ಮಕ್ಕಳಿಗೆ ಬಾಲ್ಯದಲ್ಲೇ ಅಂತರ್ರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಅವರನ್ನು ಮಾನಸಿಕ, ಶೈಕ್ಷಣಿಕ, ದೈಹಿಕವಾಗಿ ಸದೃಢಗೊಳಿಸುವ ಕಾರ್ಯದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ತೊಡಗಿಸಿಕೊಂಡಿವೆ. ಅಂತಹ ಶಾಲೆಗಳು ಬೆಂಗಳೂರಲ್ಲೂ ಇವೆ.

ಸಿಂಗಾಪುರ ಮೂಲದ ಎಟನ್ಹೌಸ್ ಸಮೂಹದ `ಸೆರ್ರಾ ಇಂಟರ್ನ್ಯಾಷನಲ್ ಪ್ರಿ- ಸ್ಕೂಲ್ಸ್~ ಅವುಗಳಲ್ಲೊಂದು. `ರೆಗ್ಗಿಯೊ ಎಮಿಲಿಯಾ~ ಎನ್ನುವ ಇಟಲಿಯ ತ್ವರಿತ ಶಿಕ್ಷಣ ಕಲಿಕಾ ಪದ್ಧತಿ ಅಳವಡಿಸಿಕೊಂಡಿದೆ ಈ ಶಾಲೆ.

`ರೆಗ್ಗಿಯೊ ಎಮಿಲಿಯಾ ಎನ್ನುವುದು ಉತ್ತರ ಇಟಲಿಯ ಒಂದು ಕಲಿಕಾ ವಿಧಾನ. ಮಕ್ಕಳು ಬಾಲ್ಯದಿಂದಲೇ ಉತ್ತಮ ಗುಣಮಟ್ಟದ ಶಿಕ್ಷಣವನ್ನು ತ್ವರಿತವಾಗಿ ಕಲಿಯಬೇಕು. ಇದಲ್ಲದೇ ಬಾಲ್ಯದಿಂದಲೇ ಪ್ರಶ್ನಿಸುವ ಗುಣವನ್ನು ಬೆಳಿಸಿಕೊಳ್ಳಬೇಕು. ಇದಕ್ಕೆ ಇಟಲಿಯ ರೆಗ್ಗಿಯೊ ಎಮಿಲಿಯಾ ಸೂಕ್ತ ವಿಧಾನ.

ಇದನ್ನೇ ನಮ್ಮ ಶಾಲೆಗಳಲ್ಲಿ ಅಳವಡಿಸಿಕೊಂಡಿದ್ದೇವೆ. ಅಮೆರಿಕ, ಬ್ರಿಟನ್, ಆಸ್ಟ್ರೇಲಿಯ, ನ್ಯೂಜಿಲೆಂಡ್ ಮತ್ತು ಕೆನಡಾಗಳಲ್ಲಿ ಈ ಶಿಕ್ಷಣ ವಿಧಾನ ಅನುಸರಿಸಲಾಗುತ್ತಿದೆ~ ಎನ್ನುತ್ತಾರೆ ಸೆರ್ರಾ ಇಂಟರ್ನ್ಯಾಷನಲ್ ಪ್ರಿ- ಸ್ಕೂಲ್ಸ್ ಅಧ್ಯಕ್ಷ ಅರುಣ್ ಅರೋರ.

ಈಗಾಗಲೇ ಎಚ್ಎಸ್ಆರ್ ಬಡಾವಣೆ, ಇಂದಿರಾನಗರ, ಮಹಾಲಕ್ಷ್ಮಿಪುರ, ಮಾರತ್ತಹಳ್ಳಿ ಮತ್ತು ಸಹಕಾರ ನಗರಗಳಲ್ಲಿ ಸೆರ್ರಾ ಪ್ರಿ- ಸ್ಕೂಲ್ಗಳಿವೆ.

ಅಂತರಾಷ್ಟ್ರೀಯ ಶೈಲಿಯ ತರಬೇತಿ ಪಡೆದ ಶಿಕ್ಷಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಮುಖ ನಗರಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಪ್ರಿ- ಸ್ಕೂಲ್ಗಳನ್ನು ತೆರೆಯುವ ಯೋಜನೆ ಇದೆ ಎಂದು ಅವರು ವಿವರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.