ಸಿರಿಯಾ: 9 ಜನರ ಬಲಿ

7

ಸಿರಿಯಾ: 9 ಜನರ ಬಲಿ

Published:
Updated:

ನಿಕೋಸಿಯಾ (ಎಎಫ್‌ಪಿ): ಅಧ್ಯಕ್ಷ ಬಷರ್ ಅಲ್ ಹಸದ್ ಅವರ ಆಡಳಿತ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಭರದಲ್ಲಿ ಸಿರಿಯಾ ರಕ್ಷಣಾ ಪಡೆಗಳು ನಡೆಸಿರುವ ಗುಂಡಿನ ದಾಳಿಗೆ 9 ಜನ ನಾಗರಿಕರು ಮೃತಪಟ್ಟಿದ್ದಾರೆ ಎಂದು ಮಾನವ ಹಕ್ಕುಗಳ ಕಾವಲು ಸಮಿತಿಯ ಜಿಯಾದ್ ಅಲ್ ಒಬೈದಿ `ಇ ಮೇಲ್~ ಸಂದೇಶವೊಂದರಲ್ಲಿ ತಿಳಿಸಿದ್ದಾರೆ.ದಿಯರ್ ಎಜ್ಜಾರ್ ಪ್ರಾಂತ್ಯದಲ್ಲಿ ಪ್ರತಿಭಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಶವ ಸಂಸ್ಕಾರದಲ್ಲಿ ಪಾಲ್ಗೊಂಡ ಜನರ ಮೇಲೂ ಸಿರಿಯಾ ರಕ್ಷಣಾ ಪಡೆಗಳು ಗುಂಡಿನ ದಾಳಿ ನಡೆಸಿವೆ.ಆಗ್ರಹ: (ಕೈರೊ ವರದಿ): ಅರಬ್ ಲೀಗ್ ರಾಷ್ಟ್ರಗಳ ಪಟ್ಟಿಯಲ್ಲಿನ ಸಿರಿಯಾದ ಮಾನ್ಯತೆಯನ್ನು ಅಮಾನತುಗೊಳಿಸಲು ಹಲವು ಸದಸ್ಯ ರಾಷ್ಟ್ರಗಳು ಒತ್ತಾಯಿಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry