ಭಾನುವಾರ, ಏಪ್ರಿಲ್ 11, 2021
32 °C

ಸಾಮಾಜಿಕ ಪ್ರಜ್ಞೆಯಿಂದ ಸಾಹಿತ್ಯ ರಚಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸ್ವಾತಂತ್ರ್ಯಪೂರ್ವದಲ್ಲಿ ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡುವ ಮೂಲಕ ಲೇಖಕಿ ಜಯದೇವಿ ತಾಯಿ ಲಿಗಾಡೆ ಅವರು ಸಾಮಾಜಿಕ ಹೋರಾಟಗಾರ್ತಿಯಾಗಿ ರೂಪುಗೊಂಡಿದ್ದರು. ಪ್ರಸ್ತುತ ಲೇಖಕಿಯರು ಲಿಗಾಡೆ ಅವರ ಆದರ್ಶಗಳನ್ನು ಅನುಸರಿಸುವ ಅಗತ್ಯವಿದೆ~ ಎಂದು `ಮಯೂರ~ ಮಾಸಪತ್ರಿಕೆಯ ಸಹಾಯಕ ಸಂಪಾದಕಿ ಡಾ.ಆರ್.ಪೂರ್ಣಿಮಾ ಅಭಿಪ್ರಾಯಪಟ್ಟರು.ಕರ್ನಾಟಕ ಲೇಖಕಿಯರ ಸಂಘವು ಜಯದೇವಿ ತಾಯಿ ಲಿಗಾಡೆ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಗಮಕ ಕಾರ್ಯಕ್ರಮ ಮತ್ತು ಆರು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. `ಸಾಹಿತಿಗಳು ಸಾಮಾಜಿಕ ಪ್ರಜ್ಞೆಯನ್ನು ಇಟ್ಟುಕೊಂಡು ಸಾಹಿತ್ಯವನ್ನು ರಚಿಸಬೇಕು. ಆಗ ಮಾತ್ರ ಅದಕ್ಕೆ ಒಂದು ಮೌಲ್ಯವಿರುತ್ತದೆ. ಯಾವುದೇ ಸಾಹಿತ್ಯ ದಂತಗೋಪುರದಡಿ ರಚನೆಯಾಗದೇ, ನೈಜ ವಿಚಾರಗಳತ್ತ ಒಲವು ತೋರಬೇಕು. ಈ ನಿಟ್ಟಿನಲ್ಲಿ ಯುವ ಲೇಖಕಿಯರು ಹೆಜ್ಜೆ ಇಡಬೇಕು~ ಎಂದು ಸಲಹೆ ನೀಡಿದರು.`ಲಿಗಾಡೆಯವರು ಈ ಕಾಲದಲ್ಲಿ ಜೀವಂತವಾಗಿದ್ದರೆ, ಸಾಮಾಜಿಕ ಪಿಡುಗುಗಳ ವಿರುದ್ಧ ದನಿ ಎತ್ತುತ್ತಿದ್ದರು. ಆದರೆ, ಈ ವಿಚಾರದಲ್ಲಿ ಮಹಿಳೆಯರು, ಲೇಖಕಿಯರು ಕೈಕಟ್ಟಿ ಕೂರದೇ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಂದಾಗಬೇಕು~ ಎಂದು ಅವರು ಕರೆ ನೀಡಿದರು.ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, `ಇಂದಿನ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದಲೇ ಹಲವು ಬಗೆಯ ಮಾರಕ ಕಾಯಿಲೆಗಳನ್ನು ಸ್ವಾಗತಿಸುತ್ತಿದ್ದೇವೆ. ಉದ್ಯೋಗ, ಜೀವನಶೈಲಿಯೊಂದಿಗೆ ಆಹಾರದ ಬಗ್ಗೆ ಹೆಚ್ಚಿನ ಗಮನಹರಿಸುವ ಅಗತ್ಯವಿದೆ~ ಎಂದು ತಮ್ಮ ಕೃತಿಯ ಬಗ್ಗೆ ವಿವರಿಸಿದರು.ಇದೇ ಸಂದರ್ಭದಲ್ಲಿ ವಸುಂಧರಾ ಭೂಪತಿ ಅವರ `ಆರೋಗ್ಯ-ವೈವಿಧ್ಯ~ `ಆಹಾರ ಮತ್ತು ಆರೋಗ್ಯ~, ಗುಣಸಾಗರಿ ನಾಗರಾಜ್ ಅವರ `ಮುಷ್ಟಿಯೊಳಗಿನ ಹೆಣ್ಣು~ `ಪರಿವರ್ತನೆ~, ವಿಜಯಾ ವಿಷ್ಣುಭಟ್ ಅವರ `ವಿವಾಹ ಮತ್ತು ಮಹಿಳೆ~, `ಪ್ರಬಂಧ ಸಂಚಯ~ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.ಸಂಗೀತ ಮತ್ತು ಗಮಕ ವಿದುಷಿ ಎನ್. ಶ್ರೀಮತಿ, ಹಿರಿಯ ಲೇಖಕಿ ಬಿ.ಜಿ. ಕುಸುಮ ಅವರಿಂದ ಜಯದೇವಿ ತಾಯಿ ಲಿಗಾಡೆ ಅವರ ಸಿದ್ಧರಾಮೇಶ್ವರ ಪುರಾಣದ ಗಮಕ ವಾಚನ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.