ಗುರುವಾರ , ಫೆಬ್ರವರಿ 25, 2021
29 °C
ಮೆರವಣಿಗೆ, ವೇದಿಕೆಗಳಲ್ಲಿ ಜನಪದ ಕಲಾಪ್ರದರ್ಶನ: ವಿವಿಧೆಡೆಯಿಂದ ಕಲಾವಿದರು ಭಾಗಿ

ಸುಗ್ಗಿ–ಹುಗ್ಗಿಯಲ್ಲಿ ಮಿಂದೆದ್ದ ನಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಗ್ಗಿ–ಹುಗ್ಗಿಯಲ್ಲಿ ಮಿಂದೆದ್ದ ನಗರ

ಬಳ್ಳಾರಿ: ನಗರವು ಭಾನುವಾರ ಸುಗ್ಗಿ–ಹುಗ್ಗಿ ಸಂಭ್ರಮದಲ್ಲಿ ಮಿಂದೆದ್ದಿತು. ಮೆರವಣಿಗೆ ಮತ್ತು ವೇದಿಕೆಯಲ್ಲಿ ಜನಪದ ಕಲೆಗಳ ಪ್ರದರ್ಶನವು ವಿಜೃಂಭಿಸಿತು. ನೂರಾರು ಕಲಾವಿದರು ತಮ್ಮ ನೆಲದ ಕಲೆಯನ್ನು ಉತ್ಸಾಹ, ಉನ್ಮಾದದಿಂದ ಪ್ರದರ್ಶಿಸಿದರು.ಕನ್ನಡ ಸಂಸ್ಕೃತಿ ಇಲಾಖೆಯು ಏರ್ಪಡಿಸಿದ್ದ ನಾಲ್ಕನೇ ಸುಗ್ಗಿ–ಹುಗ್ಗಿ ಜಾನಪದ ಸಂಭ್ರಮ ಕಾರ್ಯಕ್ರಮವು ಸಂಜೆಯಿಂದ ಮಧ್ಯರಾತ್ರಿಯವರೆಗೂ ಕಲಾರಸಿಕರನ್ನು ಹಿಡಿದಿಟ್ಟುಕೊಂಡಿತ್ತು.ನಗರದ ಮುನ್ಸಿಪಲ್‌ ಕಾಲೇಜು ಮೈದಾನದ ಆವರಣದಲ್ಲಿ ಸಂಜೆ ಆರಂಭವಾದ ಮೆರವಣಿಗೆಯು ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಮುಕ್ತಾಯ ಗೊಳ್ಳುವವ ರೆಗೂ ನೂರಾರು ಸಾರ್ವಜನಿಕರು ಉದ್ದಕ್ಕೂ ನಡೆದು ಬಂದರು. ವೇದಿಕೆಯಲ್ಲಿ ಕಾರ್ಯಕ್ರಮ ಶುರುವಾಗಿ ಮುಗಿಯುವವರೆಗೂ ಬಹುತೇಕರು ತಮ್ಮ ಕುರ್ಚಿ ಬಿಟ್ಟು ಕದಲಿಲ್ಲ. ಕೈ ಬೀಸಿ ಕರೆದ ಕಲೆಯು ಅವರನ್ನು ತನ್ಮಯಗೊಳಿಸತ್ತು.ಮೆರವಣಿಗೆಯಲ್ಲಿ ಕಹಳೆ ವಾದನ, ನಂದಿಧ್ವಜ, ಡೊಳ್ಳು ಕುಣಿತ, ವೀರಗಾಸೆ, ಹಗಲುವೇಷ, ಕುದುರೆ ಕುಣಿತ, ಗೊಂದಲಿಗರ ಮೇಳ, ಗೊರವರ ಕುಣಿತ, ಮರಗಾಲು ಕುಣಿತ, ಹುಲಿ ವೇಷ, ಹಲಗೆ ವಾದನ ಗಮನ ಸೆಳೆ ಯಿತು.  ತುಮಕೂರು ಜಿಲ್ಲೆಯ ಕಲಾವಿ ದರು ಸೋಮನ ಕುಣಿತ, ದಕ್ಷಿಣ ಕನ್ನಡ ಜಿಲ್ಲೆಯ ಕಲಾವಿದರ ಕಂಗೀಲು ನೃತ್ಯ ವಿಶೇಷವಾಗಿತ್ತು.ವೇದಿಕೆಯಲ್ಲಿ: ವೇದಿಕೆ ಕಾರ್ಯಕ್ರಮ ದಲ್ಲಿ ಜನಪದ ಜಾದೂ, ಮಹಿಳಾ ಯಕ್ಷಗಾನ ಮತ್ತು ಬಯಲಾಟ ಈ ಬಾರಿಯ ವಿಶೇಷವಾಗಿತ್ತು. ಹಂದ್ಯಾಳ್‌ ಪರಶುರಾಂ ಅವರ ತತ್ವಪದ ಗಾಯನ, ಮರಿಯಮ್ಮನಹಳ್ಳಿಯ ಮಂಜಮ್ಮ ಜೋಗತಿ ತಂಡದವರ ಜೋಗತಿ ನೃತ್ಯ, ಡಿ.ಹೊನ್ನಮ್ಮ ತಂಡದ ವರ ಸಂಪ್ರದಾಯದ ಹಾಡುಗಳು ಆರಂಭದಲ್ಲೇ ಜನರ ಮನಸೂರೆ ಗೊಂಡವು. ನಂತರ ಜನಪದ ನೃತ್ಯ, ಸುಡುಗಾಡು ಸಿದ್ದರ ಕೈಚಳಕ,  ಬುರ್ರಕತಾ ಗಾಯನವೂ ನಡೆಯಿತು.ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ಉದ್ಘಾ ಟಿಸಿದರು. ಉಪವಿಭಾಗಾಧಿಕಾರಿ ಕೆ. ಅನ್ನ ಪೂರ್ಣ, ಕಲಾವಿದರಾದ ಸುಜಾತಮ್ಮ, ರಾಮವ್ವ ಜೋಗತಿ, ಎಸ್‌.ಕೆ.ಆರ್‌. ಜಿಲಾನಿ ಬಾಷಾ, ಕಪ್ಪಗಲ್ ಪದ್ಮಮ್ಮ, ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಉಪಸ್ಥಿತರಿದ್ದರು.ಉಪನ್ಯಾಸಕ್ಕೆ ನಿರುತ್ಸಾಹ: ವಿಶೇಷ ಉಪ ನ್ಯಾಸ ನೀಡಿದ ಕೆ.ಬಿ.ಸಿದ್ದಲಿಂಗಪ್ಪ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಉತ್ಸಾಹ ತೋರದ ಸಭಿಕರು, ಬೇಗ ಮಾತು ಮುಗಿಸುವಂತೆ ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.