ಸಿಂಡಿಕೇಟ್ ಬ್ಯಾಂಕ್ ರೂ 323 ಕೋಟಿ ನಿವ್ವಳ ಲಾಭ

7

ಸಿಂಡಿಕೇಟ್ ಬ್ಯಾಂಕ್ ರೂ 323 ಕೋಟಿ ನಿವ್ವಳ ಲಾಭ

Published:
Updated:

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್ ಬ್ಯಾಂಕ್ ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ಕೊನೆಗೊಂಡ ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ರೂ 323 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷದ ಇದೇ ಅವಧಿಯ ರೂ 238 ಕೋಟಿಗಳಿಗೆ ಹೋಲಿಸಿದರೆ ಶೇ 36ರಷ್ಟು ಹೆಚ್ಚಳ ದಾಖಲಿಸಿದೆ.ಈ ಅವಧಿಯಲ್ಲಿನ ಒಟ್ಟಾರೆ ವರಮಾನವು ಕಳೆದ ವರ್ಷದ ರೂ 2,973 ಕೋಟಿಗಳಿಂದ ರೂ 4,016 ಕೋಟಿಗಳಿಗೆ ಹೆಚ್ಚಳಗೊಂಡಿದೆ. ಬಡ್ಡಿ ವರಮಾನವು 2010ರ ಅರ್ಧ ವಾರ್ಷಿಕದ ರೂ 2072 ಕೋಟಿಗಳಿಂದ, ರೂ 2424 ಕೋಟಿಗಳಿಗೆ ಏರಿಕೆಯಾಗಿ ಶೇ 17ರಷ್ಟು ವೃದ್ಧಿ ದಾಖಲಿಸಿದೆ.ಶುಲ್ಕ ಆಧಾರಿತ ವರಮಾನ ಮತ್ತು ವಹಿವಾಟಿನ ಲಾಭದ ಕಾರಣಕ್ಕೆ ಇತರ ವರಮಾನವು ಶೇ 20ರಷ್ಟು ಹೆಚ್ಚಳಗೊಂಡು ರೂ 447 ಕೋಟಿಗಳಿಂದ ರೂ 536 ಕೋಟಿಗಳಿಗೆ ಏರಿಕೆಯಾಗಿದೆ. ಅರ್ಧ ವಾರ್ಷಿಕ ನಿವ್ವಳ ಲಾಭವು ರೂ 503 ಕೋಟಿಗಳಿಂದ ರೂ 666 ಕೋಟಿಗಳಿಗೆ ಹೆಚ್ಚಳಗೊಂಡು ಶೇ 32ರಷ್ಟು ಏರಿಕೆ ಕಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry