ಭಾನುವಾರ, ಜೂನ್ 13, 2021
26 °C

ಸುಂದರ ಸುರಪುರ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಂದರ ಸುರಪುರ ನಿರ್ಮಾಣ

ಸುರಪುರ: ಪಟ್ಟಣವನ್ನು ಸುಂದರಗೊಳಿಸಿ ಜಿಲ್ಲೆಯಲ್ಲಿಯೆ ಮಾದರಿ ತಾಲ್ಲೂಕು ಮಾಡಬೇಕೆನ್ನುವ ಮಹದುದ್ದೇಶ ಹೊಂದಿದ್ದೇನೆ. ಇದಕ್ಕಾಗಿ ಸರ್ಕಾರದಿಂದ ಸಾಕಷ್ಟು ಅನುದಾನ ತಂದಿದ್ದೇನೆ. ಈಗಾಗಲೆ ಪಟ್ಟಣದಲ್ಲಿ ರೂ. 16.5 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಂಡಿವೆ. ಅಧಿಕಾರಿಗಳು ಪ್ರಾಮಾಣಿತೆಯಿಂದ ಕೆಲಸ ನಿರ್ವಹಿಸಿ ನನ್ನ ಕನಸನ್ನು ನನಸನ್ನಾಗಿ ಮಾಡಬೇಕೆಂದು ಸಣ್ಣ ಕೈಗಾರಿಕೆ ಸಚಿವ ರಾಜೂಗೌಡ ಸೂಚಿಸಿದರು.ಲೋಕೋಪಯೋಗಿ ಇಲಾಖೆ ಪುರಸಭೆಯ ಸಹಯೋಗದೊಂದಿಗೆ ಎಸ್.ಎಫ್.,ಸಿ. 2007-08ರ ಅನುದಾನದಡಿ ಗಾಂಧಿವೃತ್ತದಿಂದ ತಹಸೀಲ್ ರಸ್ತೆ ಮಾರ್ಗವಾಗಿ ಹಳೆ ಬಸ್‌ನಿಲ್ದಾಣದವರೆಗೆ ನಿರ್ಮಿಸಿರುವ ಬೀದಿ ದೀಪ ಕಾಮಗಾರಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.ಇಲ್ಲಿನ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣದವರೆಗೆ ಮತ್ತು ಸಿದ್ದಾಪುರದ ಆಂಜನೇಯ ದೇವಸ್ಥಾನದವರೆಗೆ, ಡೊಣ್ಣಿಗೇರಿಯಿಂದ ತರಕಾರಿ ಮಾರುಕಟ್ಟೆವರೆಗೆ, ಎಸ್.ಬಿ.ಎಚ್.ನಿಂದ ವೆಂಕಟಾಪುರದವರೆಗೆ, ಹನುಮಾನ ಟಾಕೀಸ್‌ನಿಂದ ಗಾಂಧಿವೃತ್ತದವರೆಗೆ, ಸಲೀಂವರ್ತಿ ಮನೆಯಿಂದ ಪೊಲೀಸ್‌ಠಾಣಾವರೆಗೆ, ಸುಗುಣಾ ವಕೀಲರ ಮನೆಯಿಂದ ಕುಂಬಾರಪೇಟದವರೆಗೆ ಸಿ. ಸಿ. ರಸ್ತೆ. ಕುಂಬಾರಪೇಟದಿಂದ ಹಸನಾಪುರದವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ವಿವರಿಸಿದರು.ಕ್ಷೇತ್ರದ ಮತದಾರರ ಆಶೀರ್ವಾದದಿಂದ ಸಚಿವನಾಗಿದ್ದೇನೆ. ಪಕ್ಷದ ಹಿರಿಯ ನಾಯಕರ ಪ್ರೀತಿ ಹಾಗೂ ಸಹಕಾರ ನನಗಿದೆ. ತಾಲ್ಲೂಕಿನ ಅಭಿವೃದ್ಧಿಗೆ ಹಿಂದೆಂದೂ ಕಾಣದಷ್ಟು ಅನುದಾನ ತಂದು ಅಭಿವೃದ್ಧಿ ಪಡಿಸಿದ ಮತ್ತು ಅಭಿವೃದ್ಧಿ ಮಾಡುತ್ತಿರುವ ತೃಪ್ತಿ ನನಗಿದೆ. ಸುಂದರ ಸುರಪುರ ನಿರ್ಮಾಣಕ್ಕೆ ನಿರ್ಧರಿಸಿದ್ದೇನೆ ಎಂದು ತಮ್ಮ ಮಹಾದಾಸೆ ವ್ಯಕ್ತಪಡಿಸಿದರು.ಪುರಸಭೆ ಅಧ್ಯಕ್ಷ ಚಂದ್ರಶೇಖರ ಜಡಿಮರಳ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರತ್ನಮ್ಮ ಎಲಿಗಾರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಸಲೀಂ ವರ್ತಿ, ಎ.ಪಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ ದಂಡಿನ್ ವೇದಿಕೆಯಲ್ಲಿದ್ದರು.ಪುರಸಭೆ ಸದಸ್ಯರಾದ ವೇಣುಮಾಧವನಾಯಕ್, ತಿಪ್ಪಣ್ಣ ಬೋವಿ, ಅಮರೇಶನಾಯಕ್ ಜೇವರ್ಗಿ, ರಾಮಕೃಷ್ಣ ಬಿಚಗತ್ತಕೇರಿ, ನರಸಿಂಹಕಾಂತ ಪಂಚಮಗಿರಿ, ಲಿಯಾಕತ್ ಕಟಪಟ್, ಸಿದ್ರಾಮ ಪಾಟೀಲ, ಮಹಾದೇವಮ್ಮ ದೀವಳಗುಡ್ಡ, ಅಬ್ದುಲ ಅಲೀಂ ಗೋಗಿ, ಅಶೋಕ ಸಜ್ಜನ್, ಮುಖಂಡರಾದ ರಾಜಾ ಪಾಮನಾಯಕ್, ಮಾನಪ್ಪ ಕರಡಕಲ್, ಗುತ್ತಿಗೆದಾರ ಮಹ್ಮದ್ ಖಮರುದ್ದೀನ್ ಪಟೇಲ್, ಪಿ.ಡಬ್ಲೂ.ಡಿ. ಎ.ಇ.ಇ. ಎಲ್. ಸುಭಾಷ್, ಪುರಸಭೆ ಮುಖ್ಯಾಧಿಕಾರಿ ಶಿವುಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.