ನವದೆಹಲಿ (ಪಿಟಿಐ): ನಾಟಕೀಯ ಬೆಳವಣಿಗೆಗಳ ಮಧ್ಯೆ ಸಹಾರಾ ಸಮೂಹದ ಮುಖ್ಯಸ್ಥ ಸುಬ್ರತೋ ರಾಯ್ ಅವರನ್ನು ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದು, ಇದೇ ವೇಳೆಗೆ ರಾಯ್ ಅವರು ಸ್ವ ಇಚ್ಛೆಯಿಂದಲೇ ಲಖನೌ ಪೊಲೀಸರ ಮುಂದೆ ಹಾಜರಾಗಿದ್ದಾರೆ ಮತ್ತು ಅಧಿಕಾರಿಗಳೊಂದಿಗೆ ವಿಚಾರಣೆಯಲ್ಲಿ ಸಹಕರಿಸುತ್ತಿದ್ದಾರೆ ಎಂದು ಅವರ ಪುತ್ರ ಸೀಮಾಂತೋ ರಾಯ್ ಪ್ರತಿಪಾದಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಬೆಳಗ್ಗೆ ಕರೆಯಾಗಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಸೀಮಾಂತೋ ರಾಯ್ ಅವರು 'ಸಹಾರಾ ಮುಖ್ಯಸ್ಥರು ತಮ್ಮ ಅಸ್ವಸ್ಥ ತಾಯಿಯವರನ್ನು ನೋಡಲು ತೆರಳಿದ್ದರು' ಎಂದು ಹೇಳಿದರು. ಆಕೆಯ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ ಎಂದು ಅವರು ನುಡಿದರು.

ಸುಬ್ರತೋ ರಾಯ್ ಅವರು ಸುಪ್ರೀಂಕೋರ್ಟ್ ನಿಂದ ಸಂಕ್ಷಿಪ್ತ ಪರಿಹಾರ ಹಾರೈಸಿದ್ದರು. ಆದರೆ ಈದಿನ ಬೆಳಗ್ಗೆ ಅವರು ತಮ್ಮ ತಾಯಿ ಇನ್ನೂ ಅಸ್ವಸ್ಥರಾಗಿದ್ದರೂ ಪೊಲೀಸರ ಮುಂದೆ ಸ್ವ ಇಚ್ಛೆಯಿಂದಲೇ ಹಾಜರಾಗಲು ನಿರ್ಧರಿಸಿದರು ಎಂದು ಸೀಮಾಂತೋ ವಿವರಿಸಿದರು.

'ತಲೆ ತಪ್ಪಿಸಿಕೊಂಡಿರುವುದಾಗಿ' ಬಂದ ವರದಿಗಳಿಂದ ನೊಂದ ಅವರು ಈ ತೀರ್ಮಾನ ಕೈಗೊಂಡರು ಎಂದು ಸೀಮಾಂತೋ ಹೇಳಿದರು.

ಇದಕ್ಕೂ ಮುನ್ನ ಬೆಳಗ್ಗೆ ಸುಬ್ರತೋ ರಾಯ್ ಅವರು ಸ್ವತಃ ಪತ್ರಿಕಾ ಗೋಷ್ಠಿಯಲ್ಲಿ ಹಾಜರಾಗಲಿದ್ದಾರೆ ಎಂಬ ವದಂತಿಗಳಿದ್ದವು. ಸ್ಥಳಕ್ಕೆ ಪೊಲೀಸ್ ಆಗಮನದೊಂದಿಗೆ ಈ ವದಂತಿಗಳಿಗೆ ಹೆಚ್ಚಿನ ರೆಕ್ಕೆ ಪುಕ್ಕ ಸೇರಿತು.

ಪತ್ರಿಕಾಗೋಷ್ಠಿ ಆರಂಭವಾಗುವುದಕ್ಕೆ ಕೆಲವೇ ನಿಮಿಷಗಳ ಮುನ್ನ ಸಹಾರಾ ಸಮೂಹದ ವಕೀಲರು, ಸುಬ್ರತೋ ರಾಯ್ ಅವರನ್ನು ಲಖನೌ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಸುಪ್ರಿಂಕೋರ್ಟ್ ಗೆ ತಿಳಿಸಿದರು. ರಾಯ್ ಬಂಧನಕ್ಕಾಗಿ ಹೊರಡಿಸಲಾಗಿದ್ದ ಜಾಮೀನುರಹಿತ ವಾರೆಂಟ್ ಹಿಂದಕ್ಕೆ ಪಡೆಯುವಂತೆ ಕೋರಿದ್ದ ಅರ್ಜಿಯನ್ನೂ ಕೋರ್ಟ್ ಇದೇ ವೇಳೆಗೆ ತಿರಸ್ಕರಿಸಿತು.

ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಕೆಲವು ತಪ್ಪಭಿಪ್ರಾಯಗಳನ್ನು ನಿವಾರಿಸಲು ತಾವು ಬಯಸುವುದಾಗಿ ಸೀಮಾಂತೋ ರಾಯ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

'ನೌಕರರು, ಷೇರುದಾರರು ಮತ್ತು ಸಾರ್ವಜನಿಕರು ಸೇರಿದಂತೆ ಎಲ್ಲರಿಗೂ ಅನುಕೂಲವಾಗುವಂತಹ ಕೆಲವೊಂದು ವಾಸ್ತವಾಂಶಗಳನ್ನು ನಾನು ಮುಂದಿಡುತ್ತೇನೆ' ಎಂದು ಸೀಮಾಂತೋ ನುಡಿದರು.

'ಸಹಾರಾ ಮುಖ್ಯಸ್ಥರು ಫೆಬ್ರುವರಿ 24ರಂದು ಸುಪ್ರೀಂಕೋರ್ಟ್ ಮುಂದೆ ಹಾಜರಾಗುವ ಸಲುವಾಗಿಯೇ ದೆಹಲಿಗೆ ಬಂದಿದ್ದರು. ಅದರೆ ತಾಯಿ ಅಸ್ವಸ್ಥರಾಗಿದ್ದುದರಿಂದ ಅವರು ಲಖನೌಗೆ ವಾಪಸಾಗಬೇಕಾಯಿತು. ವೈಯಕ್ತಿಕ ಹಾಜರಿಗೆ ಕೇವಲ ಒಂದು ದಿನದ ವಿನಾಯ್ತಿ ನೀಡುವಂತೆ ಸುಪ್ರೀಂಕೋರ್ಟ್ ನ್ನು ಅವರು ಕೋರಿದ್ದರು. ಆದರೆ ಈ ಸಂಕ್ಷಿಪ್ತ ಪರಿಹಾರ ಅವರಿಗೆ ಲಭಿಸಲಿಲ್ಲ' ಎಂದು ಸೀಮಾಂತೋ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.