ಮಂಗಳವಾರ, ಜೂನ್ 22, 2021
29 °C
ಕಲ್ಲಿದ್ದಲು ಹಗರಣ

ಸಿಬಿಐನಿಂದ ನಾಯರ್‌ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಪ್ರಧಾನಿ ಮನ­ಮೋಹನ್‌್ ಸಿಂಗ್‌್ ಅವರ ಸಲಹೆಗಾರ ಟಿ.ಕೆ.ಎ.ನಾಯರ್‌ ಅವರನ್ನು ಸಿಬಿಐ ತನಿಖೆಗೆ ಒಳಪಡಿಸಿದೆ.ಕಲ್ಲಿದ್ದಲು ಸಚಿವಾಲಯದ ಆಯ್ಕೆ ಸಮಿತಿ ಅಸಮ್ಮತಿಯ ನಡುವೆಯೂ ಹಿಂಡಾಲ್ಕೊ ಕಂಪೆನಿಗೆ ಒಡಿಶಾದ ತಲಬಿ­ರಾದಲ್ಲಿ ನಿಕ್ಷೇಪ ಹಂಚಿಕೆ ಮಾಡಿದ್ದು ಸೇರಿದಂತೆ ನಿಕ್ಷೇಪ ಹಂಚಿಕೆ­ಯಲ್ಲಿ ನಡೆದ ಅವ್ಯವಹಾರಗಳಿಗೆ  ಸಂಬಂಧಿಸಿದಂತೆ ನಾಯರ್‌್ ಅವರಿಂದ ಸಿಬಿಐ ಮಾಹಿತಿ ಕೇಳಿತ್ತು.ಸಿಬಿಐ ಕಳುಹಿಸಿದ ಸುದೀರ್ಘ ಪ್ರಶ್ನಾವಳಿಗಳಿಗೆ ನಾಯರ್‌್ ಉತ್ತರಿಸಿ ದ್ದಾರೆ ಎಂದು ಮೂಲಗಳು ತಿಳಿಸಿವೆ. 2006ರಿಂದ 2009ವರೆಗೆ ಪ್ರಧಾನಿ ಸಿಂಗ್‌್ ಅವರು ಕಲ್ಲಿದ್ದಲು ಖಾತೆ ವಹಿಸಿಕೊಂಡಿದ್ದಾಗ ನಿಕ್ಷೇಪ ಹಂಚಿ­ಕೆ­ಯಲ್ಲಿ ಅನುಸರಿಸಿದ್ದ ನೀತಿ, ನಿಕ್ಷೇಪ ಹರಾಜಿನಲ್ಲಿ ಆದ ವಿಳಂಬ, ನಾಪ­ತ್ತೆಯಾದ ಕಡತಗಳು, ಹಿಂಡಾ­ಲ್ಕೊಗೆ ತಲಬಿರಾದಲ್ಲಿ ನಿಕ್ಷೇಪ ಹಂಚಿಕೆ ಮಾಡಿದ ಕಾರಣ... ಇತ್ಯಾದಿ ಮಾಹಿತಿ­ಯನ್ನು ಸಿಬಿಐ ನಾಯರ್‌್ ಅವರಿಂದ ಕೇಳಿತ್ತು. ತಲಬಿರಾದಲ್ಲಿ ಹಿಂಡಾಲ್ಕೊ ಕಂಪೆ ನಿಗೆ ನಿಕ್ಷೇಪ ಹಂಚಿಕೆ ಮಾಡಿದ್ದಕ್ಕೆ ಸಂಬಂಧಿಸಿ ಅಂದಿನ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ.­ಪಾರಖ್‌್ ಹಾಗೂ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.ನಾಯರ್‌್ ಕಳುಹಿಸಿದ ಪ್ರತಿಕ್ರಿಯೆ ಬಗ್ಗೆ ಸುಪ್ರೀಂಕೋರ್ಟ್‌ಗೆ ಸಿಬಿಐ ಮಾಹಿತಿ ನೀಡ­ಲಿದೆ. ಪ್ರಧಾನಿ ಕಚೇ ರಿಯ ಇಬ್ಬರು ಮಾಜಿ ಅಧಿಕಾರಿಗ ಳಾದ ವಿನಿ ಮಹಾ­ಜನ್‌್ ಹಾಗೂ ಆಶಿಶ್‌ ಗುಪ್ತಾ ಅವರನ್ನು ಈಗಾಗಲೇ  ಸಿಬಿಐ ಪ್ರಶ್ನೆಗೊಳಪಡಿಸಿದೆ.

2006ರಿಂದ 2009ರ ಅವಧಿಯಲ್ಲಿ ಇವರಿಬ್ಬರೂ ಪ್ರಧಾನಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮಾರ್ಚ್‌್ 26ರ ಒಳಗೆ ಸಿಬಿಐ ಈ ಹಗರಣದ ತನಿಖೆಯ ಅಂತಿಮ ವರದಿ ಸಲ್ಲಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.