ಮೆಲ್ಬರ್ನ್ (ಪಿಟಿಐ): ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಅವರು ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು.

ಮೆಲ್ಬರ್ನ್ ಪಾರ್ಕ್ನ ಮಾರ್ಗರೆಟ್ ಕೋರ್ಟ್ ಅರೆನಾದಲ್ಲಿ ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೇಸ್- ಭೂಪತಿ 6-4, 6-4 ರಲ್ಲಿ ಫ್ರಾನ್ಸ್ನ ಮೈಕಲ್ ಲೋದ್ರಾ ಮತ್ತು ಸರ್ಬಿಯದ ನೆನಾದ್ ಜಿಮೊಂಜಿಕ್ ಅವರನ್ನು ಮಣಿಸಿದರು.

ಇದೇ ಮೊದಲ ಬಾರಿಗೆ ಜೊತೆಯಾಗಿ ಆಸ್ಟ್ರೇಲಿಯಾ ಓಪನ್ನಲ್ಲಿ ಚಾಂಪಿಯನ್ ಆಗಬೇಕೆಂಬ ಕನಸು ಕಂಡಿರುವ ಭಾರತದ ಜೋಡಿ 91 ನಿಮಿಷಗಳಲ್ಲಿ ಜಯ ಸಾಧಿಸಿತು. ಭಾರತದ ಅನುಭವಿ ಆಟಗಾರರು ನಾಲ್ಕರಘಟ್ಟದ ಪಂದ್ಯದಲ್ಲಿ ಕೆನಡಾದ ಡೇನಿಯಲ್ ನೆಸ್ಟರ್ ಮತ್ತು ಬೆಲಾರಸ್ನ ಮ್ಯಾಕ್ಸ್ ಮಿರ್ನಿ ಅವರ ಸವಾಲನ್ನು ಎದುರಿಸುವರು.

ದಿನದ ಮತ್ತೊಂದು ಎಂಟರಘಟ್ಟದ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ನೆಸ್ಟರ್- ಮಿರ್ನಿ ಅವರು 7-6, 6-3 ರಲ್ಲಿ ಪೋಲೆಂಡ್ನ ಮರಿಯುಸ್ ಫ್ರಿಸ್ಟೆನ್ಬರ್ಗ್- ಮಾರ್ಸಿನ್ ಮಟೋವ್ಸ್ಕಿ ವಿರುದ್ಧ ಜಯ ಪಡೆದರು.

ಮೂರನೇ ಶ್ರೇಯಾಂಕ ಹೊಂದಿರುವ ಪೇಸ್ ಮತ್ತು ಭೂಪತಿ ಪಂದ್ಯದ ವೇಳೆ ಅನಗತ್ಯ ತಪ್ಪು ಸಂಭವಿಸದಂತೆ ಎಚ್ಚರ ವಹಿಸಿದರು. ಭಾರತದ ಜೋಡಿ ಐದು ಅನಗತ್ಯ ತಪ್ಪುಗಳನ್ನೆಸಗಿದರೆ, ಎದುರಾಳಿಗಳು 13 ಬಾರಿ ಇಂತಹ ತಪ್ಪು ಮಾಡಿದರು. ಇದು ಕೊನೆಯಲ್ಲಿ ಫಲಿತಾಂಶದ ಮೇಲೆ ಪರಿಣಾಮ ಬೀರಿತು.
ಮೂರನೇ ಸುತ್ತಿಗೆ ಭೂಪತಿ ಜೋಡಿ: ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಆಟಗಾರರು ಮಿಶ್ರ ಫಲ ಅನುಭವಿಸಿದರು. ಮಹೇಶ್ ಭೂಪತಿ ಮತ್ತು ಆಸ್ಟ್ರೇಲಿಯದ ಅನಾಸ್ತಾಸಿಯಾ ರೋಡಿಯೊನೊವಾ ಎರಡನೇ ಸುತ್ತಿನ ಪಂದ್ಯದಲ್ಲಿ 6-3, 6-1 ರಲ್ಲಿ ಇಟಲಿಯ ಸಾರಾ ಎರಾನಿ ಮತ್ತು ಸ್ಪೇನ್ನ ಡೇವಿಡ್ ಮರೆರೊ ವಿರುದ್ಧ ಜಯ ಪಡೆದರು.

ಆದರೆ ಲಿಯಾಂಡರ್ ಪೇಸ್ ಮತ್ತು ಜಿಂಬಾಬ್ವೆಯ ಕಾರಾ ಬ್ಲಾಕ್ ಜೋಡಿ ನಿರಾಸೆ ಅನುಭವಿಸಿತು. ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಪೇಸ್- ಕಾರಾ 6-7, 6-7 ರಲ್ಲಿ ಚೈನೀಸ್ ತೈಪೆಯ ಯುಂಗ್ ಜಾನ್ ಚಾನ್ ಮತ್ತು ಆಸ್ಟ್ರೇಲಿಯಾದ ಪಾಲ್ ಹೆನ್ಲಿ ಎದುರು ಪರಾಭವಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.