ರಾಮನಗರ: `ಮಗುವಿನ ಲಾಲನೆ, ಪಾಲನೆ, ರಕ್ಷಣೆ ಹಾಗೂ ಸರ್ವಾಂಗೀಣ ಪ್ರಗತಿಯ ದೃಷ್ಟಿಯಿಂದ ಅದು ಹೆತ್ತ ತಾಯಿಯ ಜತೆ ಇದ್ದರೆ ಸೂಕ್ತ' ಎಂದು ರಾಮನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಆದೇಶ ನೀಡುವ ಮೂಲಕ ಏಳು ವರ್ಷದ ಬಾಲಕನನ್ನು ಹೆತ್ತ ತಾಯಿಯ ತೆಕ್ಕೆಗೆ ಒಪ್ಪಿಸಿದೆ.

ಕರುಳ ಕುಡಿಯನ್ನು ಮರಳಿ ಪಡೆಯಲು ತಿಂಗಳಿಂದ ಹರಸಾಹಸ ಪಡುತ್ತಿದ್ದ ಸುಮಾ ಅವರಿಗೆ ತನ್ನ ಮಗು ದೊರೆತ ಸಂತಸ ಆವರಿಸಿದ್ದರೆ, ಇನ್ನೊಂದೆಡೆ ತಾಯಿಯ ಪೋಷಣೆ ಇಲ್ಲದ ಸಂದರ್ಭದಲ್ಲಿ ಮಗುವನ್ನು ಪಾಲನೆ ಮಾಡಿ ಸಲಹಿದ್ದ ಸಾಕು ತಾಯಿ ಕೆಂಪಾಜಮ್ಮ (ಮಗುವಿನ ಅತ್ತೆ) ಮತ್ತು ಕೆಂಪಮ್ಮ (ಅಜ್ಜಿ) ಅವರಲ್ಲಿ ದುಃಖ ಆವರಿಸಿದೆ.

ಮಗುವಿಗಾಗಿ ಸುಮಾ, ಕೆಂಪಾಜಮ್ಮ ಹಾಗೂ ಕೆಂಪಮ್ಮ ಅವರು ನಡೆಸುತ್ತಿದ್ದ ಹೋರಾಟದ ಪ್ರಕರಣ ಬುಧವಾರ ರಾಮನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯುಸಿ) ಮುಂದೆ ವಿಚಾರಣೆ ನಡೆಯಿತು. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿಚಾರಣೆ ನಡೆಸಿದ ಸಿಡಬ್ಲ್ಯುಸಿ ಅಧ್ಯಕ್ಷ ಮತ್ತು ಸದಸ್ಯರು ಹೆತ್ತ ತಾಯಿಯ ಬಳಿ ಮಗು ಇರುವುದೇ ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದು ಆದೇಶಿಸಿದರು.

ಒಲ್ಲದ ಮನಸ್ಸಿನಿಂದ ಆದೇಶವನ್ನು ಒಪ್ಪಿದ ಮಗುವಿನ ಅಜ್ಜಿ ಕೆಂಪಮ್ಮ ಮತ್ತು ಅತ್ತೆ ಕೆಂಪಾಜಮ್ಮ (ಮಗುವಿನ ತಂದೆಯ ಅಕ್ಕ) ಅವರು ದುಃಖದಿಂದಲೇ ಮಗುವನ್ನು ಹಸ್ತಾಂತರಿಸಿದರು. ಮಗು ಸಿಕ್ಕ ಖುಷಿಯಲ್ಲಿದ್ದ ತಾಯಿ ಸುಮಾ ಬಾಲಕನನ್ನು ಬಿಗಿದಪ್ಪಿ ಸಂಭ್ರಮಿಸಿದರು. ಆದರೆ ಮಗುವಿನ ಕಂಗಳಲ್ಲಿ ಮಾತ್ರ ನೀರು ಸುರಿಯುತ್ತಿತ್ತು.

ಪ್ರಕರಣದ ವಿವರ: ಸಿಡಬ್ಲ್ಯುಸಿಯು ಬುಧವಾರ ಮಗುವನ್ನು ಕೌನ್ಸೆಲಿಂಗ್ ಮಾಡಿ, ಹೆತ್ತ ತಾಯಿ, ಸಾಕು ತಾಯಿ (ಅತ್ತೆ) ಹಾಗೂ ಅಜ್ಜಿಯನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿತು. ಇಷ್ಟು ದಿನ ಮಗುವನ್ನು ತನ್ನಿಂದ ದೂರ ಬಿಟ್ಟಿದ್ದಕ್ಕೆ ಕ್ಷಮೆ ಕೋರಿದ ಹೆತ್ತ ತಾಯಿ ಸುಮಾ, ಇನ್ನು ಮುಂದೆ ನಾನೇ ಮಗುವನ್ನು ಸಾಕುತ್ತೇನೆ. ಅದಕ್ಕೆಅನುವು ಮಾಡಿಕೊಡಿ ಎಂದು ಮನವಿ ಮಾಡಿದರು. ಆದರೆ ಸಾಕು ತಾಯಿ ಮತ್ತು ಅಜ್ಜಿ, `ಮಗುವಿನ ಮೇಲೆ ನಮಗೆ ಭಾವನಾತ್ಮಕ ಸಂಬಂಧ ಇದೆ. ಅದನ್ನು ಬೇರ್ಪಡಿಸಬೇಡಿ' ಎಂದು ಕೋರಿದರು. ಮಗು ಸಾಕು ತಾಯಿ ಬಳಿ ಇರಲು ಆಸಕ್ತಿ ತೋರಿತು.

ಈ ನಡುವೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹೆತ್ತ ತಾಯಿ ಸುಮಾ ಅವರ ಮನೆ ಪರಿಶೀಲನೆ (ಗೃಹ ತನಿಖೆ) ನಡೆಸಿ ಸಿಡಬ್ಲ್ಯುಸಿಗೆ ವರದಿ ಸಲ್ಲಿಸಿದರು. ಮಗುವನ್ನು ಸಾಕುವುದಕ್ಕೆ ಪೂರಕ ವಾತಾವರಣ ಮತ್ತು ಆರ್ಥಿಕ ಸದೃಢತೆ ಇದೆ ಎಂಬುದನ್ನು ವರದಿಯಲ್ಲಿ ತಿಳಿಸಲಾಗಿತ್ತು.
ಈ ಎಲ್ಲ ವಿಷಯವನ್ನು ಸಮಗ್ರವಾಗಿ ಪರಿಶೀಲಿಸಿದ ಸಿಡಬ್ಲ್ಯುಸಿ ಸದಸ್ಯರು ಮಗುವಿನ ಹಿತ ಹಾಗೂ ಕಾನೂನು ಪ್ರಕಾರ ಅದು ಹೆತ್ತ ತಾಯಿಯ ಬಳಿ ಇರುವುದೇ ಸರಿ ಎಂದು ಆದೇಶ ಹೊರಡಿಸಿತು. ಅಲ್ಲದೆ ಮಗುವಿನ ಲಾಲನೆ, ಪಾಲನೆ ಮತ್ತು ರಕ್ಷಣೆಯ ಜವಾಬ್ದಾರಿಯಲ್ಲಿ ಯಾವುದೇ ಲೋಪ ಉಂಟಾಗಬಾರದು ಎಂದು ಸಮಿತಿ ಹೆತ್ತ ತಾಯಿ ಸುಮಾ ಅವರಿಗೆ ನಿರ್ದೇಶನ ನೀಡಿತು. ಅಲ್ಲದೆ ಈ ಕುರಿತು ಸುಮಾ ಅವರಿಂದ ಮುಚ್ಚಳಿಕೆ ಪತ್ರವನ್ನೂ ಸಮಿತಿ ಬರೆಸಿಕೊಂಡಿತು. ಮಗುವಿನ ಪೋಷಣೆ ಮತ್ತು ರಕ್ಷಣೆ ಹೇಗೆ ಸಾಗಿದೆ ಎಂಬುದರ ಕುರಿತು ಕಾಲ ಕಾಲಕ್ಕೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಮಿತಿಯು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಾಧಾ ಅವರಿಗೆ ಸೂಚಿಸಿತು.

ಸಮಿತಿ ಅಧ್ಯಕ್ಷ ಸಿ.ವಿ.ಜಾರ್ಜ್, ಸದಸ್ಯರಾದ ಶಿವಲಿಂಗಯ್ಯ, ಜಯಪ್ರಕಾಶ್, ಕೃಷ್ಣಮೂರ್ತಿ ಹಾಗೂ ರತ್ನಮ್ಮ ಹಾಜರಿದ್ದು, ಪ್ರಕರಣದ ವಿಚಾರಣೆ ನಡೆಸಿ ಆದೇಶಿಸಿದರು.

ಪ್ರಕರಣದ ಹೆನ್ನೆಲೆ: ಕನಕಪುರ ತಾಲ್ಲೂಕಿನ ಕೆರೆಮೇಗಳ ದೊಡ್ಡಿ ಗ್ರಾಮದ ಶಿವಣ್ಣ ಅವರ ಪುತ್ರಿ ಸುಮಾ ಅವರಿಗೆ ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ನಂಜಾಪುರ ಗ್ರಾಮದ ಕಾಂತರಾಜು ಅವರ ಪುತ್ರ ಶಿವಕುಮಾರ್ (ಚಾಲಕ) ಜತೆ 2004ರ ಮೇ 9ರಂದು ವಿವಾಹವಾಗಿತ್ತು.

ಮದುವೆಯಾಗಿ 18 ತಿಂಗಳಾಗಿದ್ದಾಗ ಬೆಂಗಳೂರಿನಲ್ಲಿ ನಡೆದ `ಕಾಲ್ ಸೆಂಟರ್' ಉದ್ಯೋಗಿ ಪ್ರತಿಭಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಶಿವಕುಮಾರ್ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ ಪರಿಣಾಮ ಆತ ಜೈಲಿನಲ್ಲಿದ್ದಾನೆ. ಈ ಘಟನೆ ನಡೆಯುವ ವೇಳೆಗೆ ಸುಮಾ ಅವರು ಆರು ತಿಂಗಳ ಗರ್ಭಿಣಿಯಾಗಿದ್ದರು. ಅವರಿಗೆ 2006ರ ಮಾರ್ಚ್ 28ರಂದು ಗಂಡು ಮಗು ಜನಿಸಿದೆ. ಮಗುವನ್ನು ಆರಂಭದ ನಾಲ್ಕು ವರ್ಷ ಸಲಹಿದ್ದ ಸುಮಾ, ನಂತರ ಹೊಟ್ಟೆ ಪಾಡಿಗಾಗಿ ಕೆಲಸಕ್ಕೆ ಹೋಗಲು ಆರಂಭಿಸಿದರು. ಆಗ ಗಂಡನ ಅಕ್ಕ ಕೆಂಪಾಜಮ್ಮ ಮತ್ತು ಅವರ ಪತಿ ನಾಗೇಶ್ ಅವರೇ ಮಗುವನ್ನು ಸಾಕುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದರು. ಇದೀಗ ಸುಮಾ ಅವರು ತನ್ನ ಮಗುವನ್ನು ತಾನೇ ಪೋಷಿಸುವುದಾಗಿ ಹೇಳಿದಾಗ, ಸುಮಾ ಅವರ ಅತ್ತೆ ಕೆಂಪಮ್ಮ ಮತ್ತು ಅವರ ಮಗಳು ಕೆಂಪಾಜಮ್ಮ ಅವರು ಮಗುವನ್ನು ಕೊಡಲು ನಿರಾಕರಿಸಿದ್ದರು.

ಈ ಕುರಿತು ಸುಮಾ ಕನಕಪುರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದರು. ಆ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ದೂರುಗಳು ಬಂದಿದ್ದವು.

