ಸಿಹಿ ತಿನಿಸುಗಳಿಗೂ ಕ್ರೀಡಾ ಸ್ಪರ್ಶ
ಲಂಡನ್ (ಐಎಎನ್ಎಸ್): ಒಲಿಂಪಿಕ್ ಕ್ರೀಡಾಕೂಟದ ಅಥ್ಲೆಟಿಕ್ಸ್ ಸ್ಪರ್ಧೆಗಳ ಆರಂಭದೊಂದಿಗೆ ಕ್ರೀಡಾ ಬಿಸಿ ಇಲ್ಲಿನ ಚಳಿಯಲ್ಲಿಯೂ ಬೆಚ್ಚನೆಯ ಅನುಭವ ನೀಡುತ್ತಿದೆ. ಇನ್ನೊಂದೆಡೆ ಸಿಹಿ ತಿನಿಸುಗಳು ಹಾಗೂ ಬೇಕರಿ ತಿನಿಸುಗಳನ್ನು ಸವಿಯುವ ಆಸಕ್ತಿಯೂ ಹೆಚ್ಚಿದೆ.
ಕ್ರೀಡಾ ಪ್ರವಾಸಿಗಳನ್ನು ಆಕರ್ಷಿಸಲು ಇಲ್ಲಿನ ಸಿಹಿ ತಿನಿಸುಗಳ ಉತ್ಪಾದಕರು ತಮ್ಮ ಉತ್ಪಾದನಗಳಿಗೆ `ಕ್ರೀಡಾ ಸ್ಪರ್ಶ~ ನೀಡಿದ್ದಾರೆ. ಇಲ್ಲಿನ ಜನಪ್ರಿಯ `ಹ್ಯಾಂಡ್ಮೇಡ್~ ಬಿಸ್ಕಟ್ಗಳನ್ನು `ಸ್ಪೋರ್ಟ್ಸ್ ಟಿನ್~ನಲ್ಲಿ ಮಾರಾಟಮಾಡಲಾಗುತ್ತಿದೆ.
ಇನ್ನೂ ವಿಶೇಷವೆಂದರೆ ಬಿಸ್ಕಟ್ಗಳು ಕ್ರೀಡಾಪಟುಗಳ ಭಂಗಿಗಳನ್ನು ಹೋಲುತ್ತವೆ. ಆದ್ದರಿಂದ ಕ್ರೀಡೆಯನ್ನು ಬಾಯಲ್ಲಿ ಇಟ್ಟುಕೊಂಡು ಸವಿಯಬಹುದಾಗಿದೆ! ಸಕ್ಕರೆ ಅಚ್ಚು ಹಾಗೂ ಜೆಲ್ಲಿ ಬಾಲ್ಗಳು ಕೂಡ ಇದೇ ರೀತಿಯಲ್ಲಿ ಕ್ರೀಡಾ ಸ್ಪರ್ಶ ಪಡೆದಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.