ಹೊನ್ನಾಳಿ: ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಅಭಿಪ್ರಾಯಪಟ್ಟರು.

ಇಲ್ಲಿನ ಹಿರೇಕಲ್ಮಠದಲ್ಲಿ ಸೋಮವಾರ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಅವರ 42ನೇ ವಾರ್ಷಿಕ ಪುಣ್ಯಾರಾಧನೆ ಪ್ರಯುಕ್ತ ಹಮ್ಮಿಕೊಂಡ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಎಲ್ಲಾ ಮಠ-ಮಾನ್ಯಗಳು, ಸಂಘ-ಸಂಸ್ಥೆಗಳು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸುತ್ತವೆ. ಇದರಿಂದ ಜನತೆಗೆ ಹೆಚ್ಚಿನ ಅನುಕೂಲವಾಗುತ್ತಲಿದೆ ಎಂದು ತಿಳಿಸಿದರು.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾದ ದಂಪತಿಗೆ ಸರ್ಕಾರ ರೂ.10ಸಾವಿರ ಹಣವನ್ನು ಪ್ರೋತ್ಸಾಹ ಧನವಾಗಿ ನೀಡುತ್ತದೆ. ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಹರಿಹರ ಕ್ಷೇತ್ರದ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಮನುಕುಲದ ಅಭಿವೃದ್ಧಿಗಾಗಿ ಮಠ-ಮಾನ್ಯಗಳು ದುಡಿಯುತ್ತವೆ. ಅವುಗಳ ಈ ಮಹತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಹೊನ್ನಾಳಿಯ ಹಿರೇಕಲ್ಮಠದ ಸ್ವಾಮೀಜಿ ಬಗ್ಗೆ ಈ ಭಾಗದ ಭಕ್ತರು ಪೂಜ್ಯ ಭಾವನೆ ಇಟ್ಟುಕೊಂಡಿದ್ದಾರೆ. ಸ್ವಾಮೀಜಿ ಅವರ ಸಮಾಜಮುಖಿ ಚಿಂತನೆಗಳು ಇದಕ್ಕೆ ಕಾರಣ. ಅಂತಹ ಸ್ವಾಮೀಜಿಯವರನ್ನು ಪಡೆದ ನೀವೇ ಪುಣ್ಯವಂತರು ಎಂದು ಶ್ಲಾಘಿಸಿದರು.

ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿ ಆಶಿರ್ವಚನ ನೀಡಿ, ನೂತನ ದಂಪತಿ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಧರ್ಮವಂತರಾಗಿ, ನೀತಿವಂತರಾಗಿ ಬಾಳ್ವೆ ನಡೆಸಿ, ಮೋಕ್ಷ ಸಾಧನೆಗೆ ಮುಂದಾಗಬೇಕು ಎಂದು ತಿಳಿಸಿದರು.

ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಲೌಕಿಕ ಬದುಕಿನಲ್ಲಿದ್ದುಕೊಂಡೇ ಪಾರಮಾರ್ಥಿಕ ಸಾಧನೆ ಮಾಡಬೇಕು. ನೂತನ ದಂಪತಿಗಳು ಮೌಲ್ಯಾಧಾರಿತ -ಗುಣಾತ್ಮಕ ಜೀವನ ನಡೆಸುವ ಸಂಕಲ್ಪ ಮಾಡಿ. ಜೀವನ ಪೂರ್ತಿ ಜತೆಯಾಗಿರಿ ಎಂದು ತಿಳಿಸಿದರು.

ಆಸೆ ಬೆನ್ನತ್ತಿ ಹೋಗುವವನು ಲೋಕಕ್ಕೆ ದಾಸನಾಗುತ್ತಾನೆ. ಆಸೆಯನ್ನು ದಾಸನನ್ನಾಗಿ ಮಾಡಿಕೊಂಡವನಿಗೆ ಲೋಕವೇ ದಾಸನಾಗುತ್ತದೆ. ಇದು ಸಾಮಾನ್ಯ ಮನುಷ್ಯ ಮತ್ತು ಮಹಾತ್ಮರಿಗೆ ಇರುವ ವ್ಯತ್ಯಾಸ ಎಂದರು.

ಡಿ.ಜಿ. ಶಾಂತನಗೌಡ, ವಿಶಾಲಾಕ್ಷಿ ಆಲ್ಬರ್ಟ್, ಚಾಟಿ ಶೇಖರಪ್ಪ, ಎಸ್.ಎಂ. ವೀರೇಶ್, ನವಲೆ ಪಂಚಣ್ಣ, ಜಯದೇವಪ್ಪ ಇತರರು ಮಾತನಾಡಿದರು. ಹೊಟ್ಯಾಪುರ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಾಮನಾಳು ಮಠದ ಸಿದ್ದಪಾದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಕಡದಕಟ್ಟೆ ಗ್ರಾ.ಪಂ. ಅಧ್ಯಕ್ಷೆ ತಿಪ್ಪಮ್ಮ, ಸಂಪತ್ರಾಜ್, ರತ್ನಮ್ಮ, ಕೆ.ಜಿ. ವೀರಭದ್ರಪ್ಪ, ಸೋಮಶೇಖರಪ್ಪ ಇತರರು ಇದ್ದರು. ಶಾಂತಾ ಹಿರೇಮಠ ಪ್ರಾರ್ಥಿಸಿದರು. ಚೆನ್ನಯ್ಯ ಬೆನ್ನೂರುಮಠ ಸ್ವಾಗತಿಸಿದರು. ವಿಜಯಾನಂದಸ್ವಾಮಿ ಕಾರ್ಯಕ್ರಮ ನಿರೂಪಿಸಿ-ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.