ಪುಂಗಿದಾಸನಿಗೆ ‘ಯು/ಎ’ ಪತ್ರ
ಕೋಮಲ್ ಕುಮಾರ್ ಅವರ ಅಭಿನಯದ ‘ಪುಂಗಿದಾಸ’ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯು ‘ಯು/ಎ’ ಪ್ರಮಾಣ ಪತ್ರ ನೀಡಿದೆ. ಶ್ರೀನಾಥ್ ನಿರ್ದೇಶನದ ಈ ಚಿತ್ರದಲ್ಲಿ ಆಸ್ಮ, ಆರ್.ಎನ್. ಸುದರ್ಶನ್, ಸಾಹುಕಾರ್ ಜಾನಕಿ, ಬಿ.ಸಿ. ಪಾಟೀಲ್, ತಬಲಾ ನಾಣಿ, ಕುರಿ ಪ್ರತಾಪ್, ಬುಲೆಟ್ ಪ್ರಕಾಶ್, ಪದ್ಮಜಾ ರಾವ್, ರಾಜೇಂದ್ರ ಕಾರಂತ್ ಇತರರು ಅಭಿನಯಿಸಿದ್ದಾರೆ. ಫರ್ಹಾನ್ ರೋಷನ್ ಸಂಗೀತ, ಅರುಳ್ ಛಾಯಾಗ್ರಹಣವಿದೆ. ಸದಾಶಿವ ‘ಪುಂಗಿದಾಸ’ನ ನಿರ್ಮಾಪಕರು.

ಬಾಗಲೂರಿನಲ್ಲಿ ‘ಲೂಟಿ’
ನಿರಂಜನ್ ಎನ್.ಎಂ. ನಿರ್ಮಿಸುತ್ತಿರುವ ‘ಲೂಟಿ’ ಚಿತ್ರದ ‘ಮಳವಳ್ಳಿ ಮಳ್ಳಿ ನಾನು ಮಸ್ತಾಗಿಲ್ವಾ...’ ಹಾಡಿನ ಚಿತ್ರೀಕರಣ ಬೆಂಗಳೂರಿನ ಬಾಗಲೂರು ಬಳಿ ನಡೆದಿದೆ. ಮದನ್ ಹರಿಣಿ ನೃತ್ಯ ನಿರ್ದೇಶನದ ಈ ಹಾಡಿನ ಚಿತ್ರೀಕರಣದಲ್ಲಿ ಸಾಧುಕೋಕಿಲ, ಆಂಡ್ರಿಯಾ ಡಿಸೋಜ, ಬಿ. ಜಯಶ್ರೀ, ಮೋಹನ್ ಜುನೇಜ ಪಾಲ್ಗೊಂಡಿದ್ದರು. ಗಿರೀಶ್ ಕಂಪ್ಲಾಪುರ್ ನಿರ್ದೇಶನದ ಈ ಚಿತ್ರಕ್ಕೆ ಧರ್ಮವಿಶ್ ಸಂಗೀತ, ರಾಜೇಂದ್ರನ್ ಎಂ. ಛಾಯಾಗ್ರಹಣ, ದಾಮೋದರ್ ಸಂಕಲನವಿದೆ. ಇಶಾ ಕೊಪ್ಪಿಕರ್, ಧ್ರುವ, ಶ್ವೇತಾ ಪಂಡಿತ್, ದಿಲೀಪ್ ರಾಜ್, ಸಾಧುಕೋಕಿಲ ಇತರರು ಅಭಿನಯಿಸಿದ್ದಾರೆ.

ಜೂನ್ನಲ್ಲಿ ‘ಜಂಬೂಸವಾರಿ’
ಎ. ಹರಿಪ್ರಸಾದ್ ರಾವ್ ನಿರ್ಮಿಸಿರುವ ‘ಜಂಬೂಸವಾರಿ’ ಚಿತ್ರ ಜೂನ್ನಲ್ಲಿ ಬಿಡುಗಡೆಯಾಗಲಿದೆ. ವೇಣುಗೋಪಾಲ್ ಕೆ.ಸಿ. ನಿರ್ದೇಶಕರು. ಎಸ್. ಪ್ರೇಮ ಕುಮಾರ್ ಸಂಗೀತ, ಪ್ರತಾಪ್ ಛಾಯಾಗ್ರಹಣ, ರಮೇಶ್ಬಾಬು ಸಂಕಲನ, ಚಂದ್ರು ಎಸ್.ಎಲ್. ಸಂಭಾಷಣೆ ಚಿತ್ರಕ್ಕಿದೆ. ಪ್ರಜ್ವಲ್, ನಿಕ್ಕಿ, ಶೋಭರಾಜ್, ಅಚ್ಯುತ್ ರಾವ್, ಚೈತ್ರಾ ರೈ, ಮಿತ್ರ, ಸಾನಿಯಾ ಮುಂತಾದವರು ತಾರಾಬಳಗದಲ್ಲಿದ್ದಾರೆ.

‘ಬೆಳ್ಳಿ’ ಡ್ಯಾನ್ಸ್
ಎಚ್.ಆರ್. ರಾಜೇಶ್ ನಿರ್ಮಿಸುತ್ತಿರುವ, ಶಿವರಾಜ್ಕುಮಾರ್ ನಟನೆಯ ‘ಬೆಳ್ಳಿ’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಹಳ್ಳಿಯಲ್ಲಿ ವಾಸಿಸುತ್ತಿರುವ ನಾಯಕನನ್ನು ಆತನ ಸ್ನೇಹಿತರು ನಗರಕ್ಕೆ ಕರೆತರುವ ಸನ್ನಿವೇಶವನ್ನು ಬೆಂಗಳೂರಿನ ಕೆ.ಆರ್. ಪುರಂ ಇತ್ತೀಚೆಗೆ ಚಿತ್ರೀಕರಿಸಲಾಯಿತು. ಶಿವರಾಜಕುಮಾರ್, ವಿನೋದ್ ಪ್ರಭಾಕರ್, ದೀಪಕ್, ಪ್ರಶಾಂತ್, ವೆಂಕಟೇಶ್ ಹಾಗೂ ಗುರುದತ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಮಹೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿ ರುವ ಚಿತ್ರಕ್ಕೆ ವಿ. ಶ್ರೀಧರ್ ಸಂಗೀತವಿದೆ. ಕೃತಿ ಕರಬಂಧ, ವಿನೋದ್ ಪ್ರಭಾಕರ್, ದೀಪಕ್, ಒರಟ ಪ್ರಶಾಂತ್, ವೆಂಕಟೇಶ್, ಆದಿ ಲೋಕೇಶ್, ಪದ್ಮಾ ವಾಸಂತಿ,
ಬಿ.ವಿ. ರಾಧಾ, ಶ್ರೀನಿವಾಸಮೂರ್ತಿ, ರಮೇಶ್ ಭಟ್, ನಾಗರಾಜ್, ಹರೀಶ್ ರೈ, ಲೋಕಿ, ನೀನಾಸಂ ಮಂಜು, ಭಾಸ್ಕರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

‘ಕರ್ಣ’ನಾದ ಕಿಶೋರ್
ಜಿ. ರಾಮಚಂದ್ರನ್ ನಿರ್ಮಾಣದ ಕಿಶೋರ್ ಮುಖ್ಯಭೂಮಿಕೆಯ ‘ಕರ್ಣ’ ಚಿತ್ರಕ್ಕೆ ಮಾಸಾಂತ್ಯದಲ್ಲಿ ಚಾಲನೆ ಸಿಕ್ಕಲಿದೆ. ರವಿರಾಜ್ ನಿರ್ದೇಶನ ಈ ಚಿತ್ರಕ್ಕೆ ದಯಾಳ್ ಓಶೋ ಛಾಯಾಗ್ರಹಣ, ದೇವರಾಜ್ ಸಂಕಲನವಿದೆ. ಹಾರ್ದಿಕಾ ಶೆಟ್ಟಿ, ಶ್ರೀಚಂದ್ರು, ಶೋಭರಾಜ್ ಇತರರು ನಟಿಸುತ್ತಿದ್ದು ಮತ್ತಷ್ಟು ನಟರ ಆಯ್ಕೆ ನಡೆಯುತ್ತಿದೆ.

‘ಪೈಪೋಟಿ’ ಹಾಡು ಬಾಕಿ
‘ಪೈಪೋಟಿ’ ಚಿತ್ರದ ಮಾತಿನ ಭಾಗ ಹಾಗೂ ಮೂರು ಹಾಡುಗಳ ಚಿತ್ರೀಕರಣ ಮುಗಿದಿದ್ದು ಎರಡು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ. ಗುರುರಾಜ್, ನಿರಂಜನ್ ಶೆಟ್ಟಿ, ಪೂಜಶ್ರೀ ಮುಖ್ಯಭೂಮಿಕೆಯಲ್ಲಿದ್ದಾರೆ. ಅಚ್ಯುತ್ ಕುಮಾರ್, ಮೋಹನ್ ಜುನೇಜ, ಲಯೇಂದ್ರ ಇತರರು ನಟಿಸುತ್ತಿದ್ದಾರೆ. ರಾಂನಾರಾಯಣ್ ಈ ಚಿತ್ರದ ನಿರ್ದೇಶಕರು. ಗಣೇಶ್ ನಾರಾಯಣ್ ಸಂಗೀತ, ಅನಂತ್ ಅರಸ್ ಛಾಯಾಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.