ಶುಕ್ರವಾರ, ಮೇ 20, 2022
20 °C

ಸಾಧನ ಸಲಕರಣೆ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಧನ ಸಲಕರಣೆ ವಿತರಣೆ

ಮಹದೇವಪುರ:  ಕ್ಷೇತ್ರದ ಆವಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಬೆಂಕಿ ಅನಾಹುತಕ್ಕೆ ಒಳಗಾಗಿದ್ದ ಸರ್ಕಾರಿ ಶಾಲೆಗೆ `ಅಭಯ ಹಸ್ತ~ ಸಂಸ್ಥೆಯು ವಿವಿಧ ಸಾಧನ ಸಲಕರಣೆಗಳನ್ನು ದೇಣಿಗೆಯಾಗಿ ನೀಡಿದೆ.ಪೀಣ್ಯದ ಎಬಿಬಿ ಕಂಪೆನಿಯ ಅಧಿಕಾರಿಗಳು ಹಾಗೂ ನೌಕರರು ಸ್ಥಾಪಿಸಿರುವ `ಅಭಯ ಹಸ್ತ~ ಸಂಸ್ಥೆಯು ಶಾಲೆಗೆ ಅಗತ್ಯವಾಗಿ ಬೇಕಾದ 46 ಜಮಖಾನಗಳು, ಗ್ಲೋಬ್, ಎರಡು ಸೂಚನಾ ಫಲಕಗಳು, ಮೇಜಿನ ಗ್ಲಾಸ್, ಕುಡಿಯುವ ನೀರಿನ ಫಿಲ್ಟರ್ ಸೇರಿದಂತೆ ಐವತ್ತಕ್ಕೂ ಹೆಚ್ಚು ವಸ್ತುಗಳನ್ನು ನೀಡಿದರು.ಸಂಸ್ಥೆಯ ಪದಾಧಿಕಾರಿಗಳಾದ ಕೆ.ಮುರಳಿ ಕೃಷ್ಣ ಮತ್ತು ಎಚ್.ಎನ್.ಬಾಬು ಮುಖ್ಯೋಪಾಧ್ಯಾಯರಾದ ಧನಲಕ್ಷ್ಮಿ ಅವರಿಗೆ ಸಾಮಗ್ರಿಗಳನ್ನು ಹಸ್ತಾಂತರಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.