ಸುಬ್ರಹ್ಮಣ್ಯ: ಸೋಮವಾರ ಮುಂಜಾನೆಯಿಂದ ಘಟ್ಟ ಪ್ರದೇಶದಲ್ಲಿ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಧಾರಾಕಾರ ಮಳೆಯಾಗಿದ್ದು, ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಪರಿಣಾಮವಾಗಿ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಪಟ್ಟಣದ ಅಂಗಡಿಗಳ ಒಳಗೆ ನೀರು ನುಗ್ಗಿದೆ.

ಬೆಳಗ್ಗಿನಿಂದಲೇ ಕುಮಾರಧಾರಾ ಸೇತುವೆಗೆ ಸಮಪ್ರಮಾಣವಾಗಿ ನೀರು ಹರಿಯಿತು. ಸಂಜೆ ವೇಳೆಗೆ ಸೇತುವೆ ಮೇಲೆ ನೀರು ಹರಿಯತೊಡಗಿತು. ನೀರಿನ ಪ್ರಮಾಣವು ಹೆಚ್ಚಾದಾಗ ಸೇತುವೆಯ ಇಕ್ಕೆಲಗಳಲ್ಲಿ ವಾಹನಗಳು ಸಾಲುಗಟ್ಟಿನಿಂತಿದ್ದವು. ಸೇತುವೆ ಮುಳುಗಡೆಯಾದುದರಿಂದ ಸುಬ್ರಹ್ಮಣ್ಯ- ಧರ್ಮಸ್ಥಳ- ಉಪ್ಪಿನಂಗಡಿ- ಮಂಗಳೂರು ಪ್ರಯಾಣಿಕರಿಗೆ ತೊಂದರೆಯಾಯಿತು.

ಪುತ್ತೂರು- ಸುಬ್ರಹ್ಮಣ್ಯ, ಸುಳ್ಯ- ಸುಬ್ರಹ್ಮಣ್ಯ ರಸ್ತೆಯಲ್ಲಿನ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ. ಅದೇ ರೀತಿ ನಿರ್ಮಾಣ ಹಂತದಲ್ಲಿರುವ ಕಿಂಡಿ ಅಣೆಕಟ್ಟು ಮುಳುಗಡೆಯಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ಇದೇ ಸಮಯದಲ್ಲಿ ಸುಮಾರು 14 ಬಾರಿ ಮುಳುಗಿದ ಸೇತುವೆ ಈ ಬಾರಿ ಪ್ರಥಮವಾಗಿ ಮುಳುಗಡೆಗೊಂಡಿದೆ. ಅಲ್ಲದೆ ಇಲ್ಲಿನ ದರ್ಪಣ ತೀರ್ಥ ನದಿಯೂ ಕೂಡ ತುಂಬಿ ಹರಿಯುತ್ತಿದೆ.

ಸುಬ್ರಹ್ಮಣ್ಯದಲ್ಲಿ ಮಾತ್ರವಲ್ಲದೆ ಇಲ್ಲಿನ ಆಸುಪಾಸಿನಲ್ಲೂ ಮಳೆ ಇಡೀ ದಿನ ಎಡೆಬಿಡದೆ ಸುರಿಯಿತು. ಇದರಿಂದಾಗಿ ಹರಿಹರದಿಂದ ಕೊಲ್ಲಮೊಗ್ರಕ್ಕೆ ಹೋಗುವ ರಸ್ತೆಯಲ್ಲಿ ಬರುವ ಚೊಳುಗುಳು ಚೋಡಿ ಸೇತುವೆಯು ಮುಳುಗಡೆಯಾಗುವ ಹಂತದಲ್ಲಿದೆ. ಭಾರಿ ಮಳೆಯಿಂದ ಹರಿಹರದಲ್ಲಿ ಹೊಳೆಯು ರಸ್ತೆಗೆ ಸಮಾನವಾಗಿ ಹರಿಯುತ್ತಿದ್ದು, ಮಳೆಯ ಪ್ರಮಾಣವು ಇನ್ನೂ ಹೆಚ್ಚಿದಲ್ಲಿ ರಸ್ತೆಯು ಮುಳುಗಡೆಯಾಗುವ ಸಾಧ್ಯತೆ ಇದೆ.

ಉಪ್ಪಿನಂಗಡಿ- ಸುಬ್ರಹ್ಮಣ್ಯ ರಸ್ತೆಯ ನೆಟ್ಟಣದಲ್ಲಿನ ಹೊಳೆಯು ತುಂಬಿ ಹರಿಯುತ್ತಿದ್ದು, ಈ ನದಿಗೆ ಅಡ್ಡಲಾಗಿರುವ ಸೇತುವೆಯು ಮುಳುಗಡೆಯ ಭೀತಿಯನ್ನು ಎದುರಿಸುತ್ತಿದೆ. ಕೈಕಂಬ ಹೊಳೆಯ ತಗ್ಗಾದ ಸೇತುವೆಯು ಮುಳುಗಡೆಗೊಳ್ಳುವ ಸಾಧ್ಯತೆಯೂ ಅಧಿಕವಾಗಿದೆ. ಸಮೀಪದ ಪಂಜ, ಕರಿಕ್ಕಳ, ನಿಂತಿಕಲ್, ಮುರುಳ್ಯ, ಬೆಳ್ಳಾರೆ, ಹರಿಹರ, ಗುತ್ತಿಗಾರು, ಎಲಿಮಲೆ, ಬಾಳುಗೋಡು, ಕಲ್ಮಕಾರು ಕೊಲ್ಲಮೊಗ್ರ ಮೊದಲಾದೆಡೆಯೂ ಭಾರಿ ಮಳೆಯಾಗಿದೆ. ಕೆಲವೆಡೆ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಯ ದುರವಸ್ಥೆಯಿಂದ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಯಿತು.

ಮುಂಜಾಗ್ರತಾ ಕ್ರಮವಾಗಿ ಸುಬ್ರಹ್ಮಣ್ಯ ಆಸುಪಾಸಿನ ಶಾಲೆಗಳಿಗೆ ಮಧ್ಯಾಹ್ನದ ನಂತರ ರಜೆ ಸಾರಲಾಗಿತ್ತು. ಕೆಲವು ಕಡೆಗಳಲ್ಲಿ ಕೃಷಿ ತೋಟಗಳಿಗೆ ನೀರು ನುಗ್ಗಿದೆ.

ಬೈಂದೂರು: ನದಿಯಲ್ಲಿ ನೆರೆ
ಬೈಂದೂರು: ಮುಂಗಾರು ಆರಂಭವಾದ ಬಳಿಕ ಈ ಭಾನುವಾರ ಸಂಜೆಯ ತನಕವೂ ಮೀನಾ ಮೇಷ ಎಣಿಸುತ್ತಿದ್ದ ಮಳೆ ಆ ಬಳಿಕ ಒಮ್ಮೆಲೆ ತೀವ್ರಗೊಂಡಿದೆ. ರಾತ್ರಿ ಬಿರುಸಾದ ಮಳೆ ಬಿದ್ದಿದೆ. ಸೋಮವಾರ ಹಗಲಿಡೀ ಧಾರಾಕಾರ ಮಳೆ ಸುರಿದಿದ್ದು, ಸಂಜೆಯಾಗುತ್ತಿದ್ದಂತೆ ಇನ್ನಷ್ಟು ತೀವ್ರತೆ ಪಡೆದಿದೆ.

ಆಕಾಶ ದಟ್ಟ ಮೋಡದಿಂದ ಆವೃತ್ತವಾಗಿದ್ದು, ಆಗಾಗ ಗಾಳಿ ಬೀಸುತ್ತಿರ್ದುವುದರಿಂದ ಸಮುದ್ರ ಬಿರುಸಾಗಿದೆ. ಉಪ್ಪುಂದದ ಮಡಿಕಲ್ಲು, ತಾರಾಪತಿಯಲ್ಲಿ ಸಮುದ್ರದ ಅಲೆಗಳು ಅಲ್ಲಿ ಸಮುದ್ರ ಕೊರೆತ ನಿಯಂತ್ರಿಸಲು ನಿರ್ಮಿಸಿದ್ದ ತಡೆಗೊಡೆಗೆ ಅಪ್ಪಳಿಸುತ್ತಿದ್ದು, ಗೋಡೆಯ ಕಲ್ಲುಗಳು ಒಂದೊಂದಾಗಿ ಸಮುದ್ರದತ್ತ ಜಾರುತ್ತಿವೆ. ಸಾಂಪ್ರದಾಯಿಕ ಮೀನುಗಾರಿಕೆಗೆ ಸಮುದ್ರದ ಪ್ರಕ್ಷುಬ್ಧತೆ ತಡೆಯೊಡ್ಡಿದೆ. ಕೆಲವೆಡೆ ಮರಗಳು ಉರುಳಿ ಬಿದ್ದಿವೆ. ಎಲ್ಲಿಯೂ ಆಸ್ತಿಪಾಸ್ತಿ ನಷ್ಟವಾದ ವರದಿಯಾಗಿಲ್ಲ.

ಉಕ್ಕಿದ ನದಿಗಳು: ಭಾನುವಾರ ರಾತ್ರಿ ಇಲ್ಲಿ ಮತ್ತು ಘಟ್ಟ ಪ್ರದೇಶದಲ್ಲಿ ಸುರಿದ ಭಾರಿ ಮಳೆಯ ಕಾರಣ ಇಲ್ಲಿನ ಪ್ರಮುಖ ನದಿಗಳಾದ ಸೌಪರ್ಣಿಕಾ, ಸುಮನಾ, ಎಡಮಾವಿನ ಹೊಳೆ ನದಿಗಳಲ್ಲಿ ಪ್ರವಾಹ ಬಂದಿದೆ. ನೆರೆ ನೀರು ನದಿ ದಂಡೆಯ ಮೇಲೇರಿ ತಗ್ಗು ಪ್ರದೇಶಗಳಿಗೆ ನುಗ್ಗಿದೆ. ಬಡಾಕೆರೆ, ನಾವುಂದ, ಮರವಂತೆ, ನಾಡ, ಹಡವು, ಸೇನಾಪುರ ಗ್ರಾಮಗಳಲ್ಲಿ ಬತ್ತದ ಗದ್ದೆಗಳು ಜಲಾವೃತವಾಗಿದ್ದು, ನದಿತೀರ ಪ್ರದೇಶವನ್ನು ಊರಿನ ಪ್ರಧಾನ ಭಾಗದೊಂದಿಗೆ ಸಂಪರ್ಕಿಸುವ ರಸ್ತೆಗಳು ಮುಳುಗಿವೆ.

ರಸ್ತೆ ಜಲಾವೃತ: ಮಳೆಯ ತೀವ್ರತೆಯಿಂದ ಪಟ್ಟಣ ಪ್ರದೇಶಗಳಾದ ಬೈಂದೂರು, ಉಪ್ಪುಂದದ ಅಂಬಾಗಿಲು ಮತ್ತು ಗಂಗೊಳ್ಳಿಯ ಪ್ರಧಾನ ರಸ್ತೆಗಳಲ್ಲಿ ಇಡೀ ದಿನವೆಂಬಂತೆ ಚರಂಡಿಗಳ ನೀರು ಉಕ್ಕಿ ಹರಿದು ರಸ್ತೆಗಳನ್ನು ಮುಳುಗಿಸಿದವು. ಇದರಿಂದ ವಾಹನ ಚಾಲಕರು, ಪಾದಚಾರಿಗಳು ತೊಂದರೆಗೊಳಗಾದರು. ಗಂಗೊಳ್ಳಿಯ ತಗ್ಗು ಪ್ರದೇಶದ ಕೆಲವು ಮನೆಗಳಿಗೆ ನೀರು ನುಗ್ಗಿತು.

ಆಗುಂಬೆ ಘಾಟಿ:3ಗಂಟೆ ಸಂಚಾರ ಬಂದ್
ಹೆಬ್ರಿ : ಆಗುಂಬೆ ಘಾಟಿಯ ಕೆಳಗಿನ ಎರಡನೆ ತಿರುವಿನಲ್ಲಿ ಬೃಹತ್ ಗಾತ್ರದ ಮರವೊಂದು ಸೋಮವಾರ ಮಧ್ಯಾಹ್ನ ಉರುಳಿ ಬಿದ್ದಿದ್ದು, ಮೂರು ಗಂಟೆಗಳ ರಸ್ತೆ ಸಂಪೂರ್ಣ ಬಂದ್ ಆಗಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಉಡುಪಿ ಮತ್ತು ಶಿವಮೊಗ್ಗ ಕಡೆಗೆ ತೆರಳುವ ನೂರಾರು ವಾಹನಗಳು ಘಾಟಿಯಲ್ಲೇ ಉಳಿದವು.

ಹೆಬ್ರಿ ಪೊಲೀಸರು,ಅರಣ್ಯ ಇಲಾಖೆ ಮತ್ತು ಸ್ಥಳೀಯರ ನೆರವಿನಿಂದ ಮಧ್ಯಾಹ್ನ 1ಗಂಟೆ ಸುಮಾರಿಗೆ ಬಿದ್ದ ಮರವನ್ನು ಸಂಜೆ 4 ಗಂಟೆಗೆ ತೆರವುಗೊಳಿಸಲಾುತು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಭಾರಿ ಮಳೆ: ಹೆಬ್ರಿ ಪರಿಸರದ ಮುನಿಯಾಲು, ಅಜೆಕಾರು, ಮುದ್ರಾಡಿ, ಹೆಬ್ರಿ ನಾಡ್ಪಾಲು ಸೇರಿದಂತೆ ಸೋಮವಾರ ದಿನವಿಡೀ ಭಾರಿ ಮಳೆ ಬಿದ್ದಿದ್ದು, ಸೀತಾನದಿ ನದಿಯು ತುಂಬಿ ಹರಿಯುತ್ತಿದೆ. ಸೀತಾನದಿ ಅಂಗಡಿ ಬಳಿ ನೀರು ರಸ್ತೆಯಂಚಿಗೆ ಬಂದಿದೆ. ಹೆಬ್ರಿಯ ಹುತ್ತುರ್ಕೆಯಲ್ಲಿ ರಸ್ತೆಯಲ್ಲಿ ಭಾರಿ ನೀರು ಹರಿದು ಕೆಲಹೊತ್ತು ರಸ್ತೆ ಸಂಚಾರಕ್ಕೆ ತೊಂದರೆಯಾಯಿತು.

ಸೀತಾನದಿಯಲ್ಲಿ ನೀರು ಉಕ್ಕಿದ ಪರಿಣಾಮ ಬಂಡೀಮಠ ಮುಳುಗಡೆಯಾಗುವ ಹಂತಕ್ಕೆ ಬಂದಿತ್ತು. ಅಲ್ಲದೇ ಉಡುಪಿ-ಶಿವಮೊಗ್ಗ ರಾಜ್ಯ ಹೆದ್ದಾರಿ ಬಂದ್ ಆಗಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.