ಮೈಸೂರು: ‘ಯಡಿಯೂರಪ್ಪ ಅವರು ಜೀವ ಬೆದರಿಕೆ ಇದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ವಿಧಾನಸೌಧಕ್ಕೆ ಹೋದರೆ ಮನೆಗೆ ವಾಪಸ್ ಬರುವ ಭರವಸೆ ಇಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಅವರು ಬಯಸಿದರೆ ಕಾಂಗ್ರೆಸ್ ಸೇವಾದಳವನ್ನು ರಕ್ಷಣೆಗೆ ಕಳುಹಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ವ್ಯಂಗ್ಯವಾಡಿದರು.

‘ರಾಜ್ಯದ ಮುಖ್ಯಮಂತ್ರಿ ಅವರೇ ತಮಗೆ ರಕ್ಷಣೆ ಇಲ್ಲವೆಂದು ಅವಲತ್ತುಕೊಂಡರೆ ಇನ್ನು ಸಾಮಾನ್ಯ ಜನರ ಪಾಡೇನು? ಪೊಲೀಸ್ ಇಲಾಖೆ, ಗುಪ್ತಚರ ವಿಭಾಗ ಅವರ ಬಳಿಯೇ ಇದೆ. ಈ ರೀತಿ ಅಸಹಾಯಕತೆ ವ್ಯಕ್ತಪಡಿಸುವುದು ಅವರಿಗೆ ಶೋಭೆ ತರುವುದಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಒಂದು ನಿಮಿಷವೂ ಅವರು ಇರಕೂಡದು. ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಮುಖ್ಯಮಂತ್ರಿ ಅವರಿಗೆ ರಕ್ಷಣೆ ಇಲ್ಲದ ಮೇಲೆ ಅಂತಹವರ ಕೈಯಲ್ಲಿ ರಾಜ್ಯ ನಡೆಸಲು ಆಗುವುದಿಲ್ಲ. ರಾಜ್ಯದ ಜನತೆಯ ರಕ್ಷಣೆ ಯಾರ ಹೊಣೆ? ರಾಜಧಾನಿಯಲ್ಲಿ ಐಟಿ-ಬಿಟಿಯಲ್ಲಿ ಉದ್ಯೋಗ ಮಾಡುತ್ತಿರುವ ಮಂದಿ ನಿತ್ಯ ಕೊಲೆ ಆಗುತ್ತಿದೆ. ಇವರನ್ನೆಲ್ಲ ರಕ್ಷಣೆ ಮಾಡುವವರು ಯಾರು?’ ಎಂದು ಕೇಳಿದರು.

‘ಬಿಜೆಪಿ ಅವರ ಬಳಿ ಆರ್ಎಸ್ಎಸ್ ದಂಡ ಇರಬಹುದು. ಆದರೆ ಕಾಂಗ್ರೆಸ್ ಸೇವಾದಳದಲ್ಲಿ ಲಾಠಿ ಇದೆ. ಬ್ರಿಟಿಷರ ಕಾಲದಿಂದಲೂ ಇದೇ ಲಾಠಿಯನ್ನು ಬಳಸುತ್ತಿದ್ದೇವೆ’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.