ಶನಿವಾರ, ಜೂನ್ 12, 2021
23 °C

ಸೇತುವೆಗೆ ರೂ 25 ಲಕ್ಷ ದೊರಕಿಸಿಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಬ್ರಹ್ಮಣ್ಯ: ಬೆಂಡೋಡಿ ಶೀರೂರು ಸೇತುವೆ ನಿರ್ಮಾಣಕ್ಕೆ  ರೂ 25 ಲಕ್ಷದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ಇದೀಗ  ಸರಕಾರದ ಮಟ್ಟದಲ್ಲಿದೆ. ಅದನ್ನು ಶೀಘ್ರ ಮಂಜೂರು ಮಾಡಿ ಸೇತುವೆ ನಿರ್ಮಿಸುವಂತೆ ಊರವರು ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದಾರೆ.ಬೆಂಡೋಡಿ ಪ್ರದೇಶಕ್ಕೆ ಶುಕ್ರವಾಋ ತಾ.ಪಂ. ಅಧ್ಯಕ್ಷ ಮುಳಿಯ ಕೇಶವ ಭಟ್ ಮತ್ತು  ಜಿ.ಪಂ. ಸದಸ್ಯ ಕೆ.ಎಸ್.ದೇವರಾಜ್ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಈ ವಿನಂತಿ ಮಾಡಿದರು.ಈ ಸಂದರ್ಭದಲ್ಲಿ ತಾ.ಪಂ. ಸದಸ್ಯೆ ತಾರಾ ಮಲ್ಲಾರ, ಹರಿಹರ ಗ್ರಾ.ಪಂ. ಅಧ್ಯಕ್ಷೆ ಬಿಂದು. ಪಿ.ಎಸ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಮಲ್ಲೇಸ್ವಾಮಿ, ತಾಲೂಕು ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ಜಿ.ಪಂ. ಎಇ ನಾರಾಯಣ ನಾಯ್ಕ, ಜೆಇ ಜನಾರ್ದನ, ಪಿ.ಡಿ.ಓ ವೆಂಕಟೇಶ್ ಇತರರು ಇದ್ದರು.ಶಾಲಾ ಎಸ್‌ಡಿಎಂಸಿ  ಅಧ್ಯಕ್ಷ ಶೇಖರಪ್ಪ ತಳವಾರು, ಗ್ರಾಮ ಅರಣ್ಯ ಸಮಿತಿ ಸದಸ್ಯರಾದ ದಿನೇಶ್ ಹಾಲೆಮಜಲು, ಊರ ಪ್ರಮುಖರಾದ ಪುರುಷೋತ್ತಮ ಅಂಬೆಕಲ್ಲು, ಭಟ್ಯ ಕೊರಗ, ರಾಘವ ಕೊರಗ, ಶಿವಣ್ಣ ಗೌಡ ಚೊಕ್ಕಾಡಿ, ವಿಶ್ವನಾಥ ಹರಿಹರ ಇತರರು ಇದ್ದರು.ಸ್ವಾಮೀಜಿ ಮನವಿ:  ಸುಳ್ಯ ತಾಲೂಕಿನ ಹಿಂದುಳಿದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಬೆಂಡೋಡಿ-ಶೀರೂರು ನಡುವೆ  ಸೇತುವೆ ಆವಶ್ಯಕವಾಗಿದೆ. ಇದಿಲ್ಲದಿರುವುದರಿಂದ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನ 15ಕಿ.ಮೀ ಸುತ್ತು ಬಳಸಿ ಸಾಗಬೇಕಾಗಿದೆ.

 

ಈ ಕಾರಣದಿಂದ ತಾವು ಅನುದಾನ ನೀಡುವ ಮೂಲಕ ಅತಿ ಶೀಘ್ರವಾಗಿ ಸೇತುವೆ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎಂದು ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಗ್ರಾಮೀಣಾಭಿವೃದ್ಧಿ ಮತ್ತು  ಪಂಚಾಯಿತಿರಾಜ್ ಸಚಿವ ಜಗದೀಶ ಶೆಟ್ಟರ್ ಅವರಲ್ಲಿ ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.