ಪೆನಾಂಗ್ (ಐಎಎನ್ಎಸ್): ಭಾರತದ ಪಿ.ವಿ ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ ಮಲೇಷ್ಯಾ ಮಾಸ್ಟರ್ಸ್ ಗ್ರ್ಯಾಂಡ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ.

ಸ್ಪೈಸ್ ಅರೇನಾ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪೈಪೋಟಿಯಲ್ಲಿ ಸಿಂಧು 21–10, 21–10ರಲ್ಲಿ ನೇರ ಗೇಮ್ಗಳಿಂದ ಇಂಡೊನೇಷ್ಯಾದ ಲಿಂಡಾವೆನಿ ಫನೇತ್ರಿ ಅವರನ್ನು ಮಣಿಸಿದರು.

ಆರಂಭದಿಂದ ವೇಗವಾಗಿ ಪಾಯಿಂಟ್ಸ್ ಕಲೆ ಹಾಕಿದ ಸಿಂಧು 5–1ರಲ್ಲಿ ಮುನ್ನಡೆ ಪಡೆದುಕೊಂಡರು. ಬಳಿಕ ಫನೇತ್ರಿ 7–7ರಲ್ಲಿ ಸಮಬಲ ಸಾಧಿಸಿ ತಿರುಗೇಟು ನೀಡಿದರು. ಆದರೆ ಪಂದ್ಯದ ಅಂತಿಮ ಹಂತದವರೆಗೂ ಸಿಂಧು ಮುನ್ನಡೆಯನ್ನು ಕಾಯ್ದುಕೊಂಡು ಗೇಮ್ ಗೆದ್ದಕೊಂಡರು.

ಕೊರಿಯಾದ ಸುಂಗ್ ಜಿ ಹಯಯಾನ್ ಮತ್ತು ಐದನೇ ಶ್ರೇಯಾಂ ಕದ ಜಪಾನ್ನ ಸಯಾಕ ಸಟೊ ನಡುವೆ ಇನ್ನೊಂದು ಕ್ವಾರ್ಟರ್ ಫೈನಲ್ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ಪಡೆಯುವ ಆಟಗಾರ್ತಿ ಎದುರು ಸಿಂಧು ನಾಲ್ಕರ ಘಟ್ಟದ ಪಂದ್ಯ ಆಡಲಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶ್ರೀಕಾಂತ್ 21–15, 21–14ರಲ್ಲಿ ಚೀನಾದ ಹುವಾಂಗ್ ಯುಕ್ಸಿಯಾಂಗ್ ಎದುರು ಜಯ ದಾಖಲಿಸಿದರು. 33 ನಿಮಿಷ ಈ ಪಂದ್ಯ ನಡೆಯಿತು.

ಮೊದಲ ಗೇಮ್ನಲ್ಲಿ ಪ್ರಬಲ ಪೈಪೋಟಿ ಒಡ್ಡದೆ ಇಸ್ಕಂದರ್ ಭಾರತದ ಆಟಗಾರನಿಗೆ ಶರಣಾದರು. ಆದರೆ ಎರಡನೇ ಗೇಮ್ನಲ್ಲಿ ಚೀನಾದ ಆಟಗಾರ 8–4ರಲ್ಲಿ ಮುನ್ನಡೆ ಪಡೆದರು. ಬಳಿಕ ಶ್ರೀಕಾಂತ್ ಎಚ್ಚರಿಕೆಯ ಆಟದಿಂದ 14–15ರಲ್ಲಿ ಕಠಿಣ ಹೋರಾಟ ನಡೆಸಿದರು. ಅಂತಿಮ ಹಂತದಲ್ಲಿ ಮೇಲುಗೈ ಸಾಧಿಸಿದ ಶ್ರೀಕಾಂತ್ ಪಂದ್ಯ ಗೆದ್ದುಕೊಂಡರು.

ಶನಿವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ 9ನೇ ರ್ಯಾಂಕ್ನ ಆಟಗಾರ ಶ್ರೀಕಾಂತ್ ಮಲೇಷ್ಯಾದ ಇಸ್ಕಂದರ್ ಜುಲ್ಕರ್ಣಿಯನ್ ಜೈನುದ್ದೀನ್ ಸವಾಲು ಎದುರಿಸಲಿದ್ದಾರೆ. ಇಸ್ಕಂದರ್ ಎದುರು ಶ್ರೀಕಾಂತ್ ಸೈಯದ್ ಮೋದಿ ಗ್ರ್ಯಾಂಡ್ ಪ್ರೀ ಗೋಲ್ಡ್ ಟೂರ್ನಿಯಲ್ಲಿ ಗೆಲುವು ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.