ಶನಿವಾರ, ಜೂಲೈ 11, 2020
28 °C

ಸಾರ್ಕ್ಗೆ ಪ್ರಥಮ ಮಹಿಳಾ ಮಹಾ ಕಾರ್ಯದರ್ಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕ (ಐಎಎನ್‌ಎಸ್): ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ಮೊದಲ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಮಾಲ್ಡೀವ್ಸ್‌ನ 36ರ ಹರೆಯದ ವಕೀಲೆ ಫಾತಿಮಾತ್ ಧಿಯಾನಾ ಸಯೀದ್ ಮಾರ್ಚ್ 1ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.ಹಾಲಿ ಪ್ರಧಾನ ಕಾರ್ಯದರ್ಶಿ ಭಾರತದ  ರಾಜತಾಂತ್ರಿಕ ಶೀಲಕಾಂತ್ ಶರ್ಮಾ ಅವರ ಅಧಿಕಾರ ಅವಧಿ ಫೆ. 28ಕ್ಕೆ ಕೊನೆಗೊಳ್ಳಲಿದ್ದು, ಮುಂದಿನ ಮೂರು ವರ್ಷ ಫಾತಿಮಾ ಅವರು ಈ ಹುದ್ದೆ ನಿಭಾಯಿಸಲಿದ್ದಾರೆ. ಅವರು ಮಾಲ್ಡೀವ್ಸ್‌ನ ಮಾಜಿ ಅಟಾರ್ನಿ ಜನರಲ್ ಕೂಡ ಹೌದು.  ಮುಂದಿನ ನವೆಂಬರ್ 10-11ರಂದು ಮಾಲ್ಡೀವ್ಸ್‌ನಲ್ಲಿ 17ನೇ ಸಾರ್ಕ್ ಸಮಾವೇಶ ನಡೆಯಲಿದ್ದು, ಅದನ್ನು ನಿಭಾಯಿಸುವ ಪ್ರಮುಖ ಹೊಣೆಗಾರಿಕೆ ಫಾತಿಮಾ ಅವರ ಮೇಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.