ಸುವರ್ಣಸೌಧ (ಬೆಳಗಾವಿ): ಚಳಿ ಗಾಲ ದ ಅಧಿವೇಶನ ಆರಂಭವಾದಾ ಗಿನಿಂದ ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಎಲ್ಲ ರೀತಿ ಯಲ್ಲಿ ಸಹಕಾರ ನೀಡುತ್ತಿದ್ದ ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರ ಸ್ವಾಮಿ ಬುಧವಾರ ಅನಿರೀಕ್ಷಿತವಾಗಿ ಸಿಡಿದೆದ್ದರು. ವಿಧಾನಸಭೆಯಲ್ಲಿ ಬೆಳಿಗ್ಗೆ ಸರ್ಕಾರ ವಿವಿಧ ಮಸೂದೆಗಳನ್ನು ಮಂಡಿಸಲು ಮುಂದಾದಾಗ ಅದಕ್ಕೆ ವಿರೋಧ ವ್ಯಕ್ತ ಪಡಿಸಿದ ಕುಮಾರಸ್ವಾಮಿ 'ಮಸೂದೆ ಗಳನ್ನು ಮಂಡಿಸದೇ ಹೋದರೆ ದೇಶ ಮುಳುಗಿ ಹೋಗೋದಿಲ್ಲ.

ಮಸೂದೆ ಮಂಡನೆಯನ್ನು ಮುಂದೂಡಿ ಕೃಷ್ಣಾ ನ್ಯಾಯ ಮಂಡಳಿ ತೀರ್ಪಿನ ಚರ್ಚೆಗೆ ಅವಕಾಶ ನೀಡಬೇಕು' ಎಂದು ಒತ್ತಾಯಿಸಿದರು. 'ಕೃಷ್ಣಾ ವಿಷಯದಲ್ಲಿ ರಾಜ್ಯ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ. ರಾಜಕೀಯ ಮಾಡುತ್ತಿದೆ' ಎಂದು ಅವರು ಆರೋಪಿಸಿದರು. 'ಮಸೂದೆ ಮಂಡನೆಗಿಂತ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸೋದು ಮುಖ್ಯ' ಎಂದರು.

ಇದಕ್ಕೂ ಮೊದಲು ಜೆಡಿಎಸ್ ನ ಚೆಲುವರಾಯಸ್ವಾಮಿ, 'ನಮ್ಮ ನಾಯಕರು ಆಡಳಿತ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಪತ್ರಿಕೆಗಳಲ್ಲಿ ಬರುತ್ತಿವೆ. ಆದರೆ ಅವರು ಜನರ ಹಿತದೃಷ್ಟಿಯಿಂದ ಸುಮ್ಮನಿದ್ದಾರೆ' ಎಂದು ಹೇಳಿದ್ದರು.

ಹೊಣೆಗೇಡಿ ಸರ್ಕಾರ
ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಹೋರಾಟ ಮಾಡಿದವರು ಇವರು (ಆಡಳಿತ ಪಕ್ಷದವರು). ಆದರೆ ಈಗ ಕೃಷ್ಣಾ ನಡಿಗೆ ಆಂಧ್ರದ ಕಡೆಗೆ ಎನ್ನುವಂತಾಗಿದೆ. ಇಷ್ಟಾದರೂ ಏನೂ ಆಗಿಲ್ಲ ಎಂಬಂತೆ ಸರ್ಕಾರ ಆರಾಮವಾಗಿದೆ. ಈ ಸರ್ಕಾರಕ್ಕೆ ಏನಾದರೂ ಜವಾಬ್ದಾರಿ ಇದೆಯಾ?
-ಎಚ್.ಡಿ. ಕುಮಾರಸ್ವಾಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.