳೂರು: ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ನ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕೆಳಕಂಡವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಸದಾಶಿವ ರೆಡ್ಡಿ, ಸಿ.ಚನ್ನರೆಡ್ಡಿ, ಪಿ.ಜಯರಾಮ ರೆಡ್ಡಿ, ವಿ.ಶಂಕರ ರೆಡ್ಡಿ, ಟಿ.ದಯಾನಂದ, ಆರ್.ವೆಂಕಟರೆಡ್ಡಿ, ಪಿ.ಜನಾರ್ದನ ರೆಡ್ಡಿ, ಬಿ.ವಿ.ಸೋಮಶೇಖರ ರೆಡ್ಡಿ, ಜಿ.ರಮೇಶ್, ಎಚ್.ಎಲ್.ಅಶೋಕ್ ಕುಮಾರ್, ಸಿ.ವಿ.ವಿಜಯ ರೆಡ್ಡಿ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.