ಶಿವಮೊಗ್ಗ: ಸಿಇಟಿ ಸಹಾಯವಾಣಿ ಕೇಂದ್ರ, ನಗರದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸಜ್ಜುಗೊಂಡಿದ್ದು, ಕಾಲೇಜಿನ ಮೊದಲ ಮಹಡಿಯಲ್ಲಿ ಜೂನ್ 25ರಿಂದ ಕಾರ್ಯಾರಂಭ ಮಾಡಲಿದೆ.

ಈ ಕೇಂದ್ರದಲ್ಲಿ ಜುಲೈ 11ರವರೆಗೆ ದಾಖಲೆಗಳ ಪರಿಶೀಲನೆ, ಆನ್ಲೈನ್ ಕೌನ್ಸೆಲಿಂಗ್ ಕೂಡ ನಡೆಯಲಿದೆ. ಕೇಂದ್ರವು ಬೆಳಿಗ್ಗೆ 8ರಿಂದ ಸಂಜೆ 6.15ರವರೆಗೆ ಕಾರ್ಯ ನಿರ್ವಹಿಸಲಿದೆ.

ಸಹಾಯವಾಣಿ ಕೇಂದ್ರದಲ್ಲಿ ನಾಲ್ಕು ಕೌಂಟರ್ಗಳನ್ನು ತೆರೆಯಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ನೋಡಿಕೊಂಡು ಹೆಚ್ಚುವರಿಯಾಗಿ ಇನ್ನೊಂದು ಕೌಂಟರ್ ತೆರೆಯುವ ಉದ್ದೇಶವಿದೆ. ನೋಂದಣಿಗಾಗಿ ಒಂದು, ದಾಖಲೆಗಳ ಪರಿಶೀಲನೆಗೆ ಮೂರು ಕೌಂಟರ್ಗಳನ್ನು ತೆರೆಯಲಾಗಿದೆ ಎಂದು ಸಿಇಟಿ ಜಿಲ್ಲಾ ಮುಖ್ಯ ನೋಡೆಲ್ ಅಧಿಕಾರಿ ಆಶಾ ತಿಳಿಸಿದರು.

ಆನ್ಲೈನ್ ಕೌನ್ಸೆಲಿಂಗ್ನ ಮಾಹಿತಿಯನ್ನು ಒಳಗೊಂಡ ಅಡಿಯೊ-ವಿಡಿಯೊ ಸಿಡಿಯನ್ನು ನಿರಂತರವಾಗಿ ಬಿತ್ತರಿಸುವ ವ್ಯವಸ್ಥೆ ಮಾಡಲಾಗಿದೆ. ಇದು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲೂ ಇರುತ್ತದೆ. ಅಗತ್ಯ ಇರುವವರಿಗೆ ಆನ್ಲೈನ್ನಲ್ಲಿ ಸೀಟು ಆಯ್ಕೆಗೆ ಅವಕಾಶ ಮಾಡಿಕೊಡಲಾಗುತ್ತದೆ.

ಕೇಂದ್ರದಲ್ಲಿ 15ರಿಂದ 20 ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸುವರು. ಹೆಚ್ಚಿನ ಮಾಹಿತಿಗೆಸಹಾಯವಾಣಿ ಕೇಂದ್ರದ ದೂರವಾಣಿ: 08182- 240004 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.