ಮಿಯಾಮಿ, ಅಮೆರಿಕ (ಪಿಟಿಐ): ಸಾನಿಯಾ ಮಿರ್ಜಾ ಮತ್ತು ಸೋಮ್ದೇವ್ ದೇವ್ವರ್ಮನ್ ಅವರು ಇಲ್ಲಿ ನಡೆಯುತ್ತಿರುವ ಸೋನಿ ಎರಿಕ್ಸನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ 6-2, 6-4 ರಲ್ಲಿ ಸ್ಪೇನ್ನ ಅರಾಂತ್ಸಾ ಸಂಟೋಜಾ ವಿರುದ್ಧ ಜಯ ಪಡೆದರು. ಡಬ್ಲ್ಯುಟಿಎ ರ್ಯಾಂಕಿಂಗ್ನಲ್ಲಿ 99ನೇ ಸ್ಥಾನದಲ್ಲಿರುವ ಸಾನಿಯಾ ತಮಗಿಂತ ಮೇಲಿನ ರ್ಯಾಂಕಿಂಗ್ನ ಆಟಗಾರ್ತಿಯ ವಿರುದ್ಧ ಪ್ರಭಾವಿ ಪ್ರದರ್ಶನ ನೀಡಿದರು.

ಭಾರತದ ಆಟಗಾರ್ತಿಗೆ ಎರಡನೇ ಸುತ್ತಿನಲ್ಲಿ ಕಠಿಣ ಸವಾಲು ಎದುರಾಗಿದೆ. ಅವರು 24ನೇ ರ್ಯಾಂಕಿಂಗ್ನ ಆಟಗಾರ್ತಿ ರಷ್ಯಾದ ಮರಿಯಾ ಕಿರಿಲೆಂಕೊ ವಿರುದ್ಧ ಪೈಪೋಟಿ ನಡೆಸುವರು.

ಸೋಮ್ಗೆ ಗೆಲುವು: ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸೋಮ್ದೇವ್ ದೇವ್ವರ್ಮನ್ 6-2, 6-4 ರಲ್ಲಿ ವಿಶ್ವದ 47ನೇ ರ್ಯಾಂಕಿಂಗ್ನ ಆಟಗಾರ ಇಟಲಿಯ ಪೊಟಿಟೊ ಸ್ಟರೇಸ್ ಅವರನ್ನು ಮಣಿಸಿದರು.

ಎಟಿಪಿ ರ್ಯಾಂಕಿಂಗ್ನಲ್ಲಿ 73ನೇ ಸ್ಥಾನದಲ್ಲಿರುವ ಸೋಮ್ ಹೆಚ್ಚಿನ ಒತ್ತಡ ಅನುಭವಿಸದೆಯೇ ಗೆಲುವಿನ ನಗು ಬೀರಿದರು. ಅವರು ಎರಡನೇ ಸುತ್ತಿನ ಪಂದ್ಯದಲ್ಲಿ ಕೆನಡಾದ ಮಿಲೋಸ್ ರೋನಿಕ್ ವಿರುದ್ಧ ಪೈಪೋಟಿ ನಡೆಸುವರು. ಇಲ್ಲಿ ಗೆಲುವು ಪಡೆದರೆ ವಿಶ್ವದ ಆರನೇ ರ್ಯಾಂಕಿಂಗ್ನ ಆಟಗಾರ ಡೇವಿಡ್ ಫೆರರ್ ಎದುರಾಗುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.