ನ್ಯೂಯಾರ್ಕ್ (ರಾಯಿಟರ್ಸ್): ಸಾನಿಯಾ ಮಿರ್ಜಾ ಹಾಗೂ ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಇಲ್ಲಿ ನಡೆಯುತ್ತಿರುವ ಬಿಎನ್ಪಿ ಪಾರಿ ಬಾಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಎಂಟನೇ ಶ್ರೇಯಾಂಕ ಪಡೆದಿರುವ ಸಾನಿಯಾ ಹಾಗೂ ಕಾರಾ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 6–4, 6–1ರಲ್ಲಿ ರಷ್ಯಾದ ಎಕ್ತಾರಿನಾ ಮಕಾರೋವಾ ಹಾಗೂ ಎಲೆನಾ ವೆಸ್ನಿನಾ ಎದುರು ಜಯ ಗಳಿಸಿದರು.

ಒಂದು ಗಂಟೆ 11 ನಿಮಿಷ ನಡೆದ ಹೋರಾಟದಲ್ಲಿ ಭಾರತ–ಜಿಂಬಾಬ್ವೆ ಜೋಡಿ ಅಮೋಘ ಪ್ರದರ್ಶನ ನೀಡಿತು. ಉತ್ತಮ ಹೊಂದಾಣಿಕೆಯ ಆಟದ ಮೂಲಕ ರಷ್ಯಾದ ಆಟಗಾರ್ತಿ ಯರ ಮೇಲೆ ಒತ್ತಡ ಹೇರಿತು. ವಿಶೇಷವೆಂದರೆ ಎಕ್ತಾರಿನಾ ಹಾಗೂ ವೆಸ್ನಿನಾ ಈ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದರು. ಆದರೆ ಎದುರಾಗಿದ್ದು ಆಘಾತ.

ಸಾನಿಯಾ ಹಾಗೂ ಕಾರಾ ನಾಲ್ಕರ ಘಟ್ಟದ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಲೂಸಿ ಹ್ರಾಡೆಕಾ ಹಾಗೂ ಚೀನಾದ ಜೀ ಜೆಂಗ್ ಎದುರು ಪೈಪೋಟಿ ನಡೆಸಲಿದ್ದಾರೆ. ಆದರೆ ಲಿಯಾಂಡರ್ ಪೇಸ್ ಹಾಗೂ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಅವರು ಪುರುಷರ ವಿಭಾಗದ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಂಡರು. ಅವರು 3–6, 7–6, 4–10ರಲ್ಲಿ ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ಹಾಗೂ ಸ್ಟಾನಿಸ್ಲಾಸ್ ವಾವ್ರಿಂಕಾ ಎದುರು ಪರಾಭವಗೊಂಡರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ರೋಜರ್ ಫೆಡರರ್, ಸರ್ಬಿಯಾದ ನೊವಾಕ್ ಜೊಕೊವಿಚ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಫೆಡರರ್ 6–4, 6–4ರಲ್ಲಿ ಟಾಮಿ ಹಾಸ್ ಎದುರು ಗೆಲುವು ಸಾಧಿಸಿದರು.

ಜೊಕೊವಿಚ್ 1–6, 6–2, 6–3ರಲ್ಲಿ ಕ್ರೊವೇಷ್ಯಾದ ಮರಿನ್ ಸಿಲಿಕ್ ಎದುರು ಜಯ ಗಳಿಸಿದರು. ಆದರೆ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ವಾವ್ರಿಂಕಾ ಆಘಾತ ಅನುಭವಿಸಿದರು. ಅವರು 6–7, 6–4, 1–6ರಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಎದುರು ಸೋಲು ಕಂಡರು. ಬ್ರಿಟನ್ನ ಆ್ಯಂಡಿ ಮರ್ರೆ 6–4, 5–7, 3–6ರಲ್ಲಿ ಕೆನಡಾದ ಮಿಲೋಸ್ ರಾವೊನಿಕ್ ಎದುರು ಸೋತರು.

ಅಮೆರಿಕದ ಜಾನ್ ಇಸ್ನೇರ್ 7–6, 3–6, 6–3ರಲ್ಲಿ ಸ್ಪೇನ್ನ ಫರ್ನಾಂಡೊ ವಾರ್ಡೆಸ್ಕೊ ಎದುರು ಜಯಗಳಿಸಿದರು. ಫ್ರಾನ್ಸ್ನ ಜೂಲಿ ಯನ್ ಬೆನೆಟಿಯು 6–3, 7–6ರಲ್ಲಿ ಸ್ಪೇನ್ನ ಫೆಲಿಸಿಯಾನೊ ಲೋಪೆಜ್ಗೆ ಆಘಾತ ನೀಡಿದರು.

ರಾಡ್ವಾಂಸ್ಕೊಗೆ ಮುನ್ನಡೆ: ಪೋಲೆಂಡ್ನ ಅಗ್ನಿಸ್ಕಾ ರಾಡ್ವಾಂಸ್ಕಾ ಅವರು ಮಹಿಳೆಯರ ವಿಭಾಗದ ಸಿಂಗಲ್ಸ್ನಲ್ಲಿ ಸೆಮಿಫೈನಲ್ ತಲು ಪಿದ್ದಾರೆ. ಅವರು ಕ್ವಾರ್ಟರ್ ಫೈನಲ್ ನಲ್ಲಿ ಸರ್ಬಿಯಾದ ಜೆಲೆನಾ ಜಾಂಕೊ ವಿಕ್ ಎದುರು ಗೆದ್ದರು. ರುಮೇನಿಯಾದ ಸಿಮೊನಾ ಹಾಲೆಪ್ 6–2, 6–2ರಲ್ಲಿ ಆಸ್ಟ್ರೇಲಿಯಾದ ಕ್ಯಾಸಿ ಡೆಲಕ್ವಾ ಎದುರು ಜಯ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.