ಭಾನುವಾರ, ಜೂನ್ 13, 2021
22 °C

ಸಿ.ಆರ್.ಐ ವಾಲ್ವ್‌ಗೆ ಗ್ರೀನ್ ಫೌಂಡ್ರಿ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿ.ಆರ್.ಐ ವಾಲ್ವ್‌ಗೆ ಗ್ರೀನ್ ಫೌಂಡ್ರಿ ಪ್ರಶಸ್ತಿ

ದೇಶದ ಪ್ರಮುಖ ಉಕ್ಕು ಅಚ್ಚು ತಯಾರಿಕಾ ಕಾರ್ಖಾನೆ ಸಿಆರ್‌ಐ ವಾಲ್ವ್ 2011ನೇ ಸಾಲಿನ ಪ್ರತಿಷ್ಠಿತ `ಗ್ರೀನ್ ಫೌಂಡ್ರಿ ಪ್ರಶಸ್ತಿ~ಗೆ ಭಾಜನವಾಗಿದೆ. ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಸ್ಥಾಪಿಸಿರುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನಗರದ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ನಡೆದ 60ನೇ ಅಂತರರಾಷ್ಟ್ರೀಯ ಫೌಂಡ್ರಿಮೆನ್ ಸಮಾವೇಶದಲ್ಲಿ ರಾಜ್ಯ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರದಾನ ಮಾಡಿದರು.ಸಿ.ಆರ್.ಐ ಉಕ್ಕು ಅಚ್ಚು ತಯಾರಿಕಾ ಘಟಕ ಅಳವಡಿಸಿಕೊಂಡಿರುವ ಹಸಿರೀಕರಣ ಕಾರ್ಯಕ್ರಮಗಳನ್ನು ಪರಿಗಣಿಸಿರುವ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಸಿಆರ್‌ಐಗೆ ನೀಡಿ ಗೌರವಿಸಿದೆ.`ಈ ಎರಡೂ ಪ್ರಶಸ್ತಿಗಳು ನಮ್ಮ ಸಂಸ್ಥೆಯ ಹಸಿರೀಕರಣ ಕ್ರಮಗಳಿಗೆ ಸಿಕ್ಕ ಪ್ರಶಂಸೆಯಾಗಿದೆ.  `ಗಾರ್ಗಿ ಹಟೆನ್ಸ್ ಆಲ್‌ಬರ್ಟಸ್ ಗ್ರೀನ್ ಫೌಂಡ್ರಿ ಆಫ್ ದಿ ಇಯರ್~ (gargi huttenes albertus green foundry of the year)  ಪ್ರಶಸ್ತಿಯನ್ನು ಸಿ ಆರ್ ಐ ವಾಲ್ವ್ ಉಕ್ಕು ಅಚ್ಚು ತಯಾರಿಕಾ ಘಟಕದಲ್ಲಿನ ಅಳವಡಿಸಲಾಗಿರುವ ಶಕ್ತಿ ನಿರ್ವಹಣಾ ವ್ಯವಸ್ಥೆ, ಕಾರ್ಖಾನೆಯ ಕಸ ನಿರ್ವಹಣೆ, ಪರಿಸರ ಸ್ನೇಹಿ ಪ್ಯಾಕಿಂಗ್ ವ್ಯವಸ್ಥೆ ಮತ್ತು ಮರುಬಳಕೆ, ಇನ್ನಿತರ ಮೂಲಗಳಿಂದ ಉತ್ಪಾದನೆಯಾಗುವ ವಿದ್ಯುತ್‌ನ ಬಳಕೆ, ಕಾರ್ಮಿಕರ ಅಭ್ಯುದಯಕ್ಕೆ ಅಳವಡಿಸಲಾಗಿರುವ ಕಾರ್ಯಕ್ರಮ ಗಮನದಲ್ಲಿರಿಸಿಕೊಂಡು ಪ್ರಶಸ್ತಿ ನೀಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.