ಶುಕ್ರವಾರ, ಮೇ 14, 2021
21 °C

ಸಾಲ ಸದುಪಯೋಗ ಪಡಿಸಿಕೊಳ್ಳಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಸಿಂಹರಾಜಪುರ: ರಾಜ್ಯ ಸರ್ಕಾರ2011-12ನೇ ಸಾಲಿನ ಬಜೆಟ್‌ನಲ್ಲಿ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗೆ ಮೀಸಲಾಗಿಟ್ಟಿದ್ದ ರೂ.50ಕೋಟಿ ಅನುದಾನದಲ್ಲಿ ತಾಲ್ಲೂಕಿನಲ್ಲಿ ರೂ.9.85ಲಕ್ಷ ಮೊತ್ತದ ಚೆಕ್‌ನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಂ.ಪಿ.ಸನ್ನಿ ತಿಳಿಸಿದರು.ಇಲ್ಲಿನ ಶಾಸಕರ ಕಚೇರಿ ಆವರಣದಲ್ಲಿ ಮಂಗಳವಾರ ಅಲ್ಪಸಂಖ್ಯಾತ ಇಲಾಖೆಯಿಂದ ವಿವಿಧ ಫಲಾನುಭವಿಗಳಿಗೆ  ಅನುದಾನದ ಚೆಕ್ ವಿತರಿಸಿ ಅವರು ಮಾತನಾಡಿದರು.ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಮೀಸಲಾಗಿಟ್ಟ ಅನುದಾನದಲ್ಲಿ ಜಿಲ್ಲೆಯ  500 ಕ್ರಿಶ್ಚಿಯನ್ ಸಮುದಾಯದವರಿಗೆ  ಶ್ರಮಶಕ್ತಿ, ಸಮುದಾಯ ಭವನ ನಿರ್ಮಾಣ, ಚರ್ಚ್ ನಿರ್ಮಾಣ ಮತ್ತು ದುರಸ್ತಿಗೆ ರೂ.60 ಲಕ್ಷ ಮಂಜೂರಾಗಿದೆ.ತಾಲ್ಲೂಕಿನ 50 ಜನ ಫಲಾನುಭವಿಗಳಿಗೆ ತಲಾ ರೂ.15 ಸಾವಿರ ಸಾಲ ಮಂಜೂರಾಗಿದ್ದು ಇದರಲ್ಲಿ ರೂ.3,750 ಸಹಾಯ ಧನವಿದೆ. ಅಲ್ಲದೆ ನಿಸರ್ಗ ಸ್ವಸಹಾಯ ಸಂಘ 10 ಸದಸ್ಯರಿಗೆ ತಲಾ ರೂ.10 ಸಾವಿರದಂತೆ ರೂ.1.10ಲಕ್ಷ, ಅನುಗ್ರಹ ಸ್ವಸಹಾಯ ಸಂಘದ ಸದಸ್ಯರಿಗೆ ತಲಾ ರೂ.10 ಸಾವಿರದಂತೆ ರೂ. 1.20ಲಕ್ಷ ಸಾಲ ನೀಡಲಾಗಿದ್ದು ಇದರಲ್ಲಿ ತಲಾ ರೂ.2,500ಸಾವಿರ  ಸಹಾಯ ಧನವಿದೆ. ಸಾಲ ಮರು ಪಾವತಿ ಮಾಡಲು ಮೂರು ವರ್ಷಗಳ  ಕಾಲಾವಕಾಶವಿದೆ ಎಂದು ಹೇಳಿದರು. ಪಿಸಿಎಲ್‌ಡಿ  ಬ್ಯಾಂಕ್‌ನ  ಉಪಾಧ್ಯಕ್ಷ ಕೆ.ಪಿ.ಸಂಪತ್‌ಕುಮಾರ್ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದವರ ಅಭಿವೃದ್ಧಿಗಾಗಿ ಶಾಸಕ ಡಿ.ಎನ್.ಜೀವರಾಜ್ ಪರಿಶ್ರಮದಿಂದ ತಾಲ್ಲೂಕಿನಲ್ಲಿ ಕ್ರಿಶ್ಚಿಯನ್ ಸಮುದಾಯದವರಿಗಾಗಿ ಸರ್ಕಾರ ಸಹಾಯ ಧನದ ರೂಪದಲ್ಲಿ  ಸಾಲವನ್ನು ಮಂಜೂರು ಮಾಡಿದ್ದು ಇದನ್ನು ಸದುಪಯೋಗ ಪಡಿಸಿ ಕೊಳ್ಳಬೇಕು ಎಂದರು.ಅಲ್ಪ ಸಂಖ್ಯಾತ ಇಲಾಖೆ ಜಿಲ್ಲಾ ವ್ಯವಸ್ಥಾಪಕ ತಿಪ್ಪೇಸ್ವಾಮಿ,ಜಯಣ್ಣ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.