ಮೈಸೂರು:  ‘ನೊಬೆಲ್ ಪ್ರಶಸ್ತಿ ಪಡೆದ ಸರ್ ಸಿ.ವಿ.ರಾಮನ್ ಇಂದಿನ ವಿಜ್ಞಾನಿಗಳಿಗೆ ಮಾದರಿಯಾಗಿದ್ದಾರೆ’ ಎಂದು ಮಂಗಳೂರು ವಿವಿಯ ವಿಶ್ರಾಂತ ಕುಲಪತಿ ಡಾ.ಎಂ.ಐ. ಸವದತ್ತಿ ಸೋಮವಾರ ತಿಳಿಸಿದರು. ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮೈಸೂರು ವಿವಿಯು ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಅಂಗವಾಗಿ ಏರ್ಪಡಿಸಿದ್ದ ‘ವಿಜ್ಞಾನ: ಬೆಳವಣಿಗೆ ಮತ್ತು ಸದಾವಕಾಶಗಳು’ ಕುರಿತು ಉಪನ್ಯಾಸ ನೀಡಿದರು.

‘ಸಿ.ವಿ.ರಾಮನ್ ಬದ್ಧತೆ, ಪ್ರಾಮಾಣಿಕತೆ ಮತ್ತು ದೇಶಪ್ರೇಮವನ್ನು ಇಟ್ಟುಕೊಂಡು ಸಂಶೋಧನೆ ನಡೆಸಿದರು. ಆದರೆ ಇಂದಿನ ವಿಜ್ಞಾನಿಗಳಲ್ಲಿ ಇಂತಹ ಗುಣಗಳು ಇಲ್ಲವಾಗಿದೆ. ಮೋಸ, ವಂಚನೆ ಹೆಚ್ಚಾಗಿದೆ. ಕೃತಿಚೌರ್ಯ, ನಕಲು ಮಾಡಲಾಗುತ್ತಿದೆ. ನೂರಕ್ಕೆ 34 ರಷ್ಟು ಪ್ರಕಟಣೆಗಳು ನಕಲು ಇಲ್ಲವೇ ಮತ್ತೊಬ್ಬರಿಂದ ಕದ್ದವೇ ಆಗಿರುತ್ತವೆ. ದೇಶ ಪ್ರೇಮ ಇಲ್ಲವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಮನ್ ಬೆಂಗಳೂರಿನಲ್ಲಿ ರಾಮನ್ ಸಂಶೋಧನಾ ಸಂಸ್ಥೆ (ಆರ್ಆರ್ಐ) ಸ್ಥಾಪಿಸಿದರು. ಇದಕ್ಕಾಗಿ ಅವರು ಯಾರ ಬಳಿಯೂ ದೇಣಿಗೆ ಸಂಗ್ರಹಿಸಲಿಲ್ಲ, ಸರ್ಕಾರದಿಂದ ಅನುದಾನ ಕೇಳಲಿಲ್ಲ. ನೊಬೆಲ್ ಪ್ರಶಸ್ತಿ ದೊರೆತಾಗ ಬಂದ ಹಣವನ್ನು ಬಳಕೆ ಮಾಡಿದರು. ಸರ್ಕಾರ ಅನುದಾನ ನೀಡಲು ಮುಂದಾದಾಗ ತಿರಸ್ಕರಿಸಿ ದರು. ಕಾರಣವಿಷ್ಟೆ, ಒಂದು ವೇಳೆ ಸರ್ಕಾರದಿಂದ ಅನುದಾನ ಪಡೆದರೆ ಅವರು ಹಿಡಿತ ಸಾಧಿಸುತ್ತಾರೆ. ಇದರಿಂದ ಸಂಶೋಧನೆಗೆ ಹಿನ್ನೆಡೆಯಾಗುತ್ತದೆ ಎಂದು ಭಾವಿಸಿದ್ದರು’ ಎಂದ ಅವರು, ‘ತಮ್ಮ ಸಂಸ್ಥೆಯಲ್ಲಿ ಪಿಎಚ್ಡಿ ಅಧ್ಯಯನ ಬಯಸಿ ಬರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಅನುತ್ತೀರ್ಣರಾದರೆ ಟಿಎ, ಡಿಎ ಕೊಟ್ಟು ಕಳುಹಿಸುತ್ತಿದ್ದರು. ಒಮ್ಮೆ ಸಂದರ್ಶನದಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಗೆ 100 ರೂಪಾಯಿ ಹೆಚ್ಚು ಟಿಎ ಕೊಡಲಾಗಿತ್ತು. ಆ ವಿದ್ಯಾರ್ಥಿ ರಾಮನ್ ಬಳಿ ಬಂದು ವಿಷಯ ತಿಳಿಸಿ ಹಿಂದಿರುಗಿಸಿದ. ಆತನ ಪ್ರಾಮಾಣಿಕತೆ ಮೆಚ್ಚಿದ ರಾಮನ್ ಸಂದರ್ಶನದಲ್ಲಿ ಅನುತ್ತೀರ್ಣನಾಗಿದ್ದರೂ ಪಿಎಚ್ಡಿಗೆ ಅನುಮತಿ ನೀಡಿದರು. ಅವರಿಗೆ ಪ್ರಾಮಾಣಿಕರು ಇಷ್ಟವಾಗುತ್ತಿದ್ದರು’ ಎಂದು ಉದಾಹರಣೆ ನೀಡಿದರು.

ಹಣವೇ ಮುಖ್ಯ: ‘ಹಿಂದೆ ವಿಜ್ಞಾನಿಗಳು ಸಂಶೋಧನೆ ನಡೆಸಿ ಯಶಸ್ವಿಯಾದರೆ ಸಂಭ್ರಮಿಸುತ್ತಿದ್ದರು. ಆದರೆ ಈಗ ಸಂಬಳ ಹೆಚ್ಚಾದರೆ, ಕಾರು ಕೊಂಡರೆ ಸಂಭ್ರಮಿಸುತ್ತಾರೆ. ಸಂಭ್ರಮಿಸುವುದರ ಅರ್ಥವೇ ಬದಲಾಗಿದೆ. ಸಂಭ್ರಮ ಹಣದಲ್ಲಿ ಇಲ್ಲ. ಮುಖೇಶ್ ಅಂಬಾನಿ 450 ಕೋಟಿ ಖರ್ಚು ಮಾಡಿ ಮನೆ ಕಟ್ಟಿಸಿದ್ದಾರೆ. ಅವರ ಮನೆಯಲ್ಲಿ ಇರುವವರು ಕೇವಲ ನಾಲ್ಕು ಮಂದಿ. ಇತರರಿಗೆ ತೋರಿಸುವುದಕ್ಕಾಗಿ ಹಣ ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಹೆಚ್ಚು ಹಣ, ಹೆಚ್ಚು ವೈದ್ಯರು ಎನ್ನುವಂತೆ ಆಗುತ್ತದೆ’ ಎಂದು ಎಚ್ಚಸಿದರು.
‘ಜ್ಞಾನಕ್ಕಾಗಿ ಜ್ಞಾನ ಎನ್ನುವುದು ಈಗ ಇಲ್ಲವಾಗಿದೆ. ಜ್ಞಾನ, ತಂತ್ರಜ್ಞಾನ, ಉತ್ಪಾದನೆ, ಗ್ರಾಹಕ ಎನ್ನುವಂತಾಗಿದೆ. ಇದರಿಂದಾಗಿ ಜ್ಞಾನ ಮತ್ತು ತಂತ್ರಜ್ಞಾನ ನಡುವೆ ವ್ಯತ್ಯಾಸ ಇಲ್ಲದಂತಾಗಿದೆ’ ಎಂದರು.

‘ಎಷ್ಟೋ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವಿಜ್ಞಾನ ಶಿಕ್ಷಕರೇ ಇಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ವಿಜ್ಞಾನ ಬೋಧಿಸುವ ಉತ್ತಮ ಉಪನ್ಯಾಸಕರು ಇಲ್ಲವಾಗಿದ್ದಾರೆ. ಆದ್ದರಿಂದ ವಿವಿ ಮಟ್ಟದಲ್ಲಿ ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ಮತ್ತು ಬೆಂಬಲ ನೀಡಬೇಕಾಗಿದೆ. ಇಲ್ಲದೇ ಹೋದರೆ ವಿಜ್ಞಾನ ಹಿಂದೆ ಬಿದ್ದು ತಂತ್ರಜ್ಞಾನ ಮುನ್ನಡೆ ಸಾಧಿಸಲು ಬಿಟ್ಟಂತಾಗುತ್ತದೆ’ ಎಂದು ಹೇಳಿದರು. ಕುಲಪತಿ ಪ್ರೊ.ವಿ.ಜಿ.ತಳವಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಪ್ರೊ.ಪಿ.ಎಸ್.ನಾಯಕ್ ಸ್ವಾಗತಿಸಿದರು. ಪ್ರೊ.ಚಂದ್ರಕುಮಾರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.