`ಸಂಧಾನ ರೀತಿಯಲ್ಲಿ ಸುಖಾಂತ್ಯ'
`ಇದೊಂದು ಅತ್ಯಂತ ವಿಶೇಷ ಪ್ರಕರಣವಾಗಿದೆ. ಮಗು, ಹೆತ್ತ ತಾಯಿ, ಸಾಕು ತಾಯಿ, ಅಜ್ಜಿ, ಸಾಕು ತಂದೆಯ ಭಾವನೆಗಳನ್ನು ಅರ್ಥ ಮಾಡಿಕೊಂಡು ಕಾನೂನಿನ ಪಾಲನೆ ಮಾಡಲಾಗಿದೆ. ಈ ಪ್ರಕರಣವನ್ನು ಸಂಧಾನದ ರೀತಿಯಲ್ಲಿ ಸುಖಾಂತ್ಯಗೊಳಿಸಲಾಗಿದೆ. ಸಾಕು ತಾಯಿ ಮತ್ತು ಅಜ್ಜಿ ಮಗುವನ್ನು ಹೆತ್ತ ತಾಯಿಗೆ ಹಸ್ತಾಂತರಿಸಿದ್ದಾರೆ' ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಶಿವಲಿಂಗಯ್ಯ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

`ಮಕ್ಕಳ ಸಂರಕ್ಷಣೆಗಾಗಿ ಇರುವ ಜೆಜೆ ಕಾಯ್ದೆಯ 36 (2)ರ ನಿಯಮದ ಪ್ರಕಾರ ಮಗು ಜೈವಿಕ (ಹೆತ್ತ) ತಾಯಿ ಬಳಿ ಇರಬೇಕು. ಅದನ್ನುಈ ಪ್ರಕರಣದಲ್ಲಿ ಪಾಲನೆ ಮಾಡಿ ಆದೇಶಿಸಲಾಗಿದೆ. ಅಲ್ಲದೆ ಎಲ್ಲರ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರೊಡನೆ ರಾಜೀ ಸಂಧಾನವನ್ನೂ ಮಾಡಲಾಗಿದೆ' ಎಂದು ಅವರು ಹೇಳಿದರು.

`ಮೊಮ್ಮಗನನ್ನು ಚೆನ್ನಾಗಿ ಸಾಕಲಿ'
`ಮಗುವನ್ನು ಕೊಡುವುದಕ್ಕೆ ಕಷ್ಟವಾಗುತ್ತಿದೆ. ನನ್ನ ವಂಶದ ಕುಡಿ ಅದು. ನನ್ನ ಹತ್ತಿರ ಇರಲಿ ಎಂದು ಆಸೆ ಪಟ್ಟೆ. ಆದರೆ ಅದಕ್ಕೆ ಸೊಸೆ ಒಪ್ಪಲಿಲ್ಲ. ಆಗ ಬೇಡವಾದ ಮಗು ಈಗ ಅವಳಿಗೆ ಬೇಕಾಗಿದೆ. ಚೆನ್ನಾಗಿ ಸಾಕಲಿ. ಆದರೆ ನನ್ನ ಮೊಮ್ಮಗನನ್ನು ತಬ್ಬಲಿ ಮಾಡಿದರೆ ನಾನು ಸುಮ್ಮನೆ ಇರುವುದಿಲ್ಲ' ಎಂದು ಮಗುವಿನ ಅಜ್ಜಿ ಕೆಂಪಮ್ಮ ಎಚ್ಚರಿಸುತ್ತಾರೆ.

`ವಿದ್ಯಾವಂತನನ್ನಾಗಿ ಮಾಡುವೆ'
`ನನ್ನ ಮಗು ಸಿಕ್ಕಿದ್ದರಿಂದ ಹೆಚ್ಚು ಸಂತಸವಾಗಿದೆ. ಮಗುವನ್ನು ಚೆನ್ನಾಗಿ ಸಾಕಿ, ವಿದ್ಯಾಭ್ಯಾಸ ಮಾಡಿಸುತ್ತೇನೆ. ನನ್ನ ಮಗು ನನಗೆ ಸಿಗುವಂತೆ ಮಾಡುವಲ್ಲಿ ಪ್ರಯತ್ನಿಸಿದ ಎಲ್ಲರಿಗೂ ಕೃತಜ್ಞತೆಗಳು' ಎಂದು ಮಗುವಿನ ತಾಯಿ ಸುಮಾ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.