ಮಂಗಳವಾರ, ಮೇ 11, 2021
25 °C

ಸಾರಾಯಿ ಮಾರಾಟ ನಿಷೇಧಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಸಾರಾಯಿ ಮಾರಾಟದ ವಿರುದ್ಧ ತಾಲ್ಲೂಕಿನ ಮಾದಿನೂರು ಗ್ರಾಮದ ಮಹಿಳೆಯರು ಹೋರಾಟಕ್ಕಿಳಿದಿದ್ದಾರೆ. ಗ್ರಾಮದಲ್ಲಿ ಸಾರಾಯಿ ಮಾರಾಟವನ್ನು ನಿಷೇಧಿಸುವಂತೆ ಹಲವಾರು ಬಾರಿ ಮಾಡಿದ ಮನವಿಗೆ ಅಬಕಾರಿ ಇಲಾಖೆ ಸ್ಪಂದಿಸದೇ ಇರುವ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿಗೆ ಆಗಮಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.ಜಿಲ್ಲಾಡಳಿತ ಭವನದಲ್ಲಿರುವ ಅಬಕಾರಿ ಇಲಾಖೆಯ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದ ಗ್ರಾಮದ ಮಹಿಳೆಯರನ್ನು ಒಳಗೊಂಡ ನಿಯೋಗ, ಕೂಡಲೇ ಸಾರಾಯಿ ಮಾರಾಟಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.ನಿತ್ಯವೂ ಸಾರಾಯಿ ಕುಡಿದು ಗಲಾಟೆ ಮಾಡುವ ಜನರಿಂದ ಗ್ರಾಮದ ಶಾಂತಿ ಕದಡಿದೆ. ಹೀಗಾಗಿ ಕೂಡಲೇ ಸಾರಾಯಿ ಮಾರಾಟ ನಿಷೇಧಿಸಲು ಕ್ರಮ ಕೈಗೊಂಡು ಗ್ರಾಮದಲ್ಲಿ ನೆಮ್ಮದಿಯಿಂದ ಬಾಳುವಂತಹ ವಾತಾವರಣ ನಿರ್ಮಿಸಬೇಕು ಎಂದು ಮನವಿ ಮಾಡಿದರು. ಈ ಮನವಿಗೆ ಸ್ಪಂದಿಸಿ ಕ್ರಮ ಕೈಗೊಳ್ಳದಿದ್ದರೆ ಬರುವ ದಿನಗಳಲ್ಲಿ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಗ್ರಾಮದ ನಾಗಮ್ಮ ಪತ್ರಿಗಿಡ, ಅಕ್ಕಮ್ಮ, ಹನಮವ್ವ, ನಿಂಗನಗೌಡ, ಪ್ರಕಾಶ, ಹನುಮಂತ, ಮಂಜುನಾಥ ಮತ್ತಿತರರು ನಿಯೋಗದಲ್ಲಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.