ಸೋಮವಾರ, ಆಗಸ್ಟ್ 10, 2020
25 °C

ಸೇವಾಸದನದಲ್ಲಿ ಬೀಗದ ಕೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇವಾಸದನದಲ್ಲಿ ಬೀಗದ ಕೈ

ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘ: ಸೇವಾಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ. ಕಿರುನಾಟಕೋತ್ಸವ ಹಾಗೂ 90ರ ವಸಂತಕ್ಕೆ ಪದಾರ್ಪಣೆ ಮಾಡುತ್ತಿರುವ ಹಿರಿಯ ರಂಗಕರ್ಮಿ ಚನ್ನಬಸಯ್ಯ ಗುಬ್ಬಿ ಅವರಿಗೆ ಗೌರವಾರ್ಪಣ ಸಮಾರಂಭ. `ಬೀಗದ ಕೈ~ (ಮೌನ ನಾಟಕ) ನಾಟಕ ಪ್ರದರ್ಶನ. ನಿರ್ದೇಶನ- ಧನ್ವಂತ್ರಿ ಬಿ. ಎ. ಸಂಜೆ 5.15ಕ್ಕೆ.`ಬೆಂಗಾಳೂರ ನಿರ್ಮಾತೃ ಕೆಂಪೇಗೌಡ~ ನೃತ್ಯ ನಾಟಕ ಪ್ರದರ್ಶನ. ಸಾಹಿತ್ಯ- ದಿ. ಡಾ. ಎಸ್. ಕೆ. ಕರೀಂಖಾನ್, ರಂಗರೂಪ- ಆಂಜನೇಯ, ನೃತ್ಯ ಸಂಯೋಜನೆ- ಎನ್. ಕಿರಣ್ ಕುಮಾರಿ, ನಿರ್ದೇಶನ- ತುಮಕೂರು ಶಿವಶಂಕರ್, ರಾತ್ರಿ 7ಕ್ಕೆ. `ಗೌರವಾರ್ಪಣ ಸಮಾರಂಭ~. ಉದ್ಘಾಟನೆ- ಶಾಸಕ ಡಾ. ಅಶ್ವಥ್ ನಾರಾಯಣ್ ಸಿ. ಎನ್. ಅಧ್ಯಕ್ಷತೆ- ಬೆಂಗಳೂರು ಪಶ್ಚಿಮ ವಿಭಾಗ ಅಂಚೆ ಇಲಾಖೆ ಚೀಫ್ ಸೂಪರ್‌ರಿಂಟೆಂಡೆಂಟ್ ಸಣ್ಣನಾಯಕ್, ಅತಿಥಿಗಳು- ಬಿಬಿಎಂಪಿ ಸದಸ್ಯರಾದ ಮೋಹನ್‌ಕುಮಾರ್, ಜಿ. ಮಂಜುನಾಥರಾಜು. ಶನಿವಾರ ಸಂಜೆ 6.ಬೀಗದಕೈ - ಮೌನ ನಾಟಕಗಳು ಅತ್ಯಂತ ಕುತೂಹಲಕಾರಿಯಾದ ರಂಗ ಪ್ರಯೋಗಗಳು. ತನ್ನ ಪರಿಮಿತಿ ಸಾಧ್ಯತೆಗಳ ಒಳಗೆ ಮಾತಾಡುವ ನಾಟಕಗಳಿಗೆ ಈ ನಾಟಕಗಳು ಸ್ಪರ್ಧಿಯಾಗಿ ನಿಲ್ಲುತ್ತವೆ. ಇಲ್ಲಿ ಅಭಿನಯವೇ ಮುಖ್ಯ. ಒಂದು ರೀತಿಯಲ್ಲಿ ನಾಟಕಕಾರನೇ ನಿರ್ದೇಶಕ ಎನ್ನಬಹುದು. ಈ ನಾಟಕದಲ್ಲಿ ಸಾವಿನ ಭಯಾನಕತೆ, ಶ್ರಮದ ಮೌಲ್ಯ ಹಾಗೂ ಬಡತನದ ಭೀಕರತೆಯಿಂದ, ಆಟ, ಪಾಠಗಳಿಗೆ ತಿಲಾಂಜಲಿ ನೀಡಿ, ಹೊಟ್ಟೆಪಾಡಿಗಾಗಿ ದುಡಿಯುವ ಮಕ್ಕಳ ಕರುಣಾಜನಕ ಕಥೆ ಇದೆ. ಜೊತೆಗೆ ಮುಗ್ಧತೆ ಸಾಮಾಜಿಕ ಪ್ರೀತಿ, ವಾತ್ಸಲ್ಯಗಳಿಗೆ ಒತ್ತುಕೊಟ್ಟು ರಚಿಸಿರುವ ನಾಟಕ `ಬೀಗದ ಕೈ~.ಚನ್ನಬಸಯ್ಯ ಗುಬ್ಬಿ- ಆರು ದಶಕಗಳಿಗೂ ಹೆಚ್ಚುಕಾಲ ರಂಗಭೂಮಿಯಲ್ಲಿ ದುಡಿದಿರುವ ಇವರು ರಂಗಭೂಮಿಯ ಸರ್ವ ತಂಡಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ವೃತ್ತಿ- ಹವ್ಯಾಸಿ ತಂಡಗಳ ಮಧ್ಯೆ ಕೊಂಡಿಯಾಗಿದ್ದಾರೆ. ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.