ಶನಿವಾರ, ಮೇ 8, 2021
27 °C

ಸೇತುವೆಗೆ ಅಪ್ಪಳಿಸಿದ ಕಾರು: ಇಬ್ಬರ ಸಾವು, 6 ಮಂದಿ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್.ನಗರ: ತಾಲ್ಲೂಕಿನ ಅರ್ಜುನ ಹಳ್ಳಿ ಬಳಿ ಓಮ್ನಿ ಕಾರೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟು, ಆರು ಮಂದಿ ಆಸ್ಪತ್ರೆ ಸೇರಿದ ಘಟನೆ ಬುಧವಾರ ಬೆಳಗಿನಜಾವ ನಡೆದಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ.ಹಾಸನದ ಪುಟ್ಟರಾಜು ಅವರ ಮಗ ಶಕ್ತಿಪ್ರಸಾದ್ (26) ಮತ್ತು ರಾಮಯ್ಯ ಅವರ ಮಗ ಶಿವಪ್ರಸಾದ್ (26) ಮೃತಪಟ್ಟವರು. ರೂಪೇಶ್ (26) ದೀಪಕ್ (25) ಅವರನ್ನು ಮೈಸೂರಿನ ವಿದ್ಯಾರಣ್ಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಸೇರಿಸಲಾಗಿದೆ. ಇನ್ನುಳಿದ ರಾಘವೇಂದ್ರ, ಶಶಿ, ಕಾಂತರಾಜು ಅವರು ಒಳ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಾರುತಿ ಓಮ್ನಿ ಕಾರಿನಲ್ಲಿ ಒಟ್ಟು ಎಂಟು ಯುವಕರು ಕುಶಾಲನಗರ ದಿಂದ ಕೆ.ಆರ್.ನಗರ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಬುಧವಾರ ಬೆಳಗಿನ ಜಾವ 3.30 ಕ್ಕೆ ತಾಲ್ಲೂಕಿನ ಅರ್ಜುನಹಳ್ಳಿ ಗೇಟ್ ಬಳಿ ಬರುತ್ತಿದ್ದಂತೆ ಅಲ್ಲಿಯೇ ಇದ್ದ ಸೇತುವೆಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕೆಲವರು ಕೈ ಹಾಗೂ ಕಾಲು ಕಳೆದುಕೊಂಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.