ಶನಿವಾರ, ಮೇ 15, 2021
23 °C

`ಸಾಮಾಜಿಕ ಕಾಳಜಿ ಹೊಂದಿದ್ದ ಎನ್‌ಟಿಆರ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಎನ್.ಟಿ.ರಾಮರಾವ್ ಅವರು ಬರೀ ಆಂಧ್ರಪ್ರದೇಶದವರಲ್ಲ. ಇಡೀ ದೇಶವೇ ಸ್ಮರಿಸುವಂತಹ ಕಲಾವಿದರಾಗಿದ್ದ ಅವರು ಸಾಮಾಜಿಕ ಕಾಳಜಿಯನ್ನೂ ಹೊಂದಿದ್ದರು' ಎಂದು ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಹೇಳಿದರು.ಕರ್ನಾಟಕ ತೆಲುಗು ಅಕಾಡೆಮಿಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಎನ್‌ಟಿ ರಾಮರಾವ್ ಅವರ 91 ನೇ ಜಯಂತಿ ಹಾಗೂ ಎನ್‌ಟಿಆರ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಆಂಧ್ರಪದೇಶದಲ್ಲಿ ಕರ್ನಾಟಕದ ಅಕಾಡೆಮಿಗಳಿಗೆ ನಿವೇಶನವನ್ನು ನೀಡಲಾಗಿದೆ. ಅದರಂತೆ, ತೆಲುಗು ಅಕಾಡೆಮಿಗಳಿಗೆ ನಿವೇಶನವನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ. ಇದನ್ನು ಪರಿಶೀಲಿಸಲಾಗುವುದು' ಎಂದು ಭರವಸೆ ನೀಡಿದರು.ಮಾಜಿ ಶಿಕ್ಷಣ ಸಚಿವ ಎಂ.ರಘುಪತಿ, `ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸೌಹಾರ್ದತೆಯ ಸಂಕೇತವಾಗಿ ಡಾ.ರಾಜ್‌ಕುಮಾರ್, ಎನ್.ಟಿ. ರಾಮರಾವ್ ಮತ್ತು ಎನ್.ಜಿ.ರಾಮಚಂದ್ರ ಅವರ ಪ್ರತಿಮೆಗಳನ್ನು ಸ್ಥಾಪಿಸಬೇಕು. ಇದರಿಂದ ರಾಜ್ಯಗಳ ನಡುವಿನ ಸಂಬಂಧ ವೃದ್ಧಿಯಾಗುತ್ತದೆ' ಎಂದರು. `ಕಲಾವಿದರು ರಾಜ್ಯ ರಾಜ್ಯಗಳ ನಡುವೆ ಸ್ನೇಹ ಸೇತುವಾಗುತ್ತಾರೆ. ಈ ಮೂರು ರಾಜ್ಯಗಳಿಗೂ ಈ ಮೂರೂ ಕಲಾವಿದರು ಸ್ನೇಹ ಸೇತುವಾಗಿದ್ದರು' ಎಂದು ಹೇಳಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಟಿ ಶ್ರುತಿ, `ತೆಲುಗು ಅಕಾಡೆಮಿಯು ಕರ್ನಾಟಕದ ಕಲಾವಿದರಿಗೆ ಎನ್‌ಟಿಆರ್ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ಸಂತಸ ತಂದಿದೆ' ಎಂದರು.ನಟ ರವಿಚಂದ್ರನ್ ಮಾತನಾಡಿ, `ಈ ರೀತಿಯ ಪ್ರಶಸ್ತಿಗಳಿಂದ ಜವಾಬ್ದಾರಿ ಹೆಚ್ಚಾಗಿದೆ. ಅಭಿಮಾನಿಗಳು ನೆನಪಿಟ್ಟುಕೊಳ್ಳುವಂತಹ ಸಿನಿಮಾಗಳನ್ನು ಇನ್ನೂ ಮಾಡಬೇಕಾಗಿದೆ' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.