ಮಂಗಳವಾರ, ಮೇ 24, 2022
30 °C

ಸೆಂಟ್ ಜೋಸೆಫ್‌ನ ಕನ್ನಡ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂಟೆ ಬಿಲ್ಲೆ ಆಡೋಕೆ ನೀವು ತಯಾರಾ? ಎಲ್ಲಾ ಗೋಲಿ ಗೆಲ್ಲೋ ತಾಕತ್ತು ನಿಮ್ಗೆ ಇದ್ಯಾ? ಬುಗುರೀನ ಕೈಮೇಲೆ ಆಡಿಸ್ತಿರಾ? ಚೌಕಾಬಾರದ ಸರದಾರನ ಪಟ್ಟ ತೊಗೊಳಕೆ ನಿಮಗಾಗುತ್ತಾ? ಗಾಳಿಪಟ ಎಷ್ಟು ಎತ್ತರಕ್ಕೆ ಹಾರಿಸ್ತೀರಾ? ಹಾಗಿದ್ದರೆ ಶನಿವಾರ ಸೇಂಟ್ ಜೋಸೆಫ್ಸ್ ಕಾಲೇಜು ಅಂಗಳಕ್ಕೆ ಬನ್ನಿ.ಸೇಂಟ್ ಜೋಸೆಫ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ಸಂಘ ಕಣ್ಮರೆಯಾಗುತ್ತಿರುವ ಹಳ್ಳಿಯ ಆಟಗಳನ್ನು ನೆನಪಿಸುವ ಮತ್ತು ಗ್ರಾಮೀಣ ಸಂಸ್ಕೃತಿಯನ್ನು ನಗರದ ಯುವಕ, ಯುವತಿಯರಿಗೆ ಪರಿಚಯಿಸುವ ಉದ್ದೇಶದಿಂದ ಶನಿವಾರ ವಿಶಿಷ್ಟವಾದ ‘ಕನಸು’ ಕನ್ನಡ ಹಬ್ಬ ಏರ್ಪಡಿಸಿದೆ.ಈ ಹಬ್ಬದಲ್ಲಿ ಡೊಳ್ಳು ಕುಣಿತ, ಕಂಸಾಳೆ ಮತ್ತು ಗೊಂಬೆಯಾಟ ಪ್ರದರ್ಶನ ಇರುತ್ತದೆ. ಹಳ್ಳಿಯ ಜೀವನ ಮತ್ತು ಕೃಷಿಯನ್ನು ಜವಾಬ್ದಾರಿಯುತವಾಗಿ ಅವಲೋಕಿಸುವ ಸಲುವಾಗಿ ಜನಪದ ಪ್ರದರ್ಶನ ಮತ್ತು ಆ ಕುರಿತು ವಿಷಯ ಮಂಡನೆ ನಡೆಯಲಿದೆ. ಕುಂಟೆಬಿಲ್ಲೆ, ಬುಗುರಿಯಾಟ, ಗೋಲಿಯಾಟ, ಚೌಕಾಬಾರ ಮತ್ತು ಗಾಳಿಪಟ ಹಾರಿಸುವ ಸ್ಪರ್ಧೆ ಇರುತ್ತದೆ.ಇದರ ಹೊರತಾಗಿ ಕಾಲೇಜು ತಂಡಗಳು ರಂಗೋಲಿ, ರಸಪ್ರಶ್ನೆ, ಡಂಬ್ ಷರಾಡ್ಸ್, ಅಂತ್ಯಾಕ್ಷರಿ, ಬೀದಿ ನಾಟಕ, ಮೆಹಂದಿ, ಗ್ಯಾಸ್ ಬಳಸದೇ ಅಡುಗೆ ಮಾಡುವ ಸ್ಪರ್ಧೆ, ಕೊಲಾಜ್, ಜನಪದ ಗೀತೆ, ವೇಷಭೂಷಣ, ಉಗುರು ಬಣ್ಣ ವಿನ್ಯಾಸ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಆಶುಭಾಷಣ, ಏಕಪಾತ್ರಾಭಿನಯ, ಕಾವ್ಯ ವಾಚನ, ನೃತ್ಯ, ವ್ಯಂಗ್ಯಚಿತ್ರ, ಪ್ರಬಂಧ, ಕ್ರಿಯಾತ್ಮಕ ಬರಹ, ಭಾವಗೀತೆ, ಚಿತ್ರಗೀತೆ ಇತ್ಯಾದಿ ಏಕವ್ಯಕ್ತಿ ಸ್ಪರ್ಧೆಗಳು ಇರುತ್ತವೆ.  ಕಾಲೇಜು ವತಿಯಿಂದ ಅಥವಾ ವೈಯಕ್ತಿಕವಾಗಿ ಭಾಗವಹಿಸುವ ತಂಡಗಳು, ಸ್ಪರ್ಧಿಗಳು 200 ರೂಪಾಯಿ ನೋಂದಣಿ ಶುಲ್ಕ ಕಟ್ಟಬೇಕು. ನಗರದ 50 ಕಾಲೇಜುಗಳ ಸುಮಾರು 8 ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಎಂಬುದು ಸಂಘಟಕರ ನಿರೀಕ್ಷೆ.ವಿವರಗಳಿಗೆ ಭಾರತಿ ಎಸ್. (97403 25093), ಅವೆನ್ ಡಿಸೋಜ (95351 58778), ರವಿಕಿರಣ್ ಆರ್. (91644 54243), ಸುಹಾಸ್ ಎಚ್.ವಿ. (81055 29594) ಅವರನ್ನು ಸಂಪರ್ಕಿಸಬಹುದು. ಸ್ಥಳ: ಸೇಂಟ್ ಜೋಸೆಫ್ಸ್ ಕಾಲೇಜು ಮೈದಾನ, ಲಾಲ್‌ಬಾಗ್ ರಸ್ತೆ   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.