ಶುಕ್ರವಾರ, ಮೇ 14, 2021
31 °C

`ಸಿಖ್ ಉಗ್ರವಾದಕ್ಕೆ ಪಾಕ್ ಮರುಜೀವ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸಿಖ್ ಉಗ್ರವಾದಕ್ಕೆ ಮರು ಜೀವ ನೀಡಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಭಾರತ ಆರೋಪಿಸಿದ್ದು, ದೇಶದಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಯುವಕರಿಗೆ ಅಲ್ಲಿನ ಐಎಸ್‌ಐ ತರಬೇತಿ ನೀಡುತ್ತಿದೆ ಎಂದು ಆಪಾದಿಸಿದೆ.

ಪಾಕಿಸ್ತಾನದ ಹೊಸ ಪ್ರಧಾನಿಯಾಗಿ ನವಾಬ್ ಷರೀಫ್ ಅವರು ಪ್ರಮಾಣವಚನ ಸ್ವೀಕರಿಸಿದ ದಿನದಂದೇ ಭಾರತ ಈ ಹೇಳಿಕೆ ನೀಡಿದೆ.`ಪಂಜಾಬ್ ಮಾತ್ರವಲ್ಲದೇ ದೇಶದ ಇತರ ಭಾಗಗಳಲ್ಲಿ ಭಯೋತ್ಪಾದನಾ ಕೃತ್ಯ ನಡೆಸಲು ಐಎಸ್‌ಐ ಸಂಚು ರೂಪಿಸಿದೆ' ಎಂದು ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಬುಧವಾರ ಇಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು.ಪಾಕಿಸ್ತಾನದ ಐಎಸ್‌ಐ ಕೇಂದ್ರಗಳಲ್ಲಿ ಸಿಖ್ ಯುವಕರಿಗೆ ತರಬೇತಿ ಕೊಡಲಾಗುತ್ತಿದೆ. ಜೈಲಿನಲ್ಲಿರುವ ವ್ಯಕ್ತಿಗಳು, ನಿರುದ್ಯೋಗಿ ಯುವಕರು, ಅಪರಾಧಿಗಳು ಹಾಗೂ ಕಳ್ಳಸಾಗಣೆದಾರರನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.ಯೂರೋಪ್ ಮತ್ತು ಅಮೆರಿಕದಲ್ಲಿ ನೆಲೆಸಿರುವ ಯುವಕರನ್ನು ಸಹ ಉಗ್ರವಾದದತ್ತ ಸೆಳೆಯಲಾಗುತ್ತಿದೆ. ಬೃಹತ್ ಪ್ರಮಾಣದ ಅತ್ಯಾಧುನಿಕ ಆಯುಧ, ಆರ್‌ಡಿಎಕ್ಸ್ ಸೇರಿದಂತೆ ಸ್ಫೋಟಕಗಳನ್ನು ಗಡಿಭಾಗದ ಮೂಲಕ ಭಾರತದೊಳಗೆ ರವಾನಿಸಲಾಗುತ್ತಿದೆ ಎಂದು ಶಿಂಧೆ ವಿವರಿಸಿದರು.ಕಳೆದ ಒಂದು ವರ್ಷದಲ್ಲಿ ರಾಜಸ್ತಾನ ಮತ್ತು ಪಂಜಾಬ್‌ನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಗಾಧ ಪ್ರಮಾಣದ ಆರ್‌ಡಿಎಕ್ಸ್ ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.