ವಿಜಾಪುರ: ಸಾಲದ ಬಾಧೆ ತಾಳದೆ ಬಸವನ ಬಾಗೇವಾಡಿ ತಾಲ್ಲೂಕು ಹುಣಶ್ಯಾಳ ಪಿ.ಬಿ. ಗ್ರಾಮದ ಶ್ರೀಶೈಲ ರೇವಣಪ್ಪ ಬೆಲ್ಲೂಟಗಿ (45) ಎಂಬ ರೈತ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತ ರೂ.2 ಲಕ್ಷ ಸಾಲ ಮಾಡಿ ಜಮೀನು ಸಾಗುವಳಿ ಮಾಡಿದ್ದ. ಬೆಳೆ ಬಾರದ ಕಾರಣ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಬಸವನ ಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾವು: ತಾಲ್ಲೂಕಿನ ಚಿಕ್ಕಗಲಗಲಿಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ವಸತಿ ಗೃಹದ ಹತ್ತಿರ ಸುರೇಶ ಭೀಮಪ್ಪ ಚಿಕ್ಕದಾನಿ (42) ಎಂಬಾತ ಮೃತಪಟ್ಟಿದ್ದಾನೆ. ಆತನ ಮರಣದಲ್ಲಿ ಸಂಶಯ ಇದೆ ಎಂದು ಆತನ ಪತ್ನಿ ಇಂದಿರಾಬಾಯಿ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.