ಬೆಂಗಳೂರು:ಜಿಂದಾಲ್ ಸಮೂಹದ ಸೌತ್ವೆಸ್ಟ್ ಮೈನಿಂಗ್ ಕಂಪೆನಿಯಿಂದ ಲಂಚ ಪಡೆದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಬಿಐ ತನಿಖಾ ತಂಡ ಶನಿವಾರ ಮೊದಲ ಬಾರಿಗೆ ವಿಚಾರಣೆ ನಡೆಸಿತು. ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಕೂಡ ವಿಚಾರಣೆ ಎದುರಿಸಿದರು.

ಯಡಿಯೂರಪ್ಪ ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅಳಿಯ ಆರ್.ಎನ್.ಸೋಹನ್ಕುಮಾರ್ ಹಾಗೂ ಸೌತ್ವೆಸ್ಟ್ ಮೈನಿಂಗ್ ಕಂಪೆನಿಯ ಅಧಿಕಾರಿಗಳನ್ನು ಸಿಬಿಐ ಕೆಲವು ದಿನಗಳ ಹಿಂದೆಯೇ ವಿಚಾರಣೆ ನಡೆಸಿತ್ತು.

ಆದರೆ, ಈವರೆಗೂ ಯಡಿಯೂರಪ್ಪ ಅವರ ವಿಚಾರಣೆ ನಡೆಸಿರಲಿಲ್ಲ. ಇತ್ತೀಚೆಗೆ ನೋಟಿಸ್ ನೀಡಿದ್ದ ತನಿಖಾ ತಂಡ, ಶನಿವಾರ ಸಂಜೆ 4.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಸಿಬಿಐ ಸೂಚನೆಯಂತೆ ಅವರು ವಿಚಾರಣೆಗೆ ಹಾಜರಾದರು.

ಸಂಜೆ 4.30ಕ್ಕೆ ಯಡಿಯೂರಪ್ಪ ಗಂಗಾನಗರದಲ್ಲಿರುವ ಸಿಬಿಐ ಕಚೇರಿಗೆ ಬಂದರು. ಕೃಷ್ಣಯ್ಯ ಶೆಟ್ಟಿ ಪ್ರತ್ಯೇಕ ವಾಹನದಲ್ಲಿ ಅಲ್ಲಿಗೆ ಬಂದರು. ಶನಿವಾರ ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿ ಅವರನ್ನು ಮಾತ್ರ ವಿಚಾರಣೆ ನಡೆಸಲಾಗಿದೆ.

ರಾಘವೇಂದ್ರ ಕೂಡ ಈ ಸಂದರ್ಭದಲ್ಲಿ ಸಿಬಿಐ ಕಚೇರಿಯಲ್ಲಿ ಹಾಜರಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಸಿಬಿಐ ಡಿಐಜಿ ಆರ್.ಹಿತೇಂದ್ರ ಅವರ ಮಾರ್ಗದರ್ಶನಲ್ಲಿ ಹೆಚ್ಚುವರಿ ಎಸ್ಪಿ ಬಿಸ್ವಜಿತ್ ದಾಸ್ ನೇತೃತ್ವದ ತನಿಖಾ ತಂಡ ಸಂಜೆ 5 ಗಂಟೆಯ ವೇಳೆಗೆ ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿ ಅವರ ವಿಚಾರಣೆ ಆರಂಭಿಸಿತು. ಆರಂಭದಲ್ಲಿ ಇಬ್ಬರನ್ನೂ ಪ್ರತ್ಯೇಕವಾಗಿ ಪ್ರಶ್ನಿಸಲಾಯಿತು. ನಂತರ ಇಬ್ಬರನ್ನೂ ಒಟ್ಟಿಗೆ ಪ್ರಶ್ನಿಸಿ, ಇಬ್ಬರೂ ನೀಡಿದ ಉತ್ತರಗಳನ್ನು ಹೋಲಿಕೆ ಮಾಡಲಾಗಿದೆ. ರಾತ್ರಿ 8.45ರವರೆಗೂ ವಿಚಾರಣೆ ನಡೆಯಿತು ಎಂದು ಗೊತ್ತಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ರಾಚೇನಹಳ್ಳಿಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದ ಸಂದರ್ಭದಿಂದ ಅದನ್ನು ಯಡಿಯೂರಪ್ಪ ಅವರ ಪುತ್ರರು ಮತ್ತು ಅಳಿಯ ಖರೀದಿಸಿ, ಸೌತ್ವೆಸ್ಟ್ ಕಂಪೆನಿಗೆ ಮಾರಾಟ ಮಾಡುವವರೆಗಿನ ಬೆಳವಣಿಗೆಗಳ ಬಗ್ಗೆ ಇಬ್ಬರನ್ನೂ ಪ್ರಶ್ನಿಸಲಾಗಿದೆ. ಪ್ರೇರಣಾ ಶಿಕ್ಷಣ ಸಂಸ್ಥೆಯು ಜಿಂದಾಲ್ ಸಮೂಹದಿಂದ ಬೃಹತ್ ಮೊತ್ತದ ವಂತಿಗೆ ಪಡೆದಿರುವ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.