ಶನಿವಾರ, ಫೆಬ್ರವರಿ 22, 2020
19 °C

ಸೈಕಲ್‌ ಸವಾರಿಗೆ ಭಾರಿ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೈಕಲ್‌ ಸವಾರಿಗೆ ಭಾರಿ ಬೆಂಬಲ

ಬೆಂಗಳೂರು: ಮುಂದಿನ ತಿಂಗಳು ಕೊನೆ ಭಾನುವಾರ ನಡೆಯಲಿರುವ ‘ಸೈಕಲ್‌ ದಿನ’ ಕಾರ್ಯಕ್ರಮಕ್ಕೆ ಬಿಬಿಎಂಪಿ ಎಲ್ಲ ಸದಸ್ಯರನ್ನು ಸೈಕಲ್‌ ಸವಾರಿಗೆ ಕರೆ­ತರಲು ಯತ್ನಿಸುತ್ತೇನೆ ಎಂದು ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಹೇಳಿದರು.

ಕಬ್ಬನ್‌ ಪಾರ್ಕ್‌ ಆವರಣದಲ್ಲಿ ಭಾನು­ವಾರ ಏರ್ಪಡಿಸಲಾಗಿದ್ದ ಸೈಕಲ್‌ ದಿನ ಕಾರ್ಯಕ್ರಮದಲ್ಲಿ ಹೊಸ ಸೈಕಲ್‌ ಸ್ಟ್ಯಾಂಡ್‌ ಉದ್ಘಾಟಿಸಿ ಅವರು ಮಾತ­ನಾಡಿದರು.

ಸೈಕಲ್‌ ಸವಾರಿಯನ್ನೂ ಮಾಡಿದ ಮೇಯರ್‌, ನಗರದಲ್ಲಿ ಸೈಕಲ್‌ಗಳು ಹೆಚ್ಚಿ ಇತರ ವಾಹನಗಳು ಕಡಿಮೆ ಆದಷ್ಟು ಸಂಚಾರ ಸಮಸ್ಯೆ ತಗ್ಗಲಿದೆ ಎಂದು ಅಭಿಪ್ರಾಯಪಟ್ಟರು.

ಸುಮಾರು 1,200 ಜನ ಸೈಕಲ್‌ ಸವಾರಿಯಲ್ಲಿ ಪಾಲ್ಗೊಂಡಿದ್ದರು. 5 ಕಿ.ಮೀ.ಯಷ್ಟು ದೂರ ಅವರು ಸೈಕಲ್‌ ಮೇಲೆ ಪ್ರಯಾಣ ಮಾಡಿದರು. ಕಬ್ಬನ್‌ ಪಾರ್ಕ್‌ ಮಾತ್ರವಲ್ಲದೆ ಕಸ್ತೂರಬಾ ರಸ್ತೆ, ನೃಪತುಂಗ ರಸ್ತೆ ಮತ್ತು ಹಡ್ಸನ್‌ ಸರ್ಕಲ್‌ಗಳಲ್ಲಿ ಸೈಕಲ್‌ ಮೆರವಣಿಗೆ ನಡೆಯಿತು.
ಸ್ಥಳದಲ್ಲಿ ನೂರು ಸೈಕಲ್‌ಗಳನ್ನು ಬಾಡಿಗೆಗೆ ನೀಡಲು ಇಡಲಾಗಿತ್ತು. ಎಲ್ಲ ನೂರು ಸೈಕಲ್‌ಗಳನ್ನು ಬಾಡಿಗೆಗೆ ಪಡೆಯಲಾಗಿತ್ತು.

ವೋಲ್ವೊ ಬಸ್‌ಗಳಲ್ಲಿ ಬೆಳಗಿನ 6ರಿಂದ 11ಗಂಟೆವರೆಗೆ ಸೈಕಲ್‌ಗಳನ್ನು ಒಯ್ಯಲು ಬಿಎಂಟಿಸಿ ಅನುಮತಿ ನೀಡಿತ್ತು. ನಗರದ ದೂರದ ಪ್ರದೇಶಗಳ ಜನ ತಮ್ಮ ಸೈಕಲ್‌ಗಳನ್ನು ವೋಲ್ವೊ ಬಸ್‌ಗಳಲ್ಲೇ ತಂದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಸೈಕಲ್‌ ಸವಾರರಿಗೆ ಅಗತ್ಯವಾದ ಸೌಲಭ್ಯ ಕಲ್ಪಿಸಿಕೊಡಲಾಗು­ತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದರು.

ಸೈಕಲ್‌ ಸವಾರಿ ಮಾಡಿಬಂದವರಿಗೆ ಕರ್ನಾಟಕ ಹಾಲು ಒಕ್ಕೂಟದಿಂದ ನಂದಿನಿ ಹಾಲಿನ ಆತಿಥ್ಯವಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)