ಗುರುವಾರ , ಜನವರಿ 23, 2020
20 °C
31 ಕಾಲೇಜುಗಳಿಗೆ ಮಾತ್ರ ಸರ್ಕಾರಿ ಪ್ರವೇಶ ಪರೀಕ್ಷೆ ಅನ್ವಯ

ಸಿಇಟಿ ಶುಲ್ಕ ದುಬಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರು ವರ್ಷಗಳಿಂದ ತಡೆಹಿಡಿಯ­ಲಾಗಿದ್ದ ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ ಅನು­ಷ್ಠಾನದಿಂದ ಖಾಸಗಿ ಕಾಲೇಜುಗಳಿಗೆ ಅನುಕೂಲ ಆಗ­ಲಿದ್ದು, ಮುಂದಿನ ವರ್ಷದಿಂದ ವಿದ್ಯಾ­ರ್ಥಿಗಳು ದುಬಾರಿ ಶುಲ್ಕ ಭರಿಸ­ಬೇಕಾಗುತ್ತದೆ.2006ರಲ್ಲಿ ರೂಪಿಸಿದ್ದ ಈ ಕಾಯ್ದೆ­ಯನ್ನು ರಾಜ್ಯ ಸರ್ಕಾರವು 2014–15ನೇ ಶೈಕ್ಷಣಿಕ ವರ್ಷದಿಂದ ಅನು­ಷ್ಠಾನಗೊಳಿಸಲು ತೀರ್ಮಾ­ನಿಸಿದೆ. ಆದರೆ, ಇದರಿಂದ ಖಾಸಗಿ ಕಾಲೇಜು­ಗಳಲ್ಲಿ ಸರ್ಕಾರಿ ಕೋಟಾ ಅಡಿ ಯಾವುದೇ ಸೀಟು ಲಭ್ಯ­ವಿರುವುದಿಲ್ಲ.ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿನ ಸೀಟುಗಳ ಪ್ರವೇಶಕ್ಕೆ ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿ ಕಾರ ಸಿಇಟಿ ನಡೆಸಲಿದೆ. ಖಾಸಗಿ ಕಾಲೇಜು­ಗಳಲ್ಲಿನ ಎಲ್ಲ ಸೀಟುಗಳಿಗೆ ಕಾಮೆಡ್‌ – ಕೆ ಪ್ರವೇಶ ಪರೀಕ್ಷೆ ನಡೆಸಿ ಕೌನ್ಸೆಲಿಂಗ್‌ ಮೂಲಕ ಭರ್ತಿ ಮಾಡಿಕೊಳ್ಳಲಿದೆ.ಕಾಯ್ದೆ ಪ್ರಕಾರ ಈಗಾಗಲೇ ಶುಲ್ಕ ನಿಗದಿಗೆ ಹಾಗೂ ಪ್ರವೇಶ ಮೇಲ್ವಿಚಾ­ರಣೆಗೆ ಪ್ರತ್ಯೇಕ ಸಮಿತಿಗ­ಳನ್ನು ರಚಿಸಲಾ­ಗಿದೆ. ಶುಲ್ಕ ನಿಗದಿ ಸಮಿತಿ ಯು ಆಯಾ ಕಾಲೇಜುಗಳಲ್ಲಿನ ಮೂಲಸೌಕರ್ಯ ಆಧರಿಸಿ ಶುಲ್ಕ ನಿಗದಿ ಮಾಡಲಿದ್ದು, ಕಾಲೇಜುವಾರು ಪ್ರತ್ಯೇಕ ಶುಲ್ಕ ನಿಗದಿಯಾಗುವ ಸಾಧ್ಯತೆಗಳಿವೆ. ಕಾಯ್ದೆಯಲ್ಲಿ ಇದಕ್ಕೆ ಅವಕಾಶ ಇದೆ.ಖಾಸಗಿ ವೈದ್ಯಕೀಯ ಕಾಲೇಜು ಗಳಲ್ಲಿ ಇದುವರೆಗೆ ಶೇ 40ರಷ್ಟು ಸೀಟುಗಳು ಸರ್ಕಾರಿ ಕೋಟಾ ಮೂಲಕ ಹಂಚಿಕೆಯಾಗುತ್ತಿದ್ದವು. ಖಾಸಗಿ ಕಾಲೇ­ಜಿನ ಸರ್ಕಾರಿ ಕೋಟಾ ಸೀಟಿಗೆರೂ 46 ಸಾವಿರ ಶುಲ್ಕ ಇರುತ್ತಿತ್ತು. ಕಾಮೆಡ್ – ಕೆ ಕೋಟಾ ಸೀಟಿಗೆರೂ 3.25 ಲಕ್ಷ ಇತ್ತು.ಇನ್ನು ಎಂಜಿನಿಯರಿಂಗ್‌ನಲ್ಲಿ ಸರ್ಕಾರಿ ಕೋಟಾ ಸೀಟಿಗೆರೂ 39 ಸಾವಿರ ಶುಲ್ಕ ಇದ್ದರೆ, ಕಾಮೆಡ್‌ – ಕೆ ಕೋಟಾ ಸೀಟಿಗೆರೂ 1.25 ಲಕ್ಷ ಇತ್ತು.

ಆದರೆ, ಮುಂದಿನ ವರ್ಷದಿಂದ ಸರ್ಕಾರಿ ಕೋಟಾ ಇರುವುದಿಲ್ಲ. ಖಾಸಗಿ ಕಾಲೇಜುಗಳಲ್ಲಿ ಸಮಿತಿ ನಿಗದಿಪಡಿಸುವ ಶುಲ್ಕವನ್ನು ನೀಡಿ ಪ್ರವೇಶ ಪಡೆಯಬೇಕಾಗುತ್ತದೆ.ಉದಾಹರಣೆಗೆ ಬೆಂಗಳೂರಿನ ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜಿ ನಲ್ಲಿ ಒಂದು ಸೀಟಿಗೆ ಸಮಿತಿಯುರೂ 1.25 ಲಕ್ಷ  ನಿಗದಿ ಮಾಡಿದರೆ, ಆ ಕಾಲೇಜಿನ ಎಲ್ಲ ಸೀಟುಗಳಿಗೂ ಅಷ್ಟೇ ಪ್ರಮಾಣ­ದಲ್ಲಿ ಶುಲ್ಕ ಪಾವತಿಸ ಬೇಕಾಗುತ್ತದೆ. ಆದರೆ, ಮೊದಲಿನಂತೆ ಸರ್ಕಾರಿ ಕೋಟಾ ಇದ್ದಿದ್ದರೆ ಕಡಿಮೆ ಶುಲ್ಕ ಇರುತ್ತಿತ್ತು.ರಾಜ್ಯದಲ್ಲಿ ಹತ್ತು ಸರ್ಕಾರಿ, 13 ಖಾಸಗಿ ವೈದ್ಯಕೀಯ ಕಾಲೇಜುಗಳು ಹಾಗೂ ಒಂಬತ್ತು ಡೀಮ್ಡ್‌ ವಿಶ್ವವಿದ್ಯಾ ಲಯಗಳಿವೆ. ಎಂಜಿನಿಯರಿಂಗ್‌ನಲ್ಲಿ ಒಟ್ಟು 198 ಕಾಲೇಜುಗಳಿದ್ದು, 12 ಸರ್ಕಾರಿ, ಒಂಬತ್ತು ಅನುದಾನಿತ ಕಾಲೇಜು­ಗಳಾಗಿವೆ. ಉಳಿದೆಲ್ಲವೂ ಖಾಸಗಿ ಕಾಲೇಜುಗಳಾಗಿವೆ.ರಾಜ್ಯದಲ್ಲಿ ಖಾಸಗಿ ಕಾಲೇಜುಗಳು ಅಧಿಕ ಸಂಖ್ಯೆಯಲ್ಲಿರುವುದರಿಂದ ಸೀಟುಗಳ ಸಂಖ್ಯೆಯೂ ಹೆಚ್ಚಾಗಿದೆ.  ಆ ಸೀಟುಗಳಿಗೆ ಪ್ರವೇಶ ಪಡೆಯ ಬೇಕಾದರೆ ಇನ್ನು ಮುಂದೆ ಅಧಿಕ ಶುಲ್ಕ ಪಾವತಿಸಬೇಕಾಗುತ್ತದೆ.ಸುಪ್ರೀಂ ಕೋರ್ಟ್ ಆದೇಶ ಪಾಲನೆ

‘ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ 2006ರಲ್ಲಿ ಆಗಿನ ಸರ್ಕಾರ ಕಾಯ್ದೆ ರೂಪಿಸಿದೆ. ಅದನ್ನು ನಾವು ಅನುಷ್ಠಾನಗೊಳಿಸುತ್ತಿದ್ದೇವೆ ಅಷ್ಟೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ ತಿಳಿಸಿದರು.ಖಾಸಗಿ ಕಾಲೇಜುಗಳು ಇದುವರೆಗೆ ವಾಮಮಾರ್ಗದ ಮೂಲಕ ಲಕ್ಷಾಂತರ ರೂಪಾಯಿಗೆ ಸೀಟುಗಳನ್ನು ಮಾರಾಟ ಮಾಡಿಕೊಳ್ಳುತ್ತಿದ್ದವು. ಆದರೆ, ಇನ್ನು ಮುಂದೆ ಇದಕ್ಕೆ ಅವಕಾಶ ಇರುವುದಿಲ್ಲ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.ಪ್ರವೇಶ ಮೇಲ್ವಿಚಾರಣೆ ಸಮಿತಿಯ ಸೂಚನೆಯಂತೆ ಖಾಸಗಿ ಕಾಲೇಜುಗಳು ಪ್ರವೇಶ ಪರೀಕ್ಷೆ ನಡೆಸಿ ಕೌನ್ಸೆಲಿಂಗ್ ಮೂಲಕ ಸೀಟುಗಳನ್ನು ಭರ್ತಿ ಮಾಡ­ಬೇಕಾಗುತ್ತದೆ. ಅವರಿಗೆ ಇಷ್ಟಬಂದಂತೆ ಪರೀಕ್ಷೆ ನಡೆಸಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಶುಲ್ಕ ನಿಗದಿ ಸಮಿತಿ ರಚನೆ­ಯಾಗಿದ್ದು, ಅದು ನೀಡುವ ವರದಿ ಪ್ರಕಾರ ಶುಲ್ಕ ನಿಗದಿಯಾಗಲಿದೆ. ಕಾಯ್ದೆ ಜಾರಿಯಿಂದ ಕೆಲವರಿಗೆ ತೊಂದರೆಯಾಗಬಹುದು. ಆದರೆ, ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ. ಅಕ್ರಮಗಳಿಗೆ ಕಡಿವಾಣ ಹಾಕಲು ಕಾಯ್ದೆ ಜಾರಿ ಮಾಡಬೇಕು ಎಂಬ ಒತ್ತಡ ಇತ್ತು. ಆದ್ದರಿಂದಲೇ ಕಾಯ್ದೆ ಜಾರಿ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಪ್ರವೇಶ ಪರೀಕ್ಷೆ ನಡೆಸಲು ಖಾಸಗಿ ಕಾಲೇಜುಗಳಿಗೆ ಅಧಿಕಾರ ಇದೆ. ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲ ಎಂದರು.ಮುಂದಿನ ವರ್ಷ ಹೊಸದಾಗಿ ಆರು ವೈದ್ಯಕೀಯ ಕಾಲೇಜುಗಳು ಆರಂಭವಾಗಲಿವೆ. ಇದರಿಂದ 900 ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗಲಿವೆ. ಹೀಗಾಗಿ ಸರ್ಕಾರಿ ಕೋಟಾದ ಸೀಟುಗಳಲ್ಲಿ ಯಾವುದೇ ಖೋತಾ ಆಗುವುದಿಲ್ಲ   ನಗರ ಪ್ರದೇಶದ ಕಾಲೇಜುಗಳಿಗೆ ಲಾಭ: ಕಾಲೇಜುಗಳಲ್ಲಿನ ಮೂಲ­ಸೌಕರ್ಯ, ಸಿಬ್ಬಂದಿಗೆ ನೀಡುತ್ತಿರುವ ಸಂಬಳ, ವಿದ್ಯಾರ್ಥಿಗಳಿಂದ ಪಡೆದಿರುವ ಶುಲ್ಕ ಇತ್ಯಾದಿ ಅಂಶಗಳನ್ನು ಗಮನದಲ್ಲಿ­ಟ್ಟುಕೊಂಡು ಶುಲ್ಕ ನಿಗದಿಪಡಿಸ­ಲಾಗುತ್ತದೆ. ಕಾಲೇಜುವಾರು ಶುಲ್ಕ ನಿಗದಿಯಿಂದ ನಗರ ಪ್ರದೇಶದ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಲಾಭವಾಗಲಿದೆ. ಆದರೆ, ಈ ಗ್ರಾಮೀಣ ಹಾಗೂ ಹೊಸ ಕಾಲೇಜುಗಳಿಗೆ ಆರ್ಥಿಕವಾಗಿ ಅನನುಕೂಲವಾಗಲಿದೆ.ಖಾಸಗಿ ಕಾಲೇಜುಗಳಲ್ಲಿ ಸೀಟು ಹಂಚಿಕೆ ಹೇಗೆ?

2006ರ ಕಾಯ್ದೆ ಪ್ರಕಾರ ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯ ರಿಂಗ್ ಮತ್ತಿತರ ವೃತ್ತಿಪರ ಕೋರ್ಸ್‌ಗಳಲ್ಲಿ ಶೇ 50ರಷ್ಟು ಸೀಟುಗಳನ್ನು ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಮೀಸಲಿಡಲಾಗುತ್ತದೆ.ಇನ್ನುಳಿದ ಶೇ 50ರಷ್ಟು ಸೀಟುಗಳಲ್ಲಿ ಶೇ 15ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರಿಗೆ ನೀಡಬಹುದು. ಉಳಿದ ಶೇ 35ರಷ್ಟು ಸೀಟುಗಳು ಸಾಮಾನ್ಯ ವರ್ಗದವರಿಗೆ ಮೀಸಲಾಗಿವೆ. ಖಾಸಗಿ ಕಾಲೇಜುಗಳು ತಮ್ಮಲ್ಲಿನ ಎಲ್ಲ ಸೀಟುಗಳಿಗೆ ಪ್ರವೇಶ ಪರೀಕ್ಷೆ ನಡೆಸಬಹುದು. ಆದರೆ, ಶೇ 50ರಷ್ಟು ಸೀಟುಗಳನ್ನು ಸರ್ಕಾರದ ಮೀಸಲಾತಿ ನಿಯಮಗಳಿಗೆ ಅನುಗುಣ­ವಾಗಿಯೇ ಭರ್ತಿ ಮಾಡಬೇಕಾಗುತ್ತದೆ.ನಾಮಕಾವಾಸ್ಥೆ

ರಾಜ್ಯದಲ್ಲಿ ಸರ್ಕಾರಿ ಮತ್ತು ಅನುದಾನಿತ 21 ಎಂಜಿನಿಯರಿಂಗ್‌ ಕಾಲೇಜುಗಳು, 10 ವೈದ್ಯಕೀಯ ಕಾಲೇಜುಗಳಿವೆ. ಈ ಕಾಲೇಜುಗಳಲ್ಲಿನ ಸೀಟುಗಳ ಭರ್ತಿಗಾಗಿ ಮಾತ್ರ 2014–15ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೇ 1ರಿಂದ ಮೂರು ದಿನಗಳ ಕಾಲ ನಡೆಯಲಿದೆ.ಎರಡು ಪರೀಕ್ಷೆ ಕಡ್ಡಾಯ ಅಲ್ಲ

ಖಾಸಗಿ ಕಾಲೇಜುಗಳು ಒಪ್ಪಿದರೆ ಎರಡು ಸಿಇಟಿ ನಡೆಸುವ ಅಗತ್ಯ ಇಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಒಂದೇ ಸಿಇಟಿ ನಡೆಸಬಹುದು ಎಂದು ಕಾಯ್ದೆಯಲ್ಲಿ ಸ್ಪಷ್ಟಪಡಿಸ­ಲಾಗಿದೆ.

ಪ್ರಾಧಿಕಾರ ಸಿದ್ಧಪಡಿಸುವ ಅರ್ಹತಾ ಪಟ್ಟಿ  ಆಧರಿಸಿ ಖಾಸಗಿ ಕಾಲೇಜುಗಳು ಪ್ರವೇಶ ನಡೆಸಬಹುದು. ಆದ್ದರಿಂದ ಸರ್ಕಾರ, ಖಾಸಗಿ ಕಾಲೇಜುಗಳ ಮನವೊಲಿಸಿ ಒಂದೇ ಸಿಇಟಿಗೆ ಪ್ರಯತ್ನಿಸಲು ಅವಕಾಶ ಇದೆ.ಪ್ರತಿಕ್ರಿಯಿಸಿ (+)