ಹಿರೇಕೆರೂರ: ತಾಲ್ಲೂಕಿನ ಜೋಗಿಹಳ್ಳಿ ಗ್ರಾಮದ ದೊಡ್ಡಕೆರೆ ಸೇತುವೆಯ ಒಂದು ಬದಿಯಲ್ಲಿನ ಗೋಡೆ ಉರುಳಿ ಬ್ದ್ದಿದು ಮೂರು ತಿಂಗಳಾಗಿದ್ದು, ಸಂಚಾ ರಕ್ಕೆ ಅಡಚಣೆಯಾಗಿದೆ. ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪಂಚಾಯತ್ರಾಜ್ ಎಂಜಿನಿ ಯರಿಂಗ್ ಇಲಾಖೆಗೆ ಸೇರಿರುವ ದೊಡ್ಡ ಕೆರೆ ಪಕ್ಕದಲ್ಲಿ ರೈತರು ತಮ್ಮ ಹೊಲಗಳಿಗೆ ತೆರಳಲು ನಿರ್ಮಿಸಿದ್ದ ಸೇತುವೆಯ ಒಂದು ಬದಿಯ ಗೋಡೆ ಕುಸಿದು ಬಿದ್ದಿದೆ. ಇದನ್ನು ದುರಸ್ತಿ ಮಾಡಿಸಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಉಪಯೋಗವಾಗಿಲ್ಲ.

ಮಳೆಗಾಲ ಆರಂಭವಾದರೆ ಓಡಾಡಲು ಬಾರ ದಂತಾಗಿ ರೈತರು ತೀವ್ರ ತೊಂದರೆ ಎದುರಿಸ ಬೇಕಾಗುತ್ತದೆ. ಕಾರಣ ಸೇತುವೆ ದುರಸ್ತಿಗೆ ತಕ್ಷಣ ಸೂಕ್ತ ಕ್ರಮ ಜರುಗಿಸಬೇಕು ಹಾಗೂ ಕೆರೆಯಲ್ಲಿ ಭರ್ತಿ ತುಂಬಿರುವ ಹೂಳು ತೆಗೆಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ದುರಸ್ತಿಗೆ ಕ್ರಮ ಕೈಗೊಳ್ಳದೇ ಹೋದರೆ ಪ್ರತಿಭಟನೆ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಗ್ರಾಮಸ್ಥರಾದ ಬಸಣ್ಣ ಬಣಕಾರ, ಶಿವಪುತ್ರಪ್ಪ ಬಿದರಿ, ಸುರೇಶ ತಳವಾರ, ಗದಿಗೆಪ್ಪ ತಳವಾರ, ಚಂದ್ರು ಬಣಕಾರ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.