ಭಾನುವಾರ, ಮೇ 22, 2022
21 °C

ಸಾಯಿಗೋಲ್ಡ್ ಲಕ್ಕಿಡಿಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿವಿಜಿ ರಸ್ತೆಯಲ್ಲಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮತ್ತು ಶ್ರೀ ಸಾಯಿ ಸ್ಯಾರಿ ಪ್ಯಾಲೇಸ್ ಪರಿಶುದ್ಧ ಚಿನ್ನದ ಆಭರಣ ಮತ್ತು ಅಪ್ಪಟ ರೇಷ್ಮೆ ಸೀರೆಗಳು ಸಿಗುವ ತಾಣ.ಇಲ್ಲಿರುವ ವಿಶಿಷ್ಟ ಪಾರಂಪರಿಕ ಹಾಗೂ ಆಧುನಿಕ ಆಭರಣಗಳು, ಚಿನ್ನದ ವಿಗ್ರಹಗಳು, ಕಡಿಮೆ ತೂಕದ ಆಭರಣಗಳು, ಎರಡೂ ಬದಿ ಬಳಸಬಹುದಾದ ನೆಕ್ಲೇಸ್‌ಗಳು, ಕೈಗಡಿಯಾರಗಳು, ಅತ್ಯುತ್ತಮ ಗುಣಮಟ್ಟದ ವೈವಿಧ್ಯಮಯ ವಜ್ರ, ಮಾಣಿಕ್ಯ, ಪಚ್ಚೆಯನ್ನು ಅಳವಡಿಸಿದ ಹರಳುಗಳ ಆಭರಣಗಳು ಗ್ರಾಹಕರನ್ನು ಸೆಳೆಯುತ್ತವೆ. ಎಲ್ಲ ವರ್ಗ, ವಯೋಮಾನಕ್ಕೆ ಸರಿ ಹೊಂದುವಂತೆ ಪ್ಲಾಟಿನಂ, ಬೆಳ್ಳಿ, ವಜ್ರಗಳ ಆಭರಣಗಳೂ ಇಲ್ಲಿವೆ.ಇಷ್ಟೇ ಅಲ್ಲ ಶ್ರೀ ಸಾಯಿ ಸಾರಿ ಪ್ಯಾಲೇಸ್‌ನಲ್ಲಿ ಬಂಗಾರದಷ್ಟೇ ಪರಿಶುದ್ಧವಾದ ರೇಷ್ಮೆ ಸೀರೆಗಳು, ಆಧುನಿಕ ವಿನ್ಯಾಸಗಳ ಕಸೂತಿ ಕಲೆ ಹಾಗೂ ಕುಸುರಿ ಕೆಲಸಗಳುಳ್ಳ ಸೀರೆಗಳು ಮಹಿಳೆಯರ ಮನ ಸೂರೆಗೊಳ್ಳುವಂತಿವೆ. ಜತೆಗೆ ಚೂಡಿದಾರ್, ಫ್ಯಾನ್ಸಿ ಸೀರೆಗಳು, ಡ್ರೆಸ್ ಮೆಟೀರಿಯಲ್‌ಗಳು ಹಾಗೂ ಫ್ಯಾನ್ಸಿ ಆಭರಣಗಳು ಕೈಗೆಟಕುವ ಬೆಲೆಗೆ ಲಭ್ಯ.ಈ ಮಳಿಗೆಗಳಲ್ಲಿ ಈಗ ಹಬ್ಬದ ಸಡಗರ. ವರ್ಷದ ದೊಡ್ಡ ಹಬ್ಬ ದೀಪಾವಳಿಯನ್ನು ಗ್ರಾಹಕರ ಸಂಭ್ರಮ ಹೆಚ್ಚಿಸುವಂತೆ ಆಚರಿಸುವ ಗುರಿ ಸಾಯಿ ಗೋಲ್ಡ್ ಪ್ಯಾಲೇಸ್‌ನದ್ದು. ಅದಕ್ಕಾಗಿ ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ಆಕರ್ಷಕ ಕೊಡುಗೆ, ಬಹುಮಾನ, ರಿಯಾಯ್ತಿ ನೀಡುತ್ತಿದೆ.ಬಂಪರ್ ಬಹುಮಾನ `ಹುಂಡೈ ಐ 20~ ಕಾರು, ಪ್ರಥಮ ಬಹುಮಾನ ವಜ್ರದ ನೆಕ್ಲೇಸ್,  2ನೇ ಬಹುಮಾನ `ಸುಜುಕಿ ಆಕ್ಸಸ್~,  3ನೇ ಬಹುಮಾನ ಮೈಕ್ರೋವೇವ್ ಓವನ್‌ಗಳು, 100 ಸಮಾಧಾನಕರ ಬಹುಮಾನಗಳು ಇತ್ಯಾದಿ 10 ಲಕ್ಷ ರೂಪಾಯಿ ಮೌಲ್ಯದ ಬಹುಮಾನ ಗೆಲ್ಲುವ ಅವಕಾಶ ಇರುತ್ತದೆ. ಇದರ ಹೊರತಾಗಿ ಆಭರಣಗಳ ತಯಾರಿಕೆ ಮಜೂರಿ ಮೇಲೆ ಶೇ 20ರಷ್ಟು ರಿಯಾಯ್ತಿ ನೀಡುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.