ಶನಿವಾರ, ಮೇ 15, 2021
22 °C

ಸಿಡಿಲ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರದ ಬೇಗೆಯಲ್ಲಿ ಬೆಂಕಿಯಂಥ ಮಳೆ

ಬೆಂದ ಜೀವಕ್ಕೆ ಮಿಂಚು ಸಿಡಿಲಿನಾ ಕಳೆ!

ತಣ್ಣಗಾಗಲಿಲ್ಲ ಇಳೆ, ಬೆಳಗಲಿಲ್ಲ ಬೆಳೆ

ಬಳಲಿದಾ ಜೀವಗಳಿಗೆ

ಬಿಸಿಲ ಬಾಣಲೆಯಲ್ಲಿ

ನೀರ ಮಾಯಾಂಗನೆಯ ಆಟ;

ಕುದಿವ ಪ್ರಕೃತಿಯಲ್ಲಿ ಕೇಕೆ ಹಾಕುತ್ತಿದೆ

ಸಾವಿನ ಓಟ

ಭೂರಮೆಯ ಬಗೆದ ಬಲ್ಲಿದರೆಲ್ಲಾ

ತಂಪಿನರಮನೆಯಲ್ಲಿ,

ತುತ್ತು ಅನ್ನಕ್ಕೆ ಕೈ ಹೊತ್ತವರು

ಆಪು, ಹೆಂಚಿನ, ತಡಿಕೆಯಲ್ಲಿ;

ಪಡೆದು ಧನ್ಯರಾಗಿದ್ದಾರೆ

ಪುಣ್ಯದಾ ಸಾವು

ಬದುಕಿರುವ ಪಾಪಿಗಳಿಗೆ

ಬಿಡುವುದಿಲ್ಲ ಇವರ ಶಾಪದಾ ಕಾವು!!

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.