ಮಂಗಳವಾರ, ಮೇ 11, 2021
28 °C

`ಸಿದ್ದಿ ಸಮುದಾಯದ ಅಭಿವೃದ್ಧಿಗೆ ಆಗ್ರಹಿಸಿ ಸಿಎಂಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳಿಯಾಳ: ಅನುಸೂಚಿತ ಬುಡಕಟ್ಟು ಸಿದ್ದಿ ಸಮುದಾಯದವರ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವುದು ಹಾಗೂ ಸಿದ್ದಿ ಸಮು ದಾಯದವರ ಸರ್ವಾಂಗಿಣ ಅಭಿವೃದ್ದಿಗಾಗಿ ಆಗ್ರಹಿಸಿ ಪಟ್ಟಣದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಹಳಿಯಾಳ ಹಾಗೂ ಗ್ರೀನ್ ಇಂಡಿಯಾ ಸಂಸ್ಥೆ ದಾಂಡೇಲಿ ಇವರ ಸಂಯುಕ್ತ ಆಶ್ರಯದಲ್ಲಿ ಮೆರವಣಿಗೆ ನಡೆಸಿ ತಹಶೀಲ್ದಾರ್‌ರ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಯಿತು.ಸ್ಥಳಿಯ ಅರ್ಬನ್ ಬ್ಯಾಂಕ್ ಹತ್ತಿರ ನೂರಾರು ಸಂಖ್ಯೆಯಲ್ಲಿ ಸಿದ್ದಿ ಬುಡಕಟ್ಟು ಜನರು ಸೇರಿ ಅಲ್ಲಿಂದ ಘೊಷಣೆಗಳೊಂದಿಗೆ ಮೆರವಣಿಗೆ ಮೂಲಕ ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆಯ ಅಧ್ಯಕ್ಷರಾದ ದಿಯೋಗ ಸಿದ್ದಿ ತಹಶೀಲ್ದಾರ್ ಶಾರದಾ ಕೋಲಕಾರ ಅವರಿಗೆ ಮನವಿ ಸಲ್ಲಿಸಿದರು.ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವಂತಹ ಹಳಿ ಯಾಳ, ಮುಂಡಗೋಡ, ಯಲ್ಲಾಪುರ, ಶಿರಸಿ, ಅಂಕೋಲಾ, ಜೋಯಿಡಾ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 3500 ಸಿದ್ದಿ ಕುಟುಂಬ ಗಳಿದ್ದು, 33 ಸಾವಿರ ಜನಸಂಖ್ಯೆ ಹೊಂದಿದೆ. ಈ ಸಮುದಾಯವು ಆರ್ಥಿಕ, ಶೈಕ್ಷಣಿಕ , ಸಾಮಾಜಿಕ ಸಾಂಸ್ಕೃತಿಕ, ರಾಜಕೀಯವಾಗಿ ಹಿಂದೆ ಉಳಿದಿದೆ. ಕೃಷಿ ಕೂಲಿ ಮಾಡುತ್ತಾ ಬದುಕುವ ಬುಡಕಟ್ಟು ಸಿದ್ದಿ ಜನರಿಗೆ ಅನುಸೂಚಿತ ಬುಡಕಟ್ಟು ಮತ್ತು ಇತರೆ ಅರಣ್ಯವಾಸಿಗಳ ಹಕ್ಕುಗಳನ್ನು ಮಾನ್ಯ ಮಾಡುವ ತಿದ್ದುಪಡಿ ನಿಯಮಗಳು 2012 ಜಾರಿಗೆ ತಂದರೂ ಸಹ ಈವರೆಗೂ ಸಿದ್ದಿ ಜನರ ಹಕ್ಕುಗಳು ಅವರಿಗೆ ಸಿಗುತ್ತಿಲ್ಲ. ಸರ್ಕಾರದ ಆದೇಶದ ಪ್ರಕಾರ ಜಿಲ್ಲೆಯಲ್ಲಿರುವಂತಹ ಸಿದ್ದಿ ಬುಡಕಟ್ಟುಗಳಿಗೆ ಕಾನೂನಿನಂತೆ ಪ್ರತಿಯೊಂದು ಸಿದ್ದಿ ಕುಟುಂಬಕ್ಕೂ 4 ಹೆಕ್ಟರ್ ಭೂಮಿಯನ್ನು ಮಂಜೂರು ಮಾಡಬೇಕು. ಮೂಲ ಸೌಕರ್ಯ ಸೇರಿದಂತೆ ಮುಂತಾದ ಬೇಡಿಕೆಗೆ ಆಗ್ರಹಿಸಿದರು.ಮುಖಂಡರಾದ ನನ್ನಾಸಾಬ ಸಿದ್ದಿ, ಬಯಾಮಾ ಸಿದ್ದಿ, ಜುಂವಾವ ಸಿದ್ದಿ, ಮೇರಿ ಗರಿಬಾಚೆ, ಮಿಗೆಲೊ, ಸಾಲು, ಅಲ್ಲಿಸಾಬ, ಇಂತ್ರೋಜ್, ಕರಿಮ್, ರಾಜಮಾಬಿ, ಕಮಾಲಷಾ, ಅಂತೋಷ, ಬಸ್ತ್ಯಾಂವ, ನತಾಲ, ವಾಲಂತಿ, ಡುಮಿಂಗ್ ಸಿದ್ದಿ, ರೋಜಿಯಾ ಸಿದ್ದಿ, ಸಿಮಾಂವ ಸಿದ್ದಿ ಮತ್ತಿತರರು ಭಾಗವಹಿಸಿದ್ದರು.

ಉಚಿತ ವೈದ್ಯಕೀಯ ಶಿಬಿರ

ಅಂಕೋಲಾ: ಸ್ಥಳೀಯ ಕೆನರಾ ವೆಲ್‌ಫೆರ್ ಟ್ರಸ್ಟ್‌ನ ಗೋಖಲೆ ಸೆಂಟಿನರಿ ಪದವಿ ಕಾಲೇಜು ಹಾಗೂ ಪಿ.ಎಂ. ಹೈಸ್ಕೂಲ್ ಇವರ ಸಹಯೋಗದಲ್ಲಿ ಜೂನ್ 16ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಾಸಗೋಡದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಹಮ್ಮಿ ಕೊಳ್ಳಲಾಗಿದೆ.ಈ ಶಿಬಿರದ ಪ್ರಾಯೋಜಕತ್ವವನ್ನು ಸುಪ್ರೀಂಕೋರ್ಟ್ ವಕೀಲ ದೇವ ದತ್ ಕಾಮತ ವಹಿಸಿಕೊಂಡಿದ್ದು, ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಕೆನರಾ ವೆಲ್‌ಫೆರ್ ಟ್ರಸ್ಟ್‌ನ ಆಡಳಿತಾಧಿಕಾರಿ ಕೆ.ವಿ.ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸನ್ಮಾನ: ಬೀಳ್ಕೊಡುಗೆ

ಶಿರಸಿ: ಇಲ್ಲಿನ ಕೆ.ಡಿ.ಸಿ.ಸಿ. ಬ್ಯಾಂಕ್‌ನಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸಿ ನಿವೃತ್ತರಾದ ಲಕ್ಷ್ಮಣ ಶಾನಭಾಗ ಕಡತೋಕಾ, ವಿಜಿಲೆನ್ಸ್ ಅಧಿಕಾರಿ ಎನ್.ಎಸ್.ಕಾಮತ ಅವರನ್ನು ಇತ್ತೀಚೆಗೆ ಬ್ಯಾಂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು.ಬ್ಯಾಂಕಿನ ಅಧ್ಯಕ್ಷ ಶಾಂತಾರಾಮ ಹೆಗಡೆ, ನಿರ್ದೇಶಕ ಎನ್.ಪಿ.ಗಾಂವಕರ, ಷಣ್ಮುಖ ಗೌಡ, ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಮಾವಿನಕುರ್ವೆ, ಸಹಾಯಕ ಪ್ರಧಾನ ವ್ಯವಸ್ಥಾಪಕ ಡಿ.ಎಂ.ಕುಮಟಾಕರ, ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಜಿ.ಜಿ.ಹೆಗಡೆ, ಹಿರಿಯ ವ್ಯವಸ್ಥಾಪಕ ಆರ್.ಎಸ್.ಜೋಶಿ, ಎಂ.ಪಿ.ಕೆಲ್ಸಿ ಮಾತನಾಡಿದರು.ಈ ಸಂದರ್ಭದಲ್ಲಿ ಬ್ಯಾಂಕಿನ ಸಾಲ ವಸೂಲಿ ಸಲಹೆಗಾರರಾಗಿದ್ದ ಎಂ.ಡಿ.ಪಟಗಾರ ಕೆಲಸದಿಂದ ಬಿಡುಗಡೆ ಹೊಂದಿದ್ದು, ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಪಿ.ಡಿ. ಮದ್ಗುಣಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.