ಸಿಹಿಕಹಿ ಭೋಜನ

7

ಸಿಹಿಕಹಿ ಭೋಜನ

Published:
Updated:
ಸಿಹಿಕಹಿ ಭೋಜನ

ಸಿಹಿಕಹಿ ಚಂದ್ರು ನೇತೃತ್ವದ ‘ಬೊಂಬಾಟ್ ಭೋಜನ’ ಕಾರ್ಯಕ್ರಮ 300 ಕಂತು ಪೂರೈಸಿ ದಾಖಲೆ ನಿರ್ಮಿಸಿದೆಯಂತೆ. ಇದೇ ಸಂದರ್ಭದಲ್ಲಿ ಸಂಚಿಕೆಯಲ್ಲಿ ಬಂದ ರೆಸಿಪಿಗಳ ಪುಸ್ತಕ ಮತ್ತು ವೆಬ್‌ಸೈಟ್ ಅನ್ನು ಆರಂಭಿಸಲಾಗಿದೆ.ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರವರೆಗೆ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗುವ ಈ ಕಾರ್ಯಕ್ರಮದ ನಿರೂಪಕ ಚಂದ್ರು ಮಾತನಾಡಿ, ಸಸ್ಯಹಾರಿಯಾದ ನಾನು ಚೈನೀಸ್ ಮತ್ತು ಇಟಾಲಿಯನ್ ಅಡುಗೆಗಳನ್ನು ಪ್ರಯತ್ನಿಸಿದ್ದೇನೆ. 125 ಅಡುಗೆಗಳ ಬಗ್ಗೆ ಮಾಹಿತಿ ಈ ಪುಸ್ತಕದಲ್ಲಿದೆ. ಇದು ಪುಸ್ತಕದಂಗಡಿಯಲ್ಲಿ ಸಿಗುವುದಿಲ್ಲ, ಕೇವಲ ಹೋಟೆಲ್‌ಗಳಲ್ಲಿ ಸಿಗಲಿದೆ’ ಎಂದು ಮಾಹಿತಿ ನೀಡಿದರು. ನಟಿ ಸುಂದರಶ್ರೀ ಪುಸ್ತಕ ಬಿಡುಗಡೆ ಮಾಡಿದರೆ ಎಂ.ಎಸ್.ನರಸಿಂಹ ಮೂರ್ತಿ ವೆಬ್‌ಸೈಟ್‌ಗೆ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಸಿಹಿಕಹಿ ಗೀತಾ ನೇತೃತ್ವದಲ್ಲಿ ಏಪ್ರಿಲ್ ಒಂದರಿಂದ ಆರಂಭವಾಗುವ ಹೊಸ ಟಾಕ್‌ಶೋ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು. ಬಾಲ್ಯದಿಂದ ಮುಪ್ಪಿನವರೆಗೂ ಹೆಣ್ಣು ಅನುಭವಿಸುವ ಸಂಕಟಗಳಿಗೆ ಈ ಕಾರ್ಯಕ್ರಮ ವೇದಿಕೆ ಒದಗಿಸಲಿದೆಯಂತೆ. ಇಲ್ಲಿ ಹೆಣ್ಣುಮಕ್ಕಳು ತಮ್ಮ ಸಮಸ್ಯೆ ಮತ್ತು ಅನುಭವಗಳನ್ನು ಹಂಚಿಕೊಂಡು ಪರಿಹಾರ ಕಂಡುಕೊಳ್ಳಬಹುದು. ತಜ್ಞತಂಡ ಕಾರ್ಯಕ್ರಮದಲ್ಲಿ ಹಾಜರಿರಲಿದೆ ಎಂದು ಗೀತಾ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry