ಬುಧವಾರ, ಏಪ್ರಿಲ್ 21, 2021
31 °C

ಸಿಂಗ್ ಸ್ವಗ್ರಾಮದಲ್ಲಿ ಕಾಮಗಾರಿ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಗ್ ಸ್ವಗ್ರಾಮದಲ್ಲಿ ಕಾಮಗಾರಿ ಸ್ಥಗಿತ

ಗ್ಹಾ (ಪಾಕಿಸ್ತಾನ) (ಎಎಫ್‌ಪಿ): ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಹುಟ್ಟೂರು ಪಾಕಿಸ್ತಾನದ ಗ್ಹಾ ಗ್ರಾಮದ ಅಭಿವೃದ್ಧಿಗೆ ನೀಡಿದ್ದ ಹತ್ತಾರು ಸಾವಿರ ಡಾಲರ್ ನೆರವಿನಲ್ಲಿ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಆದರೆ, ರಾಜಕೀಯ ಕಾರಣಗಳಿಗಾಗಿ ಕಾಮಗಾರಿಗಳು ಪೂರ್ಣವಾಗದೆ ಗ್ರಾಮದ ಜನರು ಪರಿತಪಿಸುವಂತಾಗಿದೆ.ಆದರೆ, ಸಿಂಗ್ ಅವರ `ಮಾದರಿ ಗ್ರಾಮ~ದ ಕನಸು ಈ ವರ್ಷಾಂತ್ಯದಲ್ಲಿ ಸಾಕಾರಗೊಳ್ಳುವ ಆಶಾಭಾವ ಮೂಡಿದೆ.ಪಾಕ್ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರು ಪ್ರಧಾನಿ ಸಿಂಗ್ ಅವರಿಗೆ ಪಾಕ್‌ಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ. ಈ ಭೇಟಿ ಸಂದರ್ಭದಲ್ಲಿ ಸಿಂಗ್  ಹುಟ್ಟೂರಿಗೆ ಭೇಟಿ ನೀಡಲಿದ್ದು, ಅಷ್ಟರಲ್ಲಿ ಸ್ಥಗಿತವಾಗಿರುವ ಕಾಮಗಾರಿಗಳಿಗೆ ಚಾಲನೆ ದೊರಕುವ ಸಾಧ್ಯತೆ ಇದೆ.ಮನಮೋಹನ್ ಸಿಂಗ್ ನೀಡಿರುವ ಈ ನೆರವು ಅವರ ಸಹಪಾಠಿ ಗುಲಾಂ ಮುಹಮ್ಮದ್ ಖಾನ್ ಅವರ ಮೊಗದಲ್ಲಿ ಆನಂದ ತಂದಿದೆ. `ಮನಮೋಹನ್  ಗ್ರಾಮದ ಅಭಿವೃದ್ಧಿಗೆ ನೆರವು ನೀಡುತ್ತಾರೆಂದು ನಾನು ಕನಸಿನಲ್ಲೂ ನೆನಸಿರಲಿಲ್ಲ. ನಮ್ಮದೇ ಸರ್ಕಾರ ಮಾಡದ ಕಾರ್ಯವನ್ನು ಭಾರತದ ಪ್ರಧಾನಿ ಮಾಡಿದ್ದಾರೆ.ಆದರೆ, `ಕೈಗೆ ಬಂದಿದ್ದು ಬಾಯಿಗೆ ಇಲ್ಲ~ ಎನ್ನುವಂತೆ ಕಾಮಗಾರಿಗಳು ಅರ್ಧಂಬರ್ಧವಾಗಿದೆ~ ಎಂದಿರುವ ಖಾನ್, ತಮ್ಮದೇ ಸರ್ಕಾರದ ಉದಾಸೀನತೆಗೆ ವ್ಯಥೆಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